ಆಪರೇಷನ್ ಕಮಲ: ಹಳ್ಳಿ ಹಕ್ಕಿ ವಿಶ್ವನಾಥ್ ಬುಕ್ ಬರೀತಾರಂತೆ
ಮೈಸೂರು: ಆಪರೇಷನ್ ಕಮಲ ಪುಸ್ತಕ ಬರೆಯಲು ಹೆಚ್.ವಿಶ್ವನಾಥ್ ಪ್ಲ್ಯಾನ್ ಮಾಡ್ತಿದ್ದಾರಂತೆ. ಸಮ್ಮಿಶ್ರ ಸರ್ಕಾರ ಪತನ ವೇಳೆ ಆದ ಬೆಳವಣಿಗೆ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖ ಮಾಡ್ತಾರಂತೆ. ಆಪರೇಷನ್ ಕಮಲದ ಹಿಂದೆ ಯಾರು ಇದ್ದರೆಂದು ತಿಳಿಸುವೆ. ಸಾಫ್ಟ್ ಲೀಡರ್‌ಗಳು, ಪ್ರಚಂಡ ಲೀಡರ್‌ಗಳೆಂದುಕೊಂಡಿದ್ದಾರೆ. ಎಲ್ಲಾ ವಿಚಾರವನ್ನು ಪುಸ್ತಕದ ಮೂಲಕ ಹೊರಗೆ ತರುತ್ತೇನೆ ಎಂದು ಮೈಸೂರಿನಲ್ಲಿ ಟಿವಿ9ಗೆ ಮಾಜಿ ಸಚಿವ H.ವಿಶ್ವನಾಥ್ ತಿಳಿಸಿದ್ದಾರೆ. ಆಪರೇಷನ್ ಕಮಲದ ಸತ್ಯ ತಿಳಿಸಲು ಪುಸ್ತಕ ಬರೆಯುತ್ತೇನೆ. ಈಗಾಗಲೇ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸಿದ್ದೇನೆ. ಅದಕ್ಕೆ ಒಂದು ರೂಪ […]
ಮೈಸೂರು: ಆಪರೇಷನ್ ಕಮಲ ಪುಸ್ತಕ ಬರೆಯಲು ಹೆಚ್.ವಿಶ್ವನಾಥ್ ಪ್ಲ್ಯಾನ್ ಮಾಡ್ತಿದ್ದಾರಂತೆ. ಸಮ್ಮಿಶ್ರ ಸರ್ಕಾರ ಪತನ ವೇಳೆ ಆದ ಬೆಳವಣಿಗೆ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖ ಮಾಡ್ತಾರಂತೆ. ಆಪರೇಷನ್ ಕಮಲದ ಹಿಂದೆ ಯಾರು ಇದ್ದರೆಂದು ತಿಳಿಸುವೆ. ಸಾಫ್ಟ್ ಲೀಡರ್‌ಗಳು, ಪ್ರಚಂಡ ಲೀಡರ್‌ಗಳೆಂದುಕೊಂಡಿದ್ದಾರೆ. ಎಲ್ಲಾ ವಿಚಾರವನ್ನು ಪುಸ್ತಕದ ಮೂಲಕ ಹೊರಗೆ ತರುತ್ತೇನೆ ಎಂದು ಮೈಸೂರಿನಲ್ಲಿ ಟಿವಿ9ಗೆ ಮಾಜಿ ಸಚಿವ H.ವಿಶ್ವನಾಥ್ ತಿಳಿಸಿದ್ದಾರೆ.
ಆಪರೇಷನ್ ಕಮಲದ ಸತ್ಯ ತಿಳಿಸಲು ಪುಸ್ತಕ ಬರೆಯುತ್ತೇನೆ. ಈಗಾಗಲೇ ಪುಸ್ತಕದಲ್ಲಿ ಎಲ್ಲವನ್ನೂ ದಾಖಲಿಸಿದ್ದೇನೆ. ಅದಕ್ಕೆ ಒಂದು ರೂಪ ಕೊಡುವುದು ಮಾತ್ರ ಬಾಕಿ ಇದೆ. ಅಂದಿನ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನವರೂ ಇದ್ದಾರೆ. ಮುಂಬೈಗೆ ಹೋಗಿದ್ದು, ಕೋಲ್ಕತ್ತಾಗೆ ಹೋಗಿದ್ದೂ ಇಲ್ಲವು ಈ ಪುಸ್ತಕದಲ್ಲಿ ದಾಖಲಿಸುವೆ. ನಾವು ಮಾರಾಟವಾಗಿಲ್ಲ. ಆಪರೇಷನ್ ಕಮಲ ಬೆಳವಣಿಗೆಯ ವಿಶ್ಲೇಷಣೆ ಸರಿಯಾಗಿ ಆಗಲಿಲ್ಲ. ಜನರಲ್ಲಿ ಕೌತುಕ ಸಂಶಯಗಳು ಉಳಿದಿವೆ. ಅದನ್ನು ಜನರಿಗೆ ತಿಳಿಸಬೇಕು ಅದಕ್ಕೆ ಈ ಪುಸ್ತಕ ಬರೆಯಲು ಮುಂದಾಗಿದ್ದೇನೆ. ಇದು ಮಾರಾಟವಲ್ಲ ಹೋರಾಟ. ಸದ್ಯದಲ್ಲೇ ಈ ಎಲ್ಲಾ ಮಾಹಿತಿ ಪುಸ್ತಕ ರೂಪದಲ್ಲಿ ಹೊರ ಬರಲಿದೆ ಎಂದರು.