ನಿಗೂಢ ಶಬ್ದ, ಭೂ ಕಂಪನ: ವಿದ್ಯುತ್​ ಸ್ಥಾವರ, ಆಲಮಟ್ಟಿ ಡ್ಯಾಂ ನಡುವಿನ ಗ್ರಾಮಸ್ಥರು ಹೈರಾಣ

ವಿಜಯಪುರ: ಭೂಮಿಯಿಂದ ನಿಗೂಢ ಶಬ್ದ ಹಾಗೂ ಕಂಪನದ ಅನುಭವವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಗ್ರಾಮಗಳ ನಿವಾಸಿಗಳು ಭೂಕಂಪದ ಆತಂಕದಲ್ಲಿದ್ದಾರೆ. ತಾಲೂಕಿನ ಕೂಡಗಿ, ಮಲಘಾಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆಲವು ದಿನಗಳಿಂದ ಈ ರೀತಿಯ ಶಬ್ದ ಕೇಳಿಬಂದಿದೆ ಎಂದು ಹೇಳಲಾಗಿದೆ. ನಿಗೂಢ ಶಬ್ದ ಮತ್ತು ಕಂಪನದಿಂದ ಗ್ರಾಮಸ್ಥರ ಮನೆ ಗೋಡೆಗಳು ಬಿರುಕುಬಿಟ್ಟಿರುವುದು ಸಹ ಕಂಡುಬಂದಿದೆ. ಸತತ ಭೂ ಕಂಪನದಿಂದ ಕೂಡಗಿ ಗ್ರಾಮಸ್ಥರು ಭೂಕಂಪದ ಭೀತಿಯಲ್ಲಿದ್ದಾರೆ. ಅಂದ ಹಾಗೆ, ಇವೆಲ್ಲಾ ಗ್ರಾಮಗಳು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಮತ್ತು […]

ನಿಗೂಢ ಶಬ್ದ, ಭೂ ಕಂಪನ: ವಿದ್ಯುತ್​ ಸ್ಥಾವರ, ಆಲಮಟ್ಟಿ ಡ್ಯಾಂ ನಡುವಿನ ಗ್ರಾಮಸ್ಥರು ಹೈರಾಣ
Edited By:

Updated on: Oct 28, 2020 | 11:56 AM

ವಿಜಯಪುರ: ಭೂಮಿಯಿಂದ ನಿಗೂಢ ಶಬ್ದ ಹಾಗೂ ಕಂಪನದ ಅನುಭವವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಗ್ರಾಮಗಳ ನಿವಾಸಿಗಳು ಭೂಕಂಪದ ಆತಂಕದಲ್ಲಿದ್ದಾರೆ. ತಾಲೂಕಿನ ಕೂಡಗಿ, ಮಲಘಾಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೆಲವು ದಿನಗಳಿಂದ ಈ ರೀತಿಯ ಶಬ್ದ ಕೇಳಿಬಂದಿದೆ ಎಂದು ಹೇಳಲಾಗಿದೆ.

ನಿಗೂಢ ಶಬ್ದ ಮತ್ತು ಕಂಪನದಿಂದ ಗ್ರಾಮಸ್ಥರ ಮನೆ ಗೋಡೆಗಳು ಬಿರುಕುಬಿಟ್ಟಿರುವುದು ಸಹ ಕಂಡುಬಂದಿದೆ. ಸತತ ಭೂ ಕಂಪನದಿಂದ ಕೂಡಗಿ ಗ್ರಾಮಸ್ಥರು ಭೂಕಂಪದ ಭೀತಿಯಲ್ಲಿದ್ದಾರೆ.

ಅಂದ ಹಾಗೆ, ಇವೆಲ್ಲಾ ಗ್ರಾಮಗಳು ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಮತ್ತು ಆಲಮಟ್ಟಿ ಡ್ಯಾಂ ಪಕ್ಕದಲ್ಲಿವೆ. ಹೀಗಾಗಿ, ಇಲ್ಲಿ ಭೂಕಂಪವಾದರೆ ಭಾರಿ ಹಾನಿಯಾಗುವ ಸಾಧ್ಯತೆಯಿಂದ ಜನರು ಭಯಭೀತರಾಗಿದ್ದಾರೆ. ಅಧಿಕಾರಿಗಳು ಹಾಗೂ ಜಿಲ್ಲಾಡಳಿತವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.