ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್​ನಲ್ಲಿ ಈ ಬಾರಿ ಭಕ್ತರಿಗಿಲ್ಲ ನೇರ ದರ್ಶನ ಭಾಗ್ಯ, ಆದರೆ..

ಬೆಂಗಳೂರು:ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಆಡಳಿತವರ್ಗವು ಧಾರ್ಮಿಕ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ. ಇದೀಗ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇಸ್ಕಾನ್ ದೇಗುಲದ ಆಡಳಿತ ಮಂಡಳಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ, ಈ ಸಲ ಭಕ್ತರಿಗೆ ನೇರ ದರ್ಶನಕ್ಕೆ ಪ್ರವೇಶ ನಿರಾಕರಿಸಿದೆ. ಆದರೆ, ಭಕ್ತರ ಅನುಕೂಲಕ್ಕಾಗಿ ದೇಗುಲದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಭಕ್ತರು ಯೂಟ್ಯೂಬ್ ಮುಖಾಂತರ ವೀಕ್ಷಿಸಬಹುದು ಎಂಬ ಮಾಹಿತಿ ನೀಡಿದೆ. ದೇವಸ್ಥಾನದಲ್ಲಿ […]

ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್​ನಲ್ಲಿ ಈ ಬಾರಿ ಭಕ್ತರಿಗಿಲ್ಲ ನೇರ ದರ್ಶನ ಭಾಗ್ಯ, ಆದರೆ..
ಸಾಧು ಶ್ರೀನಾಥ್​ Edited By:

Updated on: Jul 27, 2020 | 3:07 PM

ಬೆಂಗಳೂರು:ಕೊರೊನಾ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಆಡಳಿತವರ್ಗವು ಧಾರ್ಮಿಕ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಹಾಕಿದೆ.

ಇದೀಗ ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಇಸ್ಕಾನ್ ದೇಗುಲದ