ವರವಾಗಬೇಕಿದ್ದ ಕಾಲುವೆ ರೈತರಿಗೆ ಶಾಪವಾಗಿದೆ, ಅಧಿಕಾರಿಗಳ ಯಡವಟ್ಟಿಂದ ಅನ್ನದಾತ ಉಪವಾಸ
ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ. ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ […]

ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯಿಂದ ಭರಪೂರ ನೀರು ಬರುತ್ತೆ. ಜಮೀನುಗಳಲ್ಲಿ ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗುತ್ತೆ ಅಂತಾ ಅಲ್ಲಿನ ಜನರು ಸಖತ್ ಖುಷಿಪಟ್ಟಿದ್ರು. ಆದ್ರೆ ಆ ಕಾಲುವೆ ಅಲ್ಲಿನ ರೈತರಿಗೆ ವರವಾಗೋ ಬದಲು ಶಾಪವಾಗಿ ಪರಿಣಮಿಸಿದೆ. ಕಾಲುವೆಗೆ ಬರೋ ನೀರು ಅಧಿಕಾರಿಗಳ ಯಡವಟ್ಟಿನಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಜಲಾವೃತ ಆಗುವಂತೆ ಮಾಡಿದೆ.
ಅವೈಜ್ಞಾನಿಕ ಕಾಲುವೆಯಿಂದ ಬೆಳೆ ಜಲಾವೃತ: ಹಾವೇರಿ ತಾಲೂಕಿನ ಕೂರಗುಂದ ಗ್ರಾಮದ ಬಳಿಯ ರೈತರ ಜಮೀನಿನಲ್ಲಿ ನೀರು ನಿಂತಿದೆ. ಗ್ರಾಮದ ಬಳಿ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣ ಆಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ ಕಾಲುವೆಗೆ ನೀರು ಬರುತ್ತದೆ. ಕಾಲುವೆಗಳ ಮೂಲಕ ರೈತರು ನೀರಾವರಿ ಕೃಷಿ ಮಾಡೋಕೆ ಅನುಕೂಲ ಆಗಲಿ ಅಂತಾ ಕಾಲುವೆಗಳು ನಿರ್ಮಾಣ ಆಗಿವೆ.
ಕಾಲವೆಗಳಲ್ಲಿ ಭರಪೂರ ನೀರು ಬರುತ್ತೆ. ಆದ್ರೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಗಳು ಗ್ರಾಮದ ರೈತರಿಗೆ ಅನುಕೂಲ ಆಗೋ ಬದಲು ಶಾಪವಾಗಿವೆ. ಯಾಕಂದ್ರೆ ಕಾಲುವೆ ನೀರು ಗ್ರಾಮದ ರೈತರ 500 ಕ್ಕೂ ಅಧಿಕ ಎಕರೆ ಜಮೀನಿಗೆ ನುಗ್ಗುತ್ತದೆ. ಇದ್ರಿಂದ ಬಹಳಷ್ಟು ಖರ್ಚು ಮಾಡಿ ಬೆಳೆದ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಹಾಳಾಗಿ ಹೋಗ್ತಿವೆ.
ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು: ಕಳೆದ ಮೂರ್ನಾಲ್ಕು ವರ್ಷಗಳಿಂದ ಗ್ರಾಮದ ಐನೂರಕ್ಕೂ ಅಧಿಕ ಎಕರೆ ಜಮೀನಿನ ರೈತರಿಗೆ ಎಲ್ಲಿಲ್ಲದ ಸಂಕಟ ಎದುರಾಗ್ತಿದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕಾಲುವೆ ನೀರು ನಿರಂತರವಾಗಿ ರೈತರ ಜಮೀನಿನಲ್ಲಿ ಹರಿಯುತ್ತದೆ. ಇದ್ರಿಂದ ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾಳಾಗ್ತಿವೆ, ಕೊಳೆತು ಹೋಗ್ತಿವೆ. ಮತ್ತೊಂದೆಡೆ ಕೆಲವು ರೈತರ ಜಮೀನುಗಳಲ್ಲಿ ಮೆಕ್ಕೆಜೋಳ, ಕಬ್ಬು ಫಸಲು ಬಂದಿದೆ. ಆದ್ರೆ ಜಮೀನುಗಳು ಕಾಲುವೆ ನೀರಿನಿಂದ ಜಲಾವೃತ ಆಗಿದ್ದರಿಂದ ಫಸಲು ಕೂಡ ಕೈ ಸೇರದಂಥ ಪರಿಸ್ಥಿತಿ ಎದುರಾಗಿದೆ.
ಬಹಳಷ್ಟು ಸಾಲ ಮಾಡಿ ಬೆಳೆದಿರೋ ರೇಷ್ಮೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಹೋಮ ಮಾಡಿದಂತಾಗಿ ಕೊಳೆತು ಹಾಳಾಗಿವೆ. ಇತ್ತ ಸಾಲ ಕೊಟ್ಟ ಬ್ಯಾಂಕ್, ಫೈನಾನ್ಸ್ಗಳು ಸಾಲ ತುಂಬುವಂತೆ ರೈತರ ದುಂಬಾಲು ಬಿದ್ದಿವೆ. ಹೀಗಾಗಿ ಗ್ರಾಮದ ರೈತರು ದಿಕ್ಕು ತೋಚದಂತಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ರೈತರು ತಿಳಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗೆ ಆದ್ರೆ ನಮ್ಮ ಗತಿ ಏನು ಅಂತ ಬೆಳೆ ಹಾನಿಗೊಳಗಾದ ರೈತರು ಕಣ್ಣೀರು ಹಾಕಿದ್ದಾರೆ.

Published On - 3:17 pm, Thu, 5 November 20




