AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ವಿಭಿನ್ನ ಘೋಷವಾಕ್ಯಗಳೊಂದಿಗೆ ಕೇರಳ ಚುನಾವಣೆ ಪ್ರಚಾರಕ್ಕಿಳಿದ ಎಲ್​ಡಿಎಫ್, ಯುಡಿಎಫ್ ಮತ್ತು ಎನ್​ಡಿಎ

Kerala Elections Slogan: ಈ ಬಾರಿ ಎಡಪಕ್ಷ ( LDF) 'ಉರಪ್ಪಾಣ್ ಎಲ್​ಡಿಎಫ್ ' ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. 'ಉರಪ್ಪಾಣ್ ಎಲ್​ಡಿಎಫ್ ಎಂಬ ಪದದ ಅರ್ಥ 'ಹೌದು ನಿಸ್ಸಂದೇಹವಾಗಿ ಎಲ್​ಡಿಎಫ್' ಎಂಬುದಾಗಿದೆ.

Kerala Assembly Elections 2021: ವಿಭಿನ್ನ ಘೋಷವಾಕ್ಯಗಳೊಂದಿಗೆ ಕೇರಳ ಚುನಾವಣೆ ಪ್ರಚಾರಕ್ಕಿಳಿದ ಎಲ್​ಡಿಎಫ್, ಯುಡಿಎಫ್ ಮತ್ತು ಎನ್​ಡಿಎ
ರಮೇಶ್ ಚೆನ್ನಿತ್ತಲ- ಪಿಣರಾಯಿ ವಿಜಯನ್- ಕೆ.ಸುರೇಂದ್ರನ್
ರಶ್ಮಿ ಕಲ್ಲಕಟ್ಟ
|

Updated on: Mar 09, 2021 | 1:34 PM

Share

ತಿರುವನಂತಪುರಂ: ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಕೊವಿಡ್ ನಿಬಂಧನೆ ಪಾಲಿಸಬೇಕು ಎಂದು ಕೇರಳ ಸರ್ಕಾರ ಹೇಳಿದ್ದರೂ ಇದ್ಯಾವುದಕ್ಕೂ ರಾಜಕಾರಣಿಗಳು ಕಿವಿಗೊಡುತ್ತಿಲ್ಲ. ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚುನಾವಣಾ ಪ್ರಚಾರಗಳ ಕಾವು ಏರತೊಡಗಿದೆ. ವಿಭಿನ್ನ ರೀತಿಯ ಘೋಷವಾಕ್ಯಗಳೊಂದಿಗೆ ಆಡಳಿತಾರೂಢ ಎಲ್​ಡಿಎಫ್, ವಿಪಕ್ಷ ಯುಡಿಎಫ್ ಮತ್ತು ಎನ್​ಡಿಎ ಮೈತ್ರಿಕೂಟಗಳು ಮತದಾರರನ್ನು ಸಮೀಪಿಸುತ್ತಿವೆ.

ಕೇರಳದ ಚುನಾವಣೆ ಎಂದಾಕ್ಷಣ ಸ್ಲೋಗನ್ ವಾರ್ ಇದ್ದೇ ಇರುತ್ತದೆ. ಘೋಷವಾಕ್ಯ ಬಿಡುಗಡೆಯೇ ಚುನಾವಣಾ ಪ್ರಚಾರದ ಮೊದಲ ಹೆಜ್ಜೆ. ಈ ಬಾರಿ ಎಡಪಕ್ಷ ( LDF) ‘ಉರಪ್ಪಾಣ್ ಎಲ್​ಡಿಎಫ್ ‘ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. ‘ಉರಪ್ಪಾಣ್ ಎಲ್​ಡಿಎಫ್ ಎಂಬ ಪದದ ಅರ್ಥ ‘ಹೌದು ನಿಸ್ಸಂದೇಹವಾಗಿ ಎಲ್​ಡಿಎಫ್ ‘ ಎಂಬುದಾಗಿದೆ. ‘ಉರಪ್ಪ್’ ಎಂಬ ಮಲಯಾಳಂ ಪದಕ್ಕೆ ಹಲವಾರು ಅರ್ಥಗಳಿವೆ. ಉರಪ್ಪ್ ಎಂದರೆ- ಸದೃಢ, ವಾಗ್ದಾನ, ಭರವಸೆ, ಖಾತ್ರಿ, ಶಕ್ತಿಶಾಲಿ. ಎರಡನೇ ಬಾರಿಯೂ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸವನ್ನು ಈ ಪದ ಧ್ವನಿಸುತ್ತದೆ. ಅದೇ ವೇಳೆ 2016ರಲ್ಲಿ ನೀಡಿದ ಭರವಸೆಗಳನ್ನು ಪಿಣರಾಯಿ ಸರ್ಕಾರ ಪೂರೈಸಿದೆ ಎಂಬುದನ್ನೂ ಇದು ಹೇಳುತ್ತದೆ. ‘ಉರಪ್ಪಾಣ್ ಎಲ್​ಡಿಎಫ್ ‘ ಎಂಬ ಘೋಷವಾಕ್ಯವು ಎಲ್​ಡಿಎಫ್ ಎಲ್ಲ ಭರವಸೆಗಳನ್ನು ಪೂರೈಸಿದ್ದೇವೆ ಎಂಬುದನ್ನು ಹೇಳುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಫೇಸ್​ಬುಕ್ ಪುಟದಲ್ಲಿ ಬರೆದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಎಲ್​ಡಿಎಫ್ ವರುಂ ಎಲ್ಲ ಶೆರಿಯಾವುಂ’ ಎಂಬುದು ಎಲ್​ಡಿಎಫ್ ಘೋಷಣೆಯಾಗಿತ್ತು. ಅಂದರೆ ಎಲ್​ಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ , ಎಲ್ಲವೂ ಸರಿ ಹೋಗುತ್ತದೆ. ಈ ಘೋಷಣೆ ಜನಪ್ರಿಯವಾಗಿತ್ತು. ಈ ಹಿಂದೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಯುಡಿಎಫ್ ಸರ್ಕಾರದ ಭ್ರಷ್ಟಾಚಾರ, ಲಂಚ, ಕಾಂಗ್ರೆಸ್ ನಾಯಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು, ಸೋಲಾರ್ ಹಗರಣ ಮೊದಲಾದ ಪ್ರಕರಣಗಳನ್ನೇ ಯುಡಿಎಫ್ ವಿರುದ್ಧದ ಅಸ್ತ್ರವಾಗಿ ಎಲ್ ಡಿಎಫ್ ಬಳಸಿಕೊಂಡಿತ್ತು.

