International Women’s Day | ತನ್ನ ಜೀವವನ್ನೇ ಪಣಕ್ಕಿಟ್ಟು ಇನ್ನೊಂದು ಜೀವಕ್ಕೆ ಜನ್ಮ ನೀಡುವಾಕೆಗೆ ಇಂದು ಶುಭಾಶಯ ಹೇಳದಿದ್ದರೆ ಹೇಗೆ?
ಮಹಿಳಾ ದಿನಾಚರಣೆಯ ಪ್ರಯುಕ್ತ ನಿಮ್ಮ ಸಂದೇಶ ಜೀವನಪೂರ್ತಿ ನೆನಪಿರುವಂತಾಗಲೀ.. ನಿಮ್ಮ ಕೈಯ್ಯಾರೆ ಗ್ರೀಟಿಂಗ್ ತಯಾರಿಸಿ, ಮಹಿಳೆಗಾಗಿ ಇರುವ ಈ ದಿನದಂದು ಉಡುಗೊರೆ ಕೊಟ್ಟು ಸಂತೋಷದ ಶುಭಾಶಯ ತಿಳಿಸಿ.
ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನ. ಇಂದಿನ ದಿನ ಮಹಿಳೆಯರಿಗಾಗಿಯೇ ಮೀಸಲಿಡಿ. ಮನೆಯಲ್ಲಿ ಅಮ್ಮ, ಹೆಂಡತಿ, ಅಕ್ಕ-ತಂಗಿ, ಗೆಳತಿಯಾಗಿ ಹೆಣ್ಣು ಕಾಣಿಸಿಕೊಳ್ಳುತ್ತಾಳೆ. ಅವಳ ಈ ದಿನಕ್ಕೆ ಸರ್ಪ್ರೈಸ್ ನೀಡಲೇ ಬೇಕಲ್ವೇ. ಈಗಾಗಲೇ ಹಲವರು ವಿಶ್ ಮಾಡಿರಬಹುದು..ಉಡುಗೋರೆಗಳನ್ನು ನೀಡಿರಲೂಬಹುದು. ಹಾಗೂ ಒಮ್ಮೆ ಶುಭಾಶಯ ಇನ್ನೂ ತಿಳಿಸದೆ ಇದ್ದಲ್ಲಿ, ಈಗಲೇ ಹೋಗಿ ವಿಶ್ ಮಾಡಿ. ಅದಕ್ಕೆ ಬೇಕಾಗಿರುವ ಒಂದಷ್ಟು ಐಡಿಯಾಗಳ ಜೊತೆಗೆ ಕೋಟ್ಸ್ಗಳು ಇಲ್ಲಿವೆ.. ನೋಡಿ
ಹೆಣ್ಣಿದ್ದ ಮನೆಗೆ ಕನ್ನಡಿಯಾತಕ್ಕೆ ಎಂಬ ಮಾತಿದೆ. ಅಂದರೆ, ಮನೆಯಲ್ಲಿ ಹೆಣ್ಣು ಪ್ರತಿಬಿಂಬದಂತೆ. ಪ್ರತಿ ದಿನ ಅವಳ ಕೆಲಸವನ್ನು ಮಾಡಿಕೊಳ್ಳುತ್ತಾ, ಮನೆಯ ಕೆಲಸವನ್ನೂ ಮಾಡುತ್ತಾಳೆ. ಮಹಿಳೆ ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಮುತ್ತೈದೆಯಾಗಿ, ದೇವತೆಯಾಗಿ ಹಲವು ರೂಪಗಳಲ್ಲಿ ಅಭಿವ್ಯಕ್ತಳಾಗುತ್ತಾಳೆ. ನಮ್ಮ ಹುಟ್ಟಿನಿಂದ ಹಿಡಿದು ಕೊನೆಯುಸಿರಿರುವ ತನಕ ಜೊತೆಗಿದ್ದು, ಆರೈಕೆ ಮಾಡುವವಳು ಹೆಣ್ಣು. ಅವಳಿಗಾಗಿ ಇರುವ ಈ ದಿನದಂದು ಪ್ರೀತಿಯಿಂದ ಒಂದೆರಡು ಮಾತನಾಡಿ ಶುಭಾಶಯ ಹೇಳದಿದ್ದರೆ ಹೇಗೆ?
ನೀವು ಹೇಳುವ ಸಂದೇಶಗಳು ಹೇಗಿರಬೇಕೆಂದರೆ, ಆಕೆಗೆ ನೆಮ್ಮದಿ ತರುವಂತಿರಬೇಕು.. ನಾನೊಬ್ಬಳು ಮಹಿಳೆ ಎಂಬ ಹೆಮ್ಮೆ ಇಮ್ಮಡಿಯಾಗುವಂತಿರಬೇಕು. ಒಳ್ಳೆಯ ಸಂದೇಶವಿರಲಿ.. ಚೆಂದದ ಗ್ರೀಟಿಂಗ್ನ ಒಳಗಿರಲಿ. ನೀವು ಹೇಳುವ ಮಾತಿನಿಂದ ಸಾರ್ಥಕತೆಯ ಭಾವ ಮುಖದಲ್ಲಿ ಅರಳಬೇಕು. ನಮ್ಮನ್ನು ಹೆತ್ತು, ಹೊತ್ತು ಇಷ್ಟು ವರ್ಷ ಸಾಕಿದ ಅಮ್ಮನಿಗೆ ನಗುನಗುತ್ತಾ ಬಾಳು.. ಯಾವಾಗಲೂ ಖುಷಿಯಿಂದಿರು, ಸದಾಕಾಲ ಆರೋಗ್ಯವಂತಳಾಗಿ ಬಾಳು ಎಂಬುದಾಗಿ ನಗುತ್ತಾ ಮಹಿಳಾ ದಿನದ ಶುಭಾಶಯ ತಿಳಿಸಿ.
