ಮಾರ್ಚ್ 15,16ಕ್ಕೆ ಬ್ಯಾಂಕ್ ಬಂದ್; ಬ್ಯಾಂಕಿಂಗ್ ವಲಯದ ಮೇಲೆ ಬೀರಲಿದೆ ಪರಿಣಾಮ
Bank Strike: ಬ್ಯಾಂಕ್ ಸಂಘಟನೆಗಳ ಸಂಯುಕ್ತ ಸಂಘಟನೆಯಾದ Indian Banks' Association (IBA) ಇದೇ ತಿಂಗಳ 15 ಮತ್ತು 16ರಂದು (ಮಾರ್ಚ್ 15-16) ಬ್ಯಾಂಕ್ಗಳ ಬಂದ್ಗೆ ಕರೆ ಕೊಟ್ಟಿದೆ. ಈ ಬಂದ್ನಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಕೆಲ ಮಟ್ಟಿಗೆ ಏರುಪೇರುಗಳಾಗಬಹುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ಈ ತಿಂಗಳು ಬ್ಯಾಂಕ್ ಕೆಲಸಗಳನ್ನೇನಾದರೂ ಇಟ್ಟುಕೊಂಡಿದ್ದೀರೇ? ಹಾಗಾದರೆ ಈ ಬರಹವನ್ನು ನೀವೊಮ್ಮೆ ಓದಬೇಕು. ಎರಡು ಪ್ರಮುಖ ಬ್ಯಾಂಕ್ಗಳ ಖಾಸಗೀಕರಣ ಪ್ರಸ್ತಾಪ ಎತ್ತಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಮಾರ್ಚ್ 15-16ರಂದು ಬ್ಯಾಂಕ್ ಸಂಘಟನೆಗಳು ಬಂದ್ಗೆ ಕರೆ ಕೊಟ್ಟಿವೆ. ಈ ಬಂದ್ನಿಂದ ಬ್ಯಾಂಕಿಂಗ್ ವಲಯದ ಮೇಲೆ ಪ್ರಭಾವ ಬೀರಲಿವೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ಸಂಘಟನೆಗಳ ಸಂಯುಕ್ತ ಸಂಘಟನೆಯಾದ Indian Banks’ Association (IBA) ಇದೇ ತಿಂಗಳ 15 ಮತ್ತು 16ರಂದು (ಮಾರ್ಚ್ 15-16) ಬ್ಯಾಂಕ್ಗಳ ಬಂದ್ಗೆ ಕರೆ ಕೊಟ್ಟಿದೆ. ಈ ಬಂದ್ನಿಂದ ಬ್ಯಾಂಕಿಂಗ್ ಸೇವೆಗಳಲ್ಲಿ ಕೆಲ ಮಟ್ಟಿಗೆ ಏರುಪೇರುಗಳಾಗಬಹುದು ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
ಬ್ಯಾಂಕಿಂಗ್ ವಲಯದಲ್ಲಿನ ಎರಡು ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಹೊರಟಿರುವ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ ಬ್ಯಾಂಕ್ ಸಂಘಟನೆಗಳ ಸಂಯುಕ್ತ ಸಂಘಟನೆ ಈ ಬಂದ್ಗೆ ಕರೆ ಕೊಟ್ಟಿದೆಯೇ ಹೊರತು ಯಾವುದೇ ಬ್ಯಾಂಕ್ ಒಂದರ ಸಮಸ್ಯೆಗಾಗಿ ಅಲ್ಲ. ಬಂದ್ಗೆ ಕರೆ ಕೊಟ್ಟ ದಿನಗಳಂದು ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಕೆನರಾ ಬ್ಯಾಂಕ್ ತಿಳಿಸಿದೆ. ಆದರೂ, ಬ್ಯಾಂಕ್ ಬಂದ್ ದಿನಗಳಂದು ಬ್ಯಾಂಕ್ಗಳ ಕಾರ್ಯ ಕಲಾಪಗಳಲ್ಲಿ ಭಂಗ ಬರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಕೆನರಾ ಬ್ಯಾಂಕ್ ಮಾಹಿತಿ ನೀಡಿದೆ. ಬ್ಯಾಂಕಿಂಗ್ ವಲಯದ ಸಂಘಟನೆಗಳಾದ AIBEA, AIBOC, NCBE, AIBOA, BEFI, INBEF, IBOC, NOBW, NOBO and AINBOF ಗಳು ಮಾರ್ಚ್ 15-16ರಂದು ಬಂದ್ಗೆ ಕರೆ ನೀಡಿವೆ.
ದೊಡ್ಡ ಬ್ಯಾಂಕ್ಗಳ ಖಾಸಗೀಕರಣದತ್ತ ಸರ್ಕಾರದ ಚಿಂತನೆ
ಖಾಸಗೀಕರಣದ ಮೊದಲ ಹಂತ ಇದಾಗಿದ್ದು, ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್ಗಳನ್ನು ಮೊದಲು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದೇಶದ ದೊಡ್ಡ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವ ಆಲೋಚನೆ ಕೇಂದ್ರ ಸರ್ಕಾರದ್ದು. ಈ ಬಗ್ಗೆ ಉತ್ತರ ನೀಡಲು ಹಣಕಾಸು ಸಚಿವಾಲಯ ನಿರಾಕರಿಸಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ 50,000 ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 33,000, ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ 26,000 ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 13,000 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣವು ರಾಜಕೀಯವಾಗಿ ಅಪಾಯಕಾರಿಯಾಗಿದೆ. ಇದರಿಂದ ಉದ್ಯೋಗ ನಷ್ಟ ಉಂಟಾಗಬಹದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ಹಾಗೂ ಎಲ್ಐಸಿ ಷೇರುಗಳ್ನು ಸರ್ಕಾರ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಈಗಾಗಲೇ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆ ಬ್ಯಾಂಕಿಂಗ್ ವ್ಯವಹಾರ..! ಆರ್ಬಿಐನ ಹೊಸ ಐಡಿಯಾ ಹಳ್ಳಿಗಳಿಗೆ ಇದು ವರದಾನ
ಕನ್ನಡಿಗರ ಕೈ ತಪ್ಪುತ್ತಿವೆ ಬ್ಯಾಂಕಿಂಗ್ ಉದ್ಯೋಗಗಳು: ಟಿ.ಎಸ್. ನಾಗಾಭರಣ ಕಳವಳ