Women’s Day 2021: ಇಂದು ಮಹಿಳಾ ಉದ್ಯಮಿಗಳಿಂದ ಭರ್ಜರಿ ಶಾಪಿಂಗ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ..

ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದ ಮಹಿಳೆಯರು ಕೈಯಲ್ಲೇ ತಯಾರಿಸಿದ ಸೆಣಬಿನ ಫೈಲ್​ ಫೋಲ್ಡರ್​ ತುಂಬ ಚೆನ್ನಾಗಿದೆ. ನೀವೂ ಎಲ್ಲರೂ ಇದನ್ನು ಉಪಯೋಗಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Women's Day 2021: ಇಂದು ಮಹಿಳಾ ಉದ್ಯಮಿಗಳಿಂದ ಭರ್ಜರಿ ಶಾಪಿಂಗ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ..
ಪ್ರಧಾನಿ ನರೇಂದ್ರ ಮೋದಿ
Follow us
Lakshmi Hegde
|

Updated on: Mar 08, 2021 | 8:06 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಕ್ಯಾಬಿನೆಟ್​​ನಲ್ಲಿ ಕೂಡ ಮಹಿಳೆಯರಿಗೆ ಪ್ರಮುಖ ಇಲಾಖೆಗಳು ಸಿಕ್ಕಿದ್ದನ್ನು ನಾವು ನೋಡಿದ್ದೇವೆ.. ಹಾಗೇ ಅವರು ಮಹಿಳಾ ದಿನಾಚರಣೆಗೂ ವಿಶೇಷ ಪ್ರಾಶಸ್ತ್ಯ ನೀಡುತ್ತ ಬಂದಿದ್ದಾರೆ. ಕಳೆದ ಬಾರಿ ಮಹಿಳಾ ದಿನಾಚರಣೆಯಂದು ತಮ್ಮ ಸಾಮಾಜಿಕ ಜಾಲತಾಣಗಳನ್ನು ಮಹಿಳಾ ಸಾಧಕಿಯರಿಗಾಗಿ ಬಿಟ್ಟುಕೊಟ್ಟಿದ್ದರು. ಆಯ್ದ ಸಾಧಕಿಯರ ಜೀವನಗಾಥೆಯನ್ನು ಹಂಚಿಕೊಳ್ಳಲು ಮೋದಿಯವರು ಅವಕಾಶ ಮಾಡಿಕೊಟ್ಟಿದ್ದರು. ಈ ಬಾರಿ ಬೆಳಗ್ಗೆಯೇ ಮಹಿಳಾ ದಿನಾಚರಣೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿಯವರು, ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮಹಿಳೆಯರು ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ್ದಾರೆ. ಹಾಗೇ, ಮಹಿಳಾ ಉದ್ಯಮಗಳ ಉತ್ಪನ್ನಗಳನ್ನು ಖರೀದಿಸಿದ್ದಾರೆ.

ಭಾರತದ ಆತ್ಮನಿರ್ಭರದ ದಾರಿಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯಮಕ್ಕೆ ಹೆಚ್ಚೆಚ್ಚು ಪ್ರಾಶಸ್ತ್ಯ ಸಿಗಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ತಾವು ಇಂದು ಖರೀದಿಸಿದ ಮಹಿಳಾ ಉದ್ಯಮಗಳ ಉತ್ಪನ್ನಗಳ ಬಗ್ಗೆ ತಿಳಿಸಿದ್ದಾರೆ. ತಮಿಳುನಾಡಿನ ತೋಡಾ ಬುಡಕಟ್ಟು ಜನಾಂಗದ ಮಹಿಳೆಯರು ಕೈಯಲ್ಲೇ ಕಸೂತಿ ಮಾಡಿದ ಶಾಲುನ್ನು ನಾನು ಇಂದು ಖರೀದಿಸಿದೆ. ತುಂಬ ಅದ್ಭುತವಾಗಿದೆ.. ಎಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಣ್ಣ ಮತ್ತು ಬುಡಕಟ್ಟು ಜನಾಂಗದವರ ಕ್ರಿಯಾಶೀಲತೆಯನ್ನು ಒಳಗೊಂಡ ಗೋಂಡ್ ಪೇಪರ್​ ಪೇಂಟಿಂಗ್​ನ್ನು ಖರೀದಿಸಿದ್ದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನಾಗಾಲ್ಯಾಂಡ್​ನ ಮಹಿಳೆಯ ಸೃಜನಶೀಲತೆಯನ್ನು ತೋರಿಸುವ ಶಾಲ್​, ಖಾದಿ ಕಾಟನ್​ ಮಧುಬನಿ ಪೇಂಟಿಂಗ್​ ಇರುವ ಸ್ಟೋಲನ್​ಗಳನ್ನೂ ಇಂದು ಕೊಂಡಿದ್ದಾಗಿ ಮೋದಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಪಶ್ಚಿಮ ಬಂಗಾಳದ ಬುಡಕಟ್ಟು ಜನಾಂಗದ ಮಹಿಳೆಯರು ಕೈಯಲ್ಲೇ ತಯಾರಿಸಿದ ಸೆಣಬಿನ ಫೈಲ್​ ಫೋಲ್ಡರ್​ ತುಂಬ ಚೆನ್ನಾಗಿದೆ. ನೀವೂ ಎಲ್ಲರೂ ಇದನ್ನು ಉಪಯೋಗಿಸಬಹುದು ಎಂದು ಹೇಳಿದ ನರೇಂದ್ರ ಮೋದಿ, ನನಗೆ ಗಮುಸಾ ಧರಿಸಲು ತುಂಬ ಇಷ್ಟ. ಇದು ಆರಾಮದಾಯಕವಾಗಿರುತ್ತದೆ. ಹಾಗಾಗಿ ಅಸ್ಸಾಂನ ಕಾಕಟಿಪಾಪುಂಗ ಡೆವಲೆಪ್​ಮೆಂಟ್ ಬ್ಲಾಕ್​ನ ಹಲವು ಸ್ವಸಹಾಯ ಸಂಘಗಳು ಸೇರಿ ತಯಾರಿಸುವ ಗಮುಸಾವನ್ನೂ ಈ ಬಾರಿ ಮಹಿಳಾ ದಿನಾಚರಣೆಯಂದು ಕೊಂಡಿದ್ದೇನೆ.. ಹಾಗೇ ಕೇರಳ ಮೂಲದ ಮಹಿಳೆಯರು ತಯಾರಿಸುವ ಕ್ಲಾಸಿಕ್​ ಪಾಮ್​ ಕ್ರಾಫ್ಟ್​ ನಿಲಾವಿಲಕ್ಕು ಕೂಡ ತೆಗೆದುಕೊಂಡೆ ಎಂದೂ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರು ಸದಾ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತ ಬಂದಿದ್ದಾರೆ. ಉಜ್ವಲಾ ಯೋಜನೆ ಸೇರಿ ಮಹಿಳೆಯರಿಗೆ ಅನುಕೂಲ ಆಗುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

ಇದನ್ನೂ ಓದಿ: International Women’s Day | ಮಹಿಳೆಯ ದಿನಚರಿಯೇ ಸವಾಲುಗಳ ಗುಚ್ಛ.. Choose To Challenge ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ !

International Women’s Day | ತನ್ನ ಜೀವವನ್ನೇ ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುವಾಕೆಗೆ ಇಂದು ಶುಭಾಶಯ ಹೇಳದಿದ್ದರೆ ಹೇಗೆ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