ಜನರಿಗೆ 250 ದಂಡ ಹಾಕ್ತೀರಿ, ರಾಜಕಾರಣಿಗಳ ವಿರುದ್ಧ ಯಾಕೆ ಕ್ರಮ ಕೈಗೊಳಲ್ಲ.. ಕೇಳಿತು ಕೋರ್ಟ್!
ಬೆಂಗಳೂರು: ಜನಸಾಮಾನ್ಯರಿಗೆ 250 ರೂಪಾಯಿ ದಂಡ ವಿಧಿಸುತ್ತೀರಿ. ಆದರೆ ರಾಜಕಾರಣಿಗಳ ವಿರುದ್ಧ ಯಾವುದೇ ಕ್ರಮವಿಲ್ಲ. ಮಾಸ್ಕ್ ನಿಯಮ ಉಲ್ಲಂಘಿಸಿದವರ ಮೇಲೆ ಎಫ್ಐಆರ್ ಏಕೆ ದಾಖಲಿಸಿಲ್ಲ? ಗಂಭೀರ ಸೆಕ್ಷನ್‌ಗಳಡಿ ಏಕೆ ಬಂಧಿಸಿಲ್ಲ? ಎಂದು ರಾಜಕಾರಣಿಗಳಿಂದ ಕೊವಿಡ್ ನಿಯಮಾವಳಿ ಉಲ್ಲಂಘನೆಯಾಗುತ್ತಿರುವುದರ ಬಗ್ಗೆ ದಾಖಲಿಸಲಾದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಇದರಿಂದ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದೀರಿ? ಎಂದೂ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಹಾಕಿದೆ. ಈ ವೇಳೆ ಬಿಬಿಎಂಪಿ 1 ಲಕ್ಷದ 94 ಸಾವಿರ […]

ಬೆಂಗಳೂರು: ಜನಸಾಮಾನ್ಯರಿಗೆ 250 ರೂಪಾಯಿ ದಂಡ ವಿಧಿಸುತ್ತೀರಿ. ಆದರೆ ರಾಜಕಾರಣಿಗಳ ವಿರುದ್ಧ ಯಾವುದೇ ಕ್ರಮವಿಲ್ಲ. ಮಾಸ್ಕ್ ನಿಯಮ ಉಲ್ಲಂಘಿಸಿದವರ ಮೇಲೆ ಎಫ್ಐಆರ್ ಏಕೆ ದಾಖಲಿಸಿಲ್ಲ? ಗಂಭೀರ ಸೆಕ್ಷನ್‌ಗಳಡಿ ಏಕೆ ಬಂಧಿಸಿಲ್ಲ? ಎಂದು ರಾಜಕಾರಣಿಗಳಿಂದ ಕೊವಿಡ್ ನಿಯಮಾವಳಿ ಉಲ್ಲಂಘನೆಯಾಗುತ್ತಿರುವುದರ ಬಗ್ಗೆ ದಾಖಲಿಸಲಾದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಇದರಿಂದ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತಿದ್ದೀರಿ? ಎಂದೂ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಹಾಕಿದೆ.
ಈ ವೇಳೆ ಬಿಬಿಎಂಪಿ 1 ಲಕ್ಷದ 94 ಸಾವಿರ ಕೇಸ್ ದಾಖಲಿಸಿದೆ. 4.33 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ. R.R.ನಗರದ ಬಿಜೆಪಿ ಯುವ ಮೋರ್ಚಾ ಚುನಾವಣಾ ಱಲಿ ಸಂಬಂಧ ಕೇಸ್ ದಾಖಲಿಸಲಾಗಿದೆ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲ್ಗೋಳ್ ಹೈಕೋರ್ಟ್‌ಗೆ ಮಾಹಿತಿ ನೀಡಿದರು.
ಈ ನಡುವೆ, ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ ನೀಡಿದೆ. ಪುತ್ತಿಗೆ ರಮೇಶ್ ಹಾಗೂ ಜಿ.ಆರ್.ಮೋಹನ್ ಎಂಬುವವರು ಈ ಕುರಿತು ಪಿಐಎಲ್ ಅರ್ಜಿ ಸಲ್ಲಿಸಿದ್ದರು.
Published On - 2:42 pm, Thu, 5 November 20



