ಆಗ್ರಾ: ವಿಶ್ವ ಪ್ರಸಿದ್ಧ ತಾಜ್​ಮಹಲ್​ಗೆ ಬಾಂಬ್ ಬೆದರಿಕೆ; ಪ್ರವಾಸಿಗರು ಹೊರಕ್ಕೆ – ಹುಸಿ ಕರೆ ಮಾಡಿದ ವ್ಯಕ್ತಿ ಅಂದರ್

ತಕ್ಷಣ ಕಾರ್ಯಪ್ರವೃತ್ತವಾದ ಕೇಂದ್ರ ಕೈಗಾರಿಕಾ ಪಡೆಯ ಭದ್ರತಾ ಸಿಬ್ಬಂದಿ ಬಾಂಬ್ ಇರುವ ಕುರಿತು ಹುಡುಕಾಟ ನಡೆಸಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಯಾವುದೇ ಬಾಂಬ್ ಅಥವಾ ಸ್ಫೋಟಕ ಪತ್ತೆಯಾಗಿಲ್ಲ.

  • TV9 Web Team
  • Published On - 13:32 PM, 4 Mar 2021
ಆಗ್ರಾ: ವಿಶ್ವ ಪ್ರಸಿದ್ಧ ತಾಜ್​ಮಹಲ್​ಗೆ ಬಾಂಬ್ ಬೆದರಿಕೆ; ಪ್ರವಾಸಿಗರು ಹೊರಕ್ಕೆ - ಹುಸಿ ಕರೆ ಮಾಡಿದ ವ್ಯಕ್ತಿ ಅಂದರ್
ತಾಜ್​ಮಹಲ್

ಆಗ್ರಾ: ವಿಶ್ವ ಪ್ರಸಿದ್ಧ ತಾಜ್​ಮಹಲ್​ನಲ್ಲಿ ಬಾಂಬ್ ಇದೆ ಎಂಬ ಕರೆ ಬಂದ ಬೆನ್ನಲ್ಲೇ ಸ್ಮಾರಕದೊಳಗಿದ್ದ ಸುಮಾರು 1,000 ಪ್ರವಾಸಿಗರನ್ನು ಖಾಲಿ ಮಾಡಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಉತ್ತರ ಪ್ರದೇಶ ಪೊಲೀಸರ ಸಹಾಯವಾಣಿ 112ಕ್ಕೆ ಅನಾಮಿಕ ಕರೆಯೊಂದು ಬಂದಿದೆ. ಕರೆ ಮಾಡಿದ ಅನಾಮಿಕ ವ್ಯಕ್ತಿ ತಾಜ್ ಮಹಲ್​ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ಕರೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮೇಲ್ನೋಟಕ್ಕೆ ಆತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದಾನೆ ಎಂದು  ಆಗ್ರಾ ಆರಕ್ಷಕ ವಿಭಾಗದ ಎಡಿಜಿಪಿ ಸತೀಶ್ ಗಣೇಶ್ ತಿಳಿಸಿದ್ದಾರೆ.  ಆತನಿಂದ ವಿವರಗಳನ್ನು ತಿಳಿಯಲು ಪೊಲೀಸ್ ತಂಡ ಕಾರ್ಯನಿರತವಾಗಿದ್ದು,  ಹುಸಿಕರೆ ಹಿಂದಿನ ಉದ್ದೇಶಗಳನ್ನು ತಿಳಿಸಲು ಸಂಪೂರ್ಣ ತನಿಖೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಕ್ಷಣ ಎಚ್ಚೆತ್ತ ಪೊಲೀಸರು ನೆರೆದಿದ್ದ ಪ್ರವಾಸಿಗರನ್ನು ಹೊರ ಕಳುಹಿಸಿ ತಪಾಸಣೆ ನಡೆಸಿದ್ದಾರೆ. ಆದರೆ ತಾಜ್​ಮಹಲ್​ನಲ್ಲಿ ಯಾವುದೇ ಬಾಂಬ್ ಅಥವಾ ಸ್ಫೋಟಕವೂ ಪತ್ತೆಯಾಗದ ಕಾರಣ ಅನಾಮಿಕ ವ್ಯಕ್ತಿಯ ಕರೆಯನ್ನು ಹುಸಿ ಕರೆ ಎಂದು ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಾಜ್​ಮಹಲ್ ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿದೆ.

ಪೊಲೀಸರು ತಾಜ್​ಮಹಲ್​ನಲ್ಲಿ ಬಾಂಬ್ ಇರುವ ಕುರಿತು ಕರೆ ಬಂದ ತಕ್ಷಣ ತಾಜ್​ಮಹಲ್​ನ ಸುರಕ್ಷತೆಯ ಜವಾಬ್ಧಾರಿ ಹೊಂದಿರುವ ಕೇಂದ್ರ ಕೈಗಾರಿಕಾ ಪಡೆಯ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತವಾದ ಕೇಂದ್ರ ಕೈಗಾರಿಕಾ ಪಡೆಯ ಭದ್ರತಾ ಸಿಬ್ಬಂದಿ ಬಾಂಬ್ ಇರುವ ಕುರಿತು ಹುಡುಕಾಟ ನಡೆಸಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಯಾವುದೇ ಬಾಂಬ್ ಅಥವಾ ಸ್ಫೋಟಕ ಪತ್ತೆಯಾಗಿಲ್ಲ.

ಭಾರತೀಯ ಪುರಾತತ್ವ ಇಲಾಖೆಯ ನಿರ್ವಹಣೆಯಲ್ಲಿರುವ ತಾಜ್​ಮಹಲ್​ಗೆ ಬಾಂಬ್ ಬೆದರಿಕೆ ಬಂದ ನಂತರ ಪೊಲೀಸರು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಸಂಶಯಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗದ ಕಾರಣ ಪ್ರವಾಸಿಗರಿಗೆ ಐತಿಹಾಸಿಕ ಸ್ಮಾರಕವನ್ನು ಕಣ್ತುಂಬಿಕೊಳ್ಳುವ ಅವಕಾಶ ಮತ್ತೆ ದೊರೆತಿದೆ.

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಲಾಕ್​ಡೌನ್ ನನ್ನ ಪ್ರೀತಿಯನ್ನು ಫ್ಲಾಪ್ ಮಾಡಿತು..

ರೈತರ ಜಮೀನಿನಲ್ಲಿ ಅರಳಿದೆ ಲಕ್ಕೂರು ಗುಲಾಬಿ: ಕೆಂಪು ರೋಜಾಗೆ ಫೆಬ್ರವರಿಯಲ್ಲಿ ಹೆಚ್ಚಿದ ಬೇಡಿಕೆ