Maitri Setu: ಭಾರತ-ಬಾಂಗ್ಲಾ ನಡುವಣ ‘ಮೈತ್ರಿ ಸೇತು’ ಸಂಪರ್ಕ ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಭಾರತ-ಬಾಂಗ್ಲಾದೇಶ ಸಂಪರ್ಕಿಸುವ ಮೈತ್ರಿ ಸೇತು, 1.9 ಕಿ.ಮೀ. ಉದ್ದವಿದೆ. ಸೇತುವೆ ಭಾರತದ ಸಬ್ರೂಮ್​ನಿಂದ ಬಾಂಗ್ಲಾದೇಶದ ರಾಮ್​ಘರ್ ಸಂಪರ್ಕಿಸಲಿದೆ. ಈ ಸೇತುವೆಯ ಮೂಲಕ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ವ್ಯಾಪಾರ, ಜನಸಂಪರ್ಕ ಹೆಚ್ಚಲಿದೆ.

Maitri Setu: ಭಾರತ-ಬಾಂಗ್ಲಾ ನಡುವಣ ‘ಮೈತ್ರಿ ಸೇತು’ ಸಂಪರ್ಕ ಸೇತುವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ganapathi bhat

Updated on:Apr 06, 2022 | 7:19 PM

ದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಫೆನಿ ನದಿಯ ಮೇಲೆ ಕಟ್ಟಲಾಗಿರುವ ಸೇತುವೆಯನ್ನು (Maitri Setu) ಇಂದು (ಮಾರ್ಚ್ 9) ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಭಾರತ ಹಾಗೂ ನೆರೆಯ ಬಾಂಗ್ಲಾದೇಶದ ನಡುವೆ ಕಟ್ಟಲಾಗಿರುವ ಈ ಸೇತುವೆಯನ್ನು ‘ಮೈತ್ರಿ ಸೇತು’ ಎಂದು ಹೆಸರಿಸಲಾಗಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಪರ್ಕ ಬಲಪಡಿಸಲು, ನೆರೆಯ ದೇಶವನ್ನು ಪ್ರೋತ್ಸಾಹಿಸಲು, ವಿಶೇಷವಾಗಿ ಭಾರತದ ಈಶಾನ್ಯ ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಈ ಕಾರ್ಯಕ್ರಮ ನಿಮಿತ್ತವಾಗಿದೆ ಎಂದು ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಹೇಳಿದ್ದಾರೆ. ಸೇತುವೆಯ ಉದ್ಘಾಟನೆಯ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.

‘ಮೈತ್ರಿ ಸೇತು’ ಎಂಬ ಹೆಸರು ಉಭಯ ದೇಶಗಳ ಸ್ನೇಹ ಸಂಬಂಧದ ಚಿಹ್ನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸೇತುವೆಯ ನಿರ್ಮಾಣ ಜವಾಬ್ದಾರಿಯನ್ನು National Highways & Infrastructure Development Corporation Ltd ವಹಿಸಿತ್ತು. ಸುಮಾರು 133 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿತ್ತು ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಮೈತ್ರಿ ಸೇತು ವಿಶೇಷವೇನು? ಭಾರತ-ಬಾಂಗ್ಲಾದೇಶ ಸಂಪರ್ಕಿಸುವ ಮೈತ್ರಿ ಸೇತು, 1.9 ಕಿ.ಮೀ. ಉದ್ದವಿದೆ. ಸೇತುವೆ ಭಾರತದ ಸಬ್ರೂಮ್​ನಿಂದ ಬಾಂಗ್ಲಾದೇಶದ ರಾಮ್​ಘರ್ ಸಂಪರ್ಕಿಸಲಿದೆ. ಈ ಸೇತುವೆಯ ಮೂಲಕ, ಭಾರತ ಹಾಗೂ ಬಾಂಗ್ಲಾದೇಶ ನಡುವೆ ವ್ಯಾಪಾರ, ಜನಸಂಪರ್ಕ ಹೆಚ್ಚಲಿದೆ. ಸರಕು ಹಾಗೂ ಪ್ರಯಾಣಿಕರ ಸಂಪರ್ಕಕ್ಕೆ ಸೇತುವೆ ಸಹಕಾರಿಯಾಗಲಿದೆ. ಹೊಸ ಮಾರುಕಟ್ಟೆ ಅವಕಾಶಗಳು, ಈಶಾನ್ಯ ರಾಜ್ಯಗಳ ಉತ್ಪನ್ನಗಳಿಗೆ ಮಾರಾಟ ಅವಕಾಶ, ಸರಕು ಸಾಗಾಟವೂ ಸುಲಭ ಸಾಧ್ಯವಾಗಲಿದೆ.

ಈವರೆಗೆ ಹಿನ್ನೆಲೆಯಲ್ಲೇ ಉಳಿದಿದ್ದ ತ್ರಿಪುರಾ ರಾಜ್ಯ, ವ್ಯಾಪಾರ-ವಹಿವಾಟು ನಡೆಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಹೊಸ ಕೈಗಾರಿಕೆಗಳಿಗೆ ಮತ್ತು ಬಂಡವಾಳಕ್ಕೆ ಅವಕಾಶವೂ ಇದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸೇತುವೆಯ ಉದ್ಘಾಟನೆಯ ಮೂಲಕ, ಈಶಾನ್ಯ ರಾಜ್ಯ ತ್ರಿಪುರಾ ‘ಈಶಾನ್ಯ ಭಾಗದ ಹೆಬ್ಬಾಗಿಲು’ (Gateway of North East) ಆಗಲಿದೆ. ಅಲ್ಲಿಂದ ಬಾಂಗ್ಲಾದೇಶದ ಚಿತ್ತಗಾಂವ್ ಬಂದರಿಗೆ ಕೇವಲ 80 ಕಿ.ಮೀ. ಅಂತರವಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಸಬ್ರೂಮ್​ನಲ್ಲಿ ಚೆಕ್ ಪೋಸ್ಟ್​ಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಇದನ್ನೂ ಓದಿ: Womens Day 2021: ಇಂದು ಮಹಿಳಾ ಉದ್ಯಮಿಗಳಿಂದ ಭರ್ಜರಿ ಶಾಪಿಂಗ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ..

ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ

Published On - 2:07 pm, Tue, 9 March 21