
ಲೀಗ್ನಲ್ಲಿ ಸತತ ನಾಲ್ಕು ಪಂದ್ಯಗಳನ್ನ ಸೋತ್ರೂ ಆರ್ಸಿಬಿ ರನ್ರೇಟ್ನಿಂದ ಪ್ಲೇ ಆಫ್ಗೆ ಎಂಟ್ರಿ ಕೊಟ್ಟಿದೆ. ಆದ್ರೆ ಪ್ಲೇ ಆಫ್ನಲ್ಲಿ ಆರ್ಸಿಬಿ ಲೀಗ್ನಲ್ಲಿ ಮಾಡಿದ ತಪ್ಪುಗಳೆನ್ನೆಲ್ಲಾ ತಿದ್ದಿಕೊಂಡು, ಕಣಕ್ಕಿಳಿದ್ರೆ ಮಾತ್ರ, ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ಮಣಿಸೋದಕ್ಕೆ ಸಾಧ್ಯ. ಹಾಗಾದ್ರೆ ನಾಳೆ ಅಭು ಧಾಬಿಯಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮಣಿಸೋಕೆ ಕೊಹ್ಲಿ ಮಾಡ್ಬೇಕಾಗಿರೋ ಐದು ರಣತಂತ್ರಗಳೇನು ಇಲ್ಲಿ ನೋಡಿ..
ಕೊಹ್ಲಿ ಗೆಲುವಿನ ತಂತ್ರ ನಂ.5
ಮಾರಿಸ್ಗೆ ಮತ್ತೆ ಬ್ಯಾಟಿಂಗ್ನಲ್ಲಿ ಬಡ್ತಿ ನೀಡಬೇಕು:
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ, ಆಲ್ರೌಂಡರ್ ಕ್ರಿಸ್ ಮಾರಿಸ್ಗೆ ಬ್ಯಾಟಿಂಗ್ನಲ್ಲಿ 5ನೇ ಕ್ರಮಾಂಕದಲ್ಲಿ ಕಳಿಸಿದ್ರು. ಆದ್ರೆ ಮಾರಿಸ್ ಶೂನ್ಯಕ್ಕೆ ಔಟಾಗಿದ್ರು. ಹಾಗಂತ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಮಾರಿಸ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡೋ ಸಾಹಸಕ್ಕೆ ಕೈ ಹಾಕಬಾರದು. ಯಾಕಂದ್ರೆ ಮಾರಿಸ್ ಸಿಡಿದೆದ್ರೆ, ರನ್ ಮಳೆ ಹರಿಯೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ಕೊಹ್ಲಿ ಗೆಲುವಿನ ತಂತ್ರ ನಂ.4
ಹೈದರಾಬಾದ್ ವಿರುದ್ಧ ಶಹಬಾಜ್ಗೆ ನೀಡಬೇಕು ಚಾನ್ಸ್
ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪರ ಕಣಕ್ಕಿಳಿದ ಸ್ಪಿನ್ನರ್ ಶಹಬಾಜ್ ಅಹ್ಮದ್, ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಅಬುಧಾಬಿ ಪಿಚ್ ಸ್ಪಿನ್ನರ್ಗಳಿಗೂ ನೆರವಾಗೋದ್ರಿಂದ, ಉತ್ತಮ ಲಯದಲ್ಲಿರೋ ಶಹಬಾಜ್ ಹೈದರಾಬಾದ್ ವಿರುದ್ಧವೂ ಕೈ ಚಳಕ ತೊರಿಸೋ ಸಾಧ್ಯತೆ ಹೆಚ್ಚಿದೆ.
ಕೊಹ್ಲಿ ಗೆಲುವಿನ ತಂತ್ರ ನಂ.3
ಫಿಲಿಫ್ ಬದಲು ಮೋಯಿನ್ ಅಲಿ ಆಯ್ಕೆ ಸೂಕ್ತ
ಆಲ್ರೌಂಡರ್ ಕೋಟಾದಲ್ಲಿ ಕ್ಯಾಪ್ಟನ್ ಕೊಹ್ಲಿ ಮೋಯಿನ್ ಅಲಿಗೆ ಅವಕಾಶ ನೀಡ್ಬೇಕು. ಅಲಿಗೆ ಅವಕಾಶ ನೀಡ್ಬೇಕು ಅಂದ್ರೆ, ಆರಂಭಿಕನಾಗಿ ನಿರೀಕ್ಷಿತ ಪ್ರದರ್ಶನ ನೀಡದ ಜೋಸ್ ಫಿಲಿಪ್ರನ್ನ ಹೊರಗಿಡಬೇಕು. ಆಗ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಆರ್ಸಿಬಿ ಸ್ಟ್ರೆಂತ್ ಹೆಚ್ಚಾಗುತ್ತೆ.
ಕೊಹ್ಲಿ ಗೆಲುವಿನ ತಂತ್ರ ನಂ.2
ಬ್ಯಾಟಿಂಗ್ನಲ್ಲಿ ಕೊಹ್ಲಿ, ಎಬಿಡಿ ಅಬ್ಬರಿಸಬೇಕು
ಲೀಗ್ನ ಕಳೆದ ನಾಲ್ಕು ಪಂದ್ಯಗಳಲ್ಲೂ ಕ್ಯಾಪ್ಟನ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಮಾಡಿಲ್ಲ. ಹೈದರಾಬಾದ್ ತಂಡವನ್ನ ಮಣಿಸಬೇಕು ಅಂದ್ರೆ, 2ನೇ ರಣತಂತ್ರವಾದ ಕೊಹ್ಲಿ ಮತ್ತು ಎಬಿಡಿ ರನ್ ಮಳೆಯನ್ನ ಹರಿಸಲೆಬೇಕು.
ಕೊಹ್ಲಿ ಗೆಲುವಿನ ತಂತ್ರ ನಂ.1
ವಾರ್ನರ್ ಸಾಹನನ್ನ ಆರಂಭದಲ್ಲೇ ಕಟ್ಟಿಹಾಕಬೇಕು
ಹೈದರಾಬಾದ್ ವಿರುದ್ಧ ಆರ್ಸಿಬಿ ಗೆಲ್ಲಲು ಮಾಡ್ಬೇಕಾಗಿರೋ ಮೊದಲ ರಣತಂತ್ರ ಇದೆ ಆಗಿದೆ. ಡೆಡ್ಲಿ ಓಪನರ್ಗಳಾದ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸ್ತಾರೆ. ಹೀಗಾಗಿ ಕೊಹ್ಲಿ ಬೌಲರ್ಗಳು ಪವರ್ ಪ್ಲೇನಲ್ಲೇ ಈ ಜೋಡಿಯ ವಿಕೆಟ್ ಪಡೆದ್ರೆ, ಪಂದ್ಯದ ಮೇಲೆ ಸುಲಭವಾಗಿ ಹಿಡಿತ ಸಾಧಿಸಬಹುದು.
ಕ್ಯಾಪ್ಟನ್ ಕೊಹ್ಲಿ ಈ ಐದು ರಣತಂತ್ರಗಳನ್ನ ಅಬುಧಾಬಿಯಲ್ಲಿ ನಾಳೆ ಹೈದರಾಬಾದ್ ವಿರುದ್ಧ ಅನುಸರಿಸಿದ್ದೇ ಆದ್ರೆ, 2ನೇ ಕ್ವಾಲಿಫೈಯರ್ಗೆ ಎಂಟ್ರಿ ಕೊಡೋದಕ್ಕೆ ಸಾಧ್ಯ.
Published On - 1:24 pm, Thu, 5 November 20