ರಾಜ್ಯದ ಒಳಿತಿಗಾಗಿ ಯುಡಿಎಫ್ ಉರಪ್ಪಾಣ್ ಎಲ್​ಡಿಎಫ್ ಎಂಬ ಘೋಷಣೆಯೊಂದಿಗೆ ಎಲ್​​ಡಿಎಫ್ ಚುನಾವಣೆ ಪ್ರಚಾರ ನಡೆಸುತ್ತಿರುವಾಗ ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂಬ ಘೋಷಣೆಯನ್ನು ಯುಡಿಎಫ್ ಬಿಡುಗಡೆ ಮಾಡಿದೆ. ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂದರೆ ರಾಜ್ಯದ ಒಳಿತಿಗಾಗಿ ಯುಡಿಎಫ್ ಎಂದು ಅರ್ಥ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣ, ಲೈಫ್ ಮಿಷನ್ ಹಗರಣ ಮೊದಲಾದವುಗಳನ್ನು ಅಸ್ತ್ರವಾಗಿರಿಸಿಕೊಂಡು ಎಲ್​ಡಿಎಫ್ ವಿರುದ್ಧ ಯುಡಿಎಫ್ ಪ್ರಚಾರ ನಡೆಸುತ್ತಿದೆ. ಎಲ್​​ಡಿಎಫ್ ಅಧಿಕಾರದಿಂದ ರೋಸಿ ಹೋದ ಜನರಿಗೆ ನಾವು ಅಧಿಕಾರಕ್ಕೇರುವ ಮೂಲಕ ಬದಲಾವಣೆ ತರುತ್ತೇವೆ ಎಂದು ಯುಡಿಎಫ್ ಹೇಳುತ್ತಿದೆ. 2016ರಲ್ಲಿ ‘ವಳರಣಂ ಈ ನಾಡ್, ತುಡರಣಂ ಈ ಭರಣಂ’ (ಈ ರಾಜ್ಯ ಪ್ರಗತಿ ಹೊಂದಬೇಕು, ಅಧಿಕಾರ ಮುಂದುವರಿಯಬೇಕು) ಎಂಬುದಾಗಿತ್ತು ಯುಡಿಎಫ್ ನ ಘೋಷವಾಕ್ಯ.

ಮೋದಿ ಜತೆ ಹೊಸ ಕೇರಳ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ( NDA) ಕಳೆದ ಭಾನುವಾರ ಸ್ಲೋಗನ್ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುವನಂತಪುರಂನಲ್ಲಿ ನಡೆದ ಕೇರಳ ಬಿಜೆಪಿಯ ವಿಜಯ್ ಯಾತ್ರಾ ಸಮಾರೋಪ ಸಮಾರಂಭದಲ್ಲಿ ಎನ್​ಡಿಎ ಘೋಷವಾಕ್ಯ ಬಿಡುಗಡೆ ಮಾಡಿದ್ದಾರೆ. ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೈಲೈಟ್ ಮಾಡಿದೆ. ‘ಪುದಿಯ ಕೇರಳಂ ಮೋದಿಕ್ಕೊಪ್ಪಂ’ (ಮೋದಿ ಜತೆ ನವ ಕೇರಳ) ಎಂಬ ಘೋಷವಾಕ್ಯವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ಪಿಣರಾಯಿ ವಿಜಯನ್ ವಿರುದ್ಧ ಹರಿಹಾಯ್ದಿದ್ದರು. ಕಳೆದ ವರ್ಷ ‘ಎನ್​​ ಡಿಎ ವಝಿ ಮುಟ್ಟಿಯ ಕೇರಳಂ, ವಝಿ ಕಾಟ್ಟಾನ್ ಬಿಜೆಪಿ’ (ದಾರಿ ಕಾಣದ ಕೇರಳ, ದಾರಿ ತೋರಿಸಲು ಬಿಜೆಪಿ) ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.

ಇದನ್ನೂ ಓದಿ: Kerala Elections 2021: ಕೇರಳದ ಜನತೆ ಬದಲಾವಣೆ ಬಯಸಿದ್ದಾರೆ; ಅಮಿತ್ ಶಾ

Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು