ಮೌಢ್ಯ ಸಂಪ್ರದಾಯ: ಕಾಡುಪ್ರಾಣಿಗೆ ಚಿತ್ರಹಿಂಸೆ, ಹೆಚ್‌ಡಿ.ಕೋಟೆಯಲೊಂದು ವಿಚಿತ್ರ ಆಚರಣೆ

ಮೈಸೂರು: ಸಂಪ್ರದಾಯದ ಹೆಸರಿನಲ್ಲಿ ನರಿಯನ್ನು ಕಟ್ಟಿಹಾಕಿ ನಾಯಿಗಳಿಂದ ಕಚ್ಚಿಸಿ‌ ಹಿಂಸೆ ಮಾಡುವಂತ ವಿಚಿತ್ರ ಆಚರಣೆಯೊಂದು ಹೆಚ್‌ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಕಂಡು ಬಂದಿದೆ. ಇಲ್ಲಿ ದೇವರ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ. ಹುಲಿಕುರೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಈ ವಿಚಿತ್ರ ಆಚರಣೆ ಜನವರಿ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನರಿ-ನಾಯಿಗಳ ಕಾಳಗದಿಂದ ಒಳಿತಾಗುತ್ತೆ ಎಂಬುವುದು ಇಲ್ಲಿನ ನಂಬಿಕೆ. ಜಾತ್ರಾ ಮಹೋತ್ಸವಕ್ಕಾಗಿಯೇ ಕಾಡಿನಿಂದ ನರಿ ಹಿಡಿದು ತಂದು ಗ್ರಾಮಸ್ಥರು ಮೋಜಿನಾಟ ಆಡ್ತಾರೆ. ನರಿ ಬಾಯಿ […]

ಮೌಢ್ಯ ಸಂಪ್ರದಾಯ: ಕಾಡುಪ್ರಾಣಿಗೆ ಚಿತ್ರಹಿಂಸೆ, ಹೆಚ್‌ಡಿ.ಕೋಟೆಯಲೊಂದು ವಿಚಿತ್ರ ಆಚರಣೆ
Follow us
ಸಾಧು ಶ್ರೀನಾಥ್​
|

Updated on:Jan 31, 2020 | 12:02 PM

ಮೈಸೂರು: ಸಂಪ್ರದಾಯದ ಹೆಸರಿನಲ್ಲಿ ನರಿಯನ್ನು ಕಟ್ಟಿಹಾಕಿ ನಾಯಿಗಳಿಂದ ಕಚ್ಚಿಸಿ‌ ಹಿಂಸೆ ಮಾಡುವಂತ ವಿಚಿತ್ರ ಆಚರಣೆಯೊಂದು ಹೆಚ್‌ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಕಂಡು ಬಂದಿದೆ. ಇಲ್ಲಿ ದೇವರ ಹೆಸರಿನಲ್ಲಿ ಕಾಡುಪ್ರಾಣಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ.

ಹುಲಿಕುರೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಈ ವಿಚಿತ್ರ ಆಚರಣೆ ಜನವರಿ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನರಿ-ನಾಯಿಗಳ ಕಾಳಗದಿಂದ ಒಳಿತಾಗುತ್ತೆ ಎಂಬುವುದು ಇಲ್ಲಿನ ನಂಬಿಕೆ. ಜಾತ್ರಾ ಮಹೋತ್ಸವಕ್ಕಾಗಿಯೇ ಕಾಡಿನಿಂದ ನರಿ ಹಿಡಿದು ತಂದು ಗ್ರಾಮಸ್ಥರು ಮೋಜಿನಾಟ ಆಡ್ತಾರೆ. ನರಿ ಬಾಯಿ ಕಟ್ಟಿ ನಾಯಿಗಳಿಂದ ದಾಳಿ ಮಾಡಿಸ್ತಾರೆ. ಹುಲಿಕುರೆ ಹಾಗೂ ಹೆಬ್ಬಲಗುಪ್ಪೆ ಗ್ರಾಮದ ಅಕ್ಕಪಕ್ಕ ಗ್ರಾಮಗಳಲ್ಲಿ ತಲ ತಲಾಂತರದಿಂದಲೂ ಈ ಮೂಢನಂಬಿಕೆ ಜಾರಿಯಲ್ಲಿದೆ ಹಾಗೂ ಆಚರಣೆಯಲ್ಲಿದೆ.

Published On - 11:11 am, Fri, 31 January 20