ಕಷ್ಟದ ಪಾಲನ್ನು ಹೊತ್ತು, ಬಾಳ ಸಂಗಾತಿಯಾಗಿ. ಯಾವಾಗಲೂ ಜೊತೆಗಿದ್ದು, ಸದಾ ಕಾಲ ಗಂಡ-ಮಕ್ಕಳು ಎನ್ನುತ್ತಾ ಆರೈಕೆಯಲ್ಲಿ ತೊಡಗಿರುವ ನಿಮ್ಮ ಹೆಂಡತಿಗೆ ಪ್ರೀತಿಯ ಉಡುಗೊರೆ ಕೊಡುವ ಮೂಲಕ ಮಹಿಳಾ ದಿನದ ಶುಭಾಶಯ ತಿಳಿಸಿ. ಇನ್ಮು ಮುಂದೆ ನಿನ್ನನ್ನು ಇನ್ನಷ್ಟು ಖುಷಿಯಿಂದ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತಾ ಶುಭಾಶಯ ತಿಳಿಸಿ. ಜಗತ್ತಿನಲ್ಲಿರುವ ಎಲ್ಲ ಸಂತೋಷವನ್ನು ದೇವರು ನಿನಗೆ ಕರುಣಿಸಲಿ ಎಂಬ ಶುಭಾಷಯ ನಿಮ್ಮದಾಗಿರಲಿ. ಹಾಗೇ ಚಿಕ್ಕ ವಯಸ್ಸಿನಿಂದ ಒಡಹುಟ್ಟಿ ಬೆಳೆದು, ಚಿಕ್ಕ ಪುಟ್ಟ ಕೋಪ-ಮುನಿಸಿಗೆ ಜೊತೆಯಾಗಿ, ಪ್ರತಿ ಖುಷಿಗೆ ಸಾಕ್ಷಿಯಾಗಿ, ಯಾವಾಗಲೂ ಅಣ್ಣ- ತಮ್ಮ ಎಂದು ಬಾಯ್ತುಂಬ ಕರೆಯುತ್ತಾ ಮನೆ ತುಂಬ ಓಡಾಡುತ್ತಿರುವ ಅಕ್ಕ- ತಂಗಿಯರಿಗೆ ಖುಷಿಯಿಂದ ಶುಭಾಶಯ ತಿಳಿಸಿ. ನೀನು ಅಂದುಕೊಂಡಂತೆ ಸಾಧನೆಯ ಮೆಟ್ಟಿಲೇರುವ ಅವಕಾಶ ದೊರೆಯಲಿ ಎಂಬ ಆಶೀರ್ವಾದ ನಿಮ್ಮದಾಗಿರಲಿ.
ಕಷ್ಟ ಕಾಲದಲ್ಲಿ ಜೊತೆಗಿದ್ದು, ಪ್ರತಿ ಕ್ಷಣದ ನೋವನ್ನು ಹಂಚಿಕೊಳ್ಳುತ್ತಾ, ಸ್ನೇಹದ ಮಡಿಲಿನಲ್ಲಿ ತೂಗುವ ಗೆಳತಿಗೆ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿ. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ, ನಿನ್ನ ಮೊಗದಲ್ಲಿ ಸದಾ ನಗುವಿರಲಿ ಎಂಬ ಭಾವದ ಜೊತೆ ವಿಶ್ ಮಾಡಿ. ನಿಮ್ಮ ಕೈಯ್ಯಾರೆ ಗ್ರೀಟಿಂಗ್ ತಯಾರಿಸಿ, ನಿಮ್ಮ ಮನಸ್ಸಿನ ಭಾವಗಳು ಪದಗಳಲ್ಲಿ ಉರುಳಲಿ. ಚಿಕ್ಕ ಸಂದೇಶವಾದರೂ ಜೀವನ ಪೂರ್ತಿ ನೆನಪಿರುವಂತಾಗಿರಲಿ..
ಇದನ್ನೂ ಓದಿ: International Women’s Day 2021: ತುರ್ತು ಸಂದರ್ಭದಲ್ಲಿ ಮಹಿಳೆಯರ ಸಹಾಯಕ್ಕೆ ಬರುತ್ತವೆ ಈ ನಾಲ್ಕು ಆ್ಯಪ್ಗಳು!
Published On - 5:31 pm, Mon, 8 March 21