ಪ್ರಾಂಶುಪಾಲರ ಕಿರುಕುಳ ತಾಳಲಾರದೆ ಕೊಲೆ; ಸುಪಾರಿ ಕೊಟ್ಟಿದ್ದ ಸಹ ಶಿಕ್ಷಕ, ಹಂತಕರು ಅರೆಸ್ಟ್
ಮೈಸೂರು: ಸಂಸ್ಕೃತ ಶಾಲೆಯ ಪ್ರಾಂಶುಪಾಲರನ್ನು ಹತ್ಯೆಗೈದಿದ್ದ ಸುಪಾರಿ ಕಿಲ್ಲರ್ಸ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಹಂತಕರನ್ನು ನಾಗೇಶ್ (37), ನಿರಂಜನ್ (22), ಸಿದ್ದರಾಜು (54), ವಿಶ್ವನಾಥ್ (52) ಹಾಗೂ ಪರಶಿವ (55) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ. ಸೆಪ್ಟಂಬರ್ 29ರಂದು ಪ್ರಾಂಶುಪಾಲ ಪರಶಿವಮೂರ್ತಿ ಎಂಬುವವರ ಹತ್ಯೆಯಾಗಿತ್ತು. […]

ಮೈಸೂರು: ಸಂಸ್ಕೃತ ಶಾಲೆಯ ಪ್ರಾಂಶುಪಾಲರನ್ನು ಹತ್ಯೆಗೈದಿದ್ದ ಸುಪಾರಿ ಕಿಲ್ಲರ್ಸ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಹಂತಕರನ್ನು ನಾಗೇಶ್ (37), ನಿರಂಜನ್ (22), ಸಿದ್ದರಾಜು (54), ವಿಶ್ವನಾಥ್ (52) ಹಾಗೂ ಪರಶಿವ (55) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 55 ಸಾವಿರ ನಗದು, ನಾಲ್ಕು ದ್ವಿಚಕ್ರ ವಾಹನ, ಟಾಟಾ ಏಸ್ ಗೂಡ್ಸ್ ವಾಹನ, 8 ಮೊಬೈಲ್ ಫೋನ್ ಮತ್ತು 2 ಚಾಕುಗಳನ್ನು ವಶಕ್ಕೆ ಪಡೆಯಲಾಗಿದೆ.
ಸೆಪ್ಟಂಬರ್ 29ರಂದು ಪ್ರಾಂಶುಪಾಲ ಪರಶಿವಮೂರ್ತಿ ಎಂಬುವವರ ಹತ್ಯೆಯಾಗಿತ್ತು. ಸಂಸ್ಕೃತ ಶಾಲೆಯಲ್ಲಿ ಪ್ರಾಂಶುಪಾಲರಾದ ಪರಶಿವಮೂರ್ತಿ ಸಹ ಶಿಕ್ಷಕ ಪರಶಿವ ಎಂಬಾತನಿಗೆ ಕಿರುಕುಳ ನೀಡುತ್ತಿದ್ದರಂತೆ. ಹಣಕ್ಕಾಗಿ ಒತ್ತಾಯಯಿಟ್ಟ ಪರಶಿವಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದನೆ ಸಹ ಮಾಡುತ್ತಿದ್ದರು ಎಂದು ಪರಶಿವ ಅರೋಪಿಸಿದ್ದಾನೆ.
ಅವರ ಕಿರುಕುಳಕ್ಕೆ ಬೇಸತ್ತು ಪರಶಿವ ಪ್ರಾಂಶುಪಾಲರ ಕೊಲೆಗೆ ಸುಪಾರಿ ಕೊಟ್ಟಿದ್ದನಂತೆ. ಪರಶಿವಮೂರ್ತಿ ಮನೆಯಲ್ಲಿ ಒಂಟಿಯಾಗಿದ್ದಾಗ ಮನೆಗೆ ನುಗ್ಗಿದ ಸುಪಾರಿ ಹಂತಕರು ಕೊಲೆಗೈದು ಪರಾರಿಯಾಗಿದ್ದರು. ನಿವೇದಿತಾ ನಗರದ ಪ್ರಾಂಶುಪಾಲರ ನಿವಾಸದಲ್ಲಿ ಕೊಲೆ ಪ್ರಕರಣ ನಡೆದಿತ್ತು.
Published On - 10:56 am, Wed, 28 October 20