ಶುದ್ಧ ಪ್ರೇಮ ಬೇರೆ, ಮತಾಂತರಕ್ಕಾಗಿ ಪ್ರೇಮ ಬೇರೆ -ಲವ್ ಜಿಹಾದ್ ತಡೆಗೆ ಸಿ.ಟಿ.ರವಿ ಆಗ್ರಹ
ಮಂಗಳೂರು: ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿಗೆ ತರುವ ವಿಚಾರವಾಗಿ ಸಿಎಂ, ಸಚಿವರು ಕಾನೂನಿನ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಶುದ್ಧ ಪ್ರೇಮ ಬೇರೆ, ಮತಾಂತರಕ್ಕಾಗಿ ಪ್ರೇಮ ಬೇರೆ. ಮೋಸದ ಪ್ರೇಮ ಮತ್ತು ಮತಾಂತರದ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮದ ಅಪೇಕ್ಷೆ ಇದೆ. ಆದಷ್ಟು ಶೀಘ್ರ ಕಾಯ್ದೆಯಾಗಲಿ ಎಂದು ಬಯಸುವೆ ಎಂದು ಸಿ.ಟಿ.ರವಿ ಹೇಳಿದರು. ಸಮಾಜ ಹಾಗೂ ಕುಟುಂಬ ನೆಮ್ಮದಿಯಿಂದ ಇರಲು ಕಾಯ್ದೆ ಜಾರಿಯಾಗಬೇಕು. ನಾನು ಟ್ವೀಟ್ […]

ಸಿ.ಟಿ.ರವಿ
ಮಂಗಳೂರು: ಲವ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿಗೆ ತರುವ ವಿಚಾರವಾಗಿ ಸಿಎಂ, ಸಚಿವರು ಕಾನೂನಿನ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಶುದ್ಧ ಪ್ರೇಮ ಬೇರೆ, ಮತಾಂತರಕ್ಕಾಗಿ ಪ್ರೇಮ ಬೇರೆ. ಮೋಸದ ಪ್ರೇಮ ಮತ್ತು ಮತಾಂತರದ ವಿರುದ್ಧ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮದ ಅಪೇಕ್ಷೆ ಇದೆ. ಆದಷ್ಟು ಶೀಘ್ರ ಕಾಯ್ದೆಯಾಗಲಿ ಎಂದು ಬಯಸುವೆ ಎಂದು ಸಿ.ಟಿ.ರವಿ ಹೇಳಿದರು.
ಸಮಾಜ ಹಾಗೂ ಕುಟುಂಬ ನೆಮ್ಮದಿಯಿಂದ ಇರಲು ಕಾಯ್ದೆ ಜಾರಿಯಾಗಬೇಕು. ನಾನು ಟ್ವೀಟ್ ಮಾಡಿದ ಬಳಿಕ ಸಾಕಷ್ಟು ಫೋನ್ ಕರೆ ಬಂದಿದೆ. ಹಲವು ಜನ ಅಹವಾಲು ನೀಡಿದ್ದಾರೆ. ಇದು ಕೊನೆಯಾಗಬೇಕು ಎಂದರೆ ಕಠಿಣ ಕಾನೂನು ತರಬೇಕು. ಸಮಾಜ,ಕುಟುಂಬ ಜಾಗೃತಿಗೆ ಈ ಕಾಯ್ದೆ ಬಲ ನೀಡಲಿದೆ ಎಂದು ಸಿ.ಟಿ.ರವಿ ಹೇಳಿದರು.



