ಈ ಮಹಿಳೆ ಗೋಡೆಗೆ ಬೆರಣಿ ಎಸೆಯುವ ಶೈಲಿ ನೋಡಿದ್ರೆ ಬಾಸ್ಕೆಟ್​ಬಾಲ್ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ!

Trending: ಈ ವಿಡಿಯೋದಲ್ಲಿ ಕಾಣುವ ಮಹಿಳೆ ಪಕ್ಕಾ ಭಾರತದ ಬಾಸ್ಕೆಟ್ ಬಾಲ್ ತಂಡದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ಅಷ್ಟು ಕುಶಲತೆಯಿಂದ ಗೋಡೆಗೆ ಸಗಣಿಯ ಬೆರಣಿಗಳನ್ನು ಎಸೆಯುತ್ತಿದ್ದಾರೆ ಮತ್ತು ಪ್ರತಿ ಸಗಣಿಯ ಬೆರಣಿಯೂ ಗೋಡೆಯ ಖಾಲಿ ಜಾಗದಲ್ಲೇ ಕುಳಿತುಕೊಳ್ಳುತ್ತಿದೆ.

ಈ ಮಹಿಳೆ ಗೋಡೆಗೆ ಬೆರಣಿ ಎಸೆಯುವ ಶೈಲಿ ನೋಡಿದ್ರೆ ಬಾಸ್ಕೆಟ್​ಬಾಲ್ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ!
ಮಹಿಳೆ ಸಗಣಿ ಬೆರಣಿ ಎಸೆಯುತ್ತಿರುವ ದೃಶ್ಯ
Edited By:

Updated on: Mar 09, 2021 | 2:59 PM

ಕೌಶಲ್ಯ ಯಾರಲ್ಲಿರುತ್ತೆ, ಯಾವ ಕ್ಷೇತ್ರದಲ್ಲಿ ಇರುತ್ತೆ ಎಂದು ಯಾರೂ ಹೇಳಲಾಗದು. ನೀವು ಎಂತೆಂಥವರನ್ನೋ ನೋಡಿರಬಹುದು. ಆದರೆ, ಇಲ್ಲೋರ್ವ ಮಹಿಳೆಯಿದ್ದಾರೆ. ಅವರ ಕೌಶಲ್ಯ ಇರುವ ಕ್ಷೇತ್ರ ಯಾವುದು ಎಂದು ನೀವು ಕನಸಲ್ಲೂ ಊಹೆ ಮಾಡಲಾಗದು. ಅಬ್ಬಾ! ಯಾರೀಕೆ, ಯಾವುದರಲ್ಲಿ ಅಷ್ಟು ಕೌಶಲ್ಯ ಪಡೆದಿದ್ದಾರೆ ಎಂದು ಯೋಚಿಸಿದಿರಾ? ಈ ಸ್ಟೋರಿ ನೋಡಿ.

ಈ ವಿಡಿಯೋದಲ್ಲಿ ಕಾಣುವ ಮಹಿಳೆ ಪಕ್ಕಾ ಭಾರತದ ಬಾಸ್ಕೆಟ್ ಬಾಲ್ ತಂಡದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ಅಷ್ಟು ಕುಶಲತೆಯಿಂದ ಗೋಡೆಗೆ ಸಗಣಿಯ ಬೆರಣಿಗಳನ್ನು ಎಸೆಯುತ್ತಿದ್ದಾರೆ ಮತ್ತು ಪ್ರತಿ ಸಗಣಿಯ ಬೆರಣಿಯೂ ಗೋಡೆಯ ಖಾಲಿ ಜಾಗದಲ್ಲೇ ಕುಳಿತುಕೊಳ್ಳುತ್ತಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಎಂಬುವವರು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದು, ಭಾರತದ ಬಾಸ್ಕೆಟ್ ಬಾಲ್ ತಂಡ ಈ ಮಹಿಳೆಗಾಗಿ ಇನ್ನೂ ಹುಡುಕಾಟ ಮುಂದುವರೆಸಿದೆ ಎಂದು ಕಚಗುಳಿ ಮೂಡಿಸುವ ವಾಕ್ಯಗಳನ್ನು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಜಾಲತಾಣವೊಂದು ವರದಿ ಮಾಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ಸಖತ್ ಸುದ್ದಿ ಮಾಡಿದೆ. ಸುಮಾರು 53 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಯನ್ನು ಕಂಡು ಮುನ್ನುಗ್ಗುತ್ತಿದೆ.

ಇದನ್ನೂ ಓದಿ: Viral Video: ಅಂಗಡಿಯವನಿಂದ ಧಮ್ಕಿ: ಸಾರ್ವಜನಿಕವಾಗಿ ಪ್ಯಾಂಟಿಯನ್ನೇ ತೆಗೆದು ಮಾಸ್ಕ್​ ಮಾಡಿಕೊಂಡ ಮಹಿಳೆ

Viral Video: ಕೋತಿ ತರಕಾರಿ ಕತ್ತರಿಸುವ ಚೆಂದ..; ಮಹಿಳೆಗೆ ಸಹಾಯ ಮಾಡುವ ಮಂಗಕ್ಕೆ ಮನಸೋತ ನೆಟ್ಟಿಗರು !