AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ಮೆಟ್ರೊಮ್ಯಾನ್ ಇ.ಶ್ರೀಧರನ್ ಕೇರಳ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ, ಅಧಿಕೃತ ಘೋಷಣೆ ಮಾಡಿದ ಬಿಜೆಪಿ

Metro Man E Sreedharan: ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಭಾರತದ ಮೆಟ್ರೊಮ್ಯಾನ್ ಇ.ಶ್ರೀಧರನ್ ಅವರನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದೆ.

Kerala Assembly Elections 2021: ಮೆಟ್ರೊಮ್ಯಾನ್ ಇ.ಶ್ರೀಧರನ್ ಕೇರಳ ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ, ಅಧಿಕೃತ ಘೋಷಣೆ ಮಾಡಿದ ಬಿಜೆಪಿ
ಇ. ಶ್ರೀಧರನ್
Skanda
| Edited By: |

Updated on:Mar 04, 2021 | 3:03 PM

Share

ಮಲಪ್ಪುರಂ (ಕೇರಳ): ಇತ್ತೀಚೆಗಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಭಾರತದ ಮೆಟ್ರೊಮ್ಯಾನ್ ಇ.ಶ್ರೀಧರನ್ ಅವರನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಣೆ ಮಾಡಿದೆ. ಈ ಕುರಿತು ಕೇರಳ ರಾಜ್ಯ ಬಿಜೆಪಿ ಮುಖ್ಯಸ್ಥ ಸುರೇಂದ್ರನ್ ಮಾಹಿತಿ ನೀಡಿದ್ದು, ಮೆಟ್ರೊಮ್ಯಾನ್ ಇ.ಶ್ರೀಧರನ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ತಿಳಿಸಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದ ಬಿಜೆಪಿಯ ಕೇರಳ ವಿಜಯಯಾತ್ರೆ ಸಮಾರೋಪ ಸಮಾರಂಭದಲ್ಲಿ 88ರ ಹರೆಯದ ಶ್ರೀಧರನ್ ಬಿಜೆಪಿಗೆ ಸೇರಿದ್ದರು. ಅವರ ಪಕ್ಷ ಸೇರುವ ಒಂದು ವಾರ ಮುನ್ನವಷ್ಟೇ ಕೇರಳ ಬಿಜೆಪಿ ಘಟಕವು ಶ್ರೀಧರನ್ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಿತ್ತು. ವಿಜಯ ಯಾತ್ರೆ ಮಲಪ್ಪುರಂಗೆ ತಲುಪಿದ ನಂತರ, ಶ್ರೀಧರನ್ ತಮ್ಮ ಊರಿನಲ್ಲಿಯೇ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಬೇಕು ಎಂದು ನಮ್ಮ ಆಸೆ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದರು.

ಬಿಜೆಪಿಗೆ ಸೇರುವುದಾಗಿ ನಿರ್ಧಾರ ಪ್ರಕಟಿಸಿದ ಹೊತ್ತಲ್ಲಿ ರಾಜ್ಯ ರಾಜಕೀಯ ಮತ್ತು ದೇಶದ  ರಾಜಕೀಯದ ಬಗ್ಗೆ ಎನ್​ಡಿಟಿವಿ ಜತೆ ಮಾತನಾಡಿದ್ದ ಶ್ರೀಧರನ್, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ವಿರೋಧ ವ್ಯಕ್ತಪಡಿಸಲೇ ಬೇಕು ಎಂದು ಪಟ್ಟು ಹಿಡಿದು ಎಲ್ಲವನ್ನೂ ವಿರೋಧಿಸುತ್ತಿವೆ. ಕಾಂಗ್ರೆಸ್​ನಂಥಾ ಪಕ್ಷಗಳು ಭಾರತವನ್ನು ಕೆಟ್ಟದಾಗಿ ತೋರಿಸುತ್ತಿವೆ ಎಂದಿದ್ದರು.

ಬಿಜೆಪಿ ನಿಲುವು ಸಮರ್ಥಿಸಿಕೊಂಡಿದ್ದ ಮೆಟ್ರೋಮ್ಯಾನ್

ಶಬರಿ ಮಲೆಗೆ ಮಹಿಳೆಯರಿಗೆ ಮುಕ್ತ ಪ್ರವೇಶ ನೀಡಿರುವ ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಪಿಣರಾಯಿ ವಿಜಯನ್ ನೇತೃತ್ವದ ನಿರ್ಧಾರವನ್ನು ಬಿಜೆಪಿ ವಿರೋಧಿಸಿತ್ತು. ಈ ಹಿಂದೆ ಇದ್ದಂತೆ 10 ವರ್ಷಕ್ಕಿಂತ ಕೆಳಗಿನ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಶಬರಿಮಲೆಗೆ ಹೋಗಬೇಕು ಎಂಬ ನಿಲುವು ಬಿಜೆಪಿಯದ್ದು. ಇದಕ್ಕಾಗಿ ಬಿಜೆಪಿ, ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳನ್ನು ನಡೆದಿತ್ತು. ಅದೇ ವೇಳೆ ಹಿಂದೂ ಮತ್ತು ಮುಸ್ಲಿಂ ವಿವಾಹ ‘ಲವ್ ಜಿಹಾದ್’ ಎಂದು ಆರೋಪಿಸುತ್ತಿರುವ ಬಿಜೆಪಿ ನಿಲುವಿನ ಬಗ್ಗೆ ಶ್ರೀಧರನ್ ಅವರಲ್ಲಿ ಕೇಳಿದಾಗ, ಬಿಜೆಪಿ ನಿಲುವು ಸರಿ. ನಾನು ಬಿಜೆಪಿ ಸೇರುವುದಕ್ಕೆ ಇದೇ ಕಾರಣ. ಪಕ್ಷ ಬಯಸಿದರೆ ನಾನು ಚುನಾವಣೆ ಸ್ಪರ್ಧಿಸುತ್ತೇನೆ ಎಂದಿದ್ದರು.

ಬಿಜೆಪಿಗೆ ಸೇರುವುದಾಗಿ ನಿರ್ಧಾರ ಪ್ರಕಟಿಸಿದ ಹೊತ್ತಲ್ಲಿ ರಾಜ್ಯ ರಾಜಕೀಯ ಮತ್ತು ದೇಶದ  ರಾಜಕೀಯದ ಬಗ್ಗೆ ಎನ್​ಡಿಟಿವಿ ಜತೆ ಮಾತನಾಡಿದ್ದ ಶ್ರೀಧರನ್, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ರಾಜಕೀಯ ಪಕ್ಷಗಳು ಭಾರತವನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ವಿರೋಧ ವ್ಯಕ್ತಪಡಿಸಲೇ ಬೇಕು ಎಂದು ಪಟ್ಟು ಹಿಡಿದು ಎಲ್ಲವನ್ನೂ ವಿರೋಧಿಸುತ್ತಿವೆ. ಕಾಂಗ್ರೆಸ್​ನಂಥಾ ಪಕ್ಷಗಳು ಭಾರತವನ್ನು ಕೆಟ್ಟದಾಗಿ ತೋರಿಸುತ್ತಿವೆ ಎಂದಿದ್ದರು.

ದೇಶ ಸೇವೆ ಬಿಜೆಪಿಯಿಂದಲೇ ಸಾಧ್ಯ: ಶ್ರೀಧರನ್

“ನನ್ನ ಜೀವನದಲ್ಲಿನ ಮಹತ್ವದ ಕ್ಷಣ ಅದಾಗಿತ್ತು. ಬದುಕಿನ ಹೊಸ ಅಧ್ಯಾಯವೊಂದು ಆರಂಭವಾಗಲಿದೆ. 67 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ ನಂತರ ಕೇರಳಕ್ಕೆ ಯಾವುದಾದರೂ ರೀತಿಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಆಶಯದಿಂದ ಬಿಜೆಪಿ ಸೇರಿದ್ದೇನೆ. ಕಳೆದ ಹಲವು ವರ್ಷ ಸರ್ಕಾರ ವಿವಿಧ ಹುದ್ದೆಗಳನ್ನು ವಹಿಸಿದ್ದೇನೆ.  ಪಾಲಾರಿವಟ್ಟಂ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲು 18 ತಿಂಗಳುಗಳು ಸಾಕಾಾಗಿತ್ತು. ಆದರೆ ಆ ಕಾರ್ಯವನ್ನು ಪೂರ್ಣಗೊಳಿಸಲು  ಐದೂವರೆ ತಿಂಗಳುಗಳೇ ಬೇಕಾಗಿ ಬಂತು. ಮುಂದಿನ ವಾರ ಹೊಸ ಸೇತುವೆಯಲ್ಲಿ ವಾಹನಗಳು ಓಡಾಡಲಿವೆ. ದೇಶ ಸೇವೆ ಬಿಜೆಪಿಯಿಂದಲೇ ಸಾಧ್ಯ ಎಂದು ಅರಿತಿರುವುದರಿಂದಲೇ ನಾನು ಈ ಪಕ್ಷದ ಅಂಗವಾಗಿದ್ದು” ಎಂದು ಎಂದು ಬಿಜೆಪಿ ಸೇರಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಶ್ರೀಧರನ್ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ ರಾಜಕಾರಣ: ಎಲ್​ಡಿಎಫ್, ಯುಡಿಎಫ್, ತೃತೀಯ ರಂಗ- ಶಕ್ತಿ ದೌರ್ಬಲ್ಯಗಳ ವಿಶ್ಲೇಷಣೆ

Kerala Assembly Elections: ಬಿಜೆಪಿ ಸೇರಲಿದ್ದಾರೆ ಮೆಟ್ರೊಮ್ಯಾನ್ ಇ.ಶ್ರೀಧರನ್

Published On - 2:56 pm, Thu, 4 March 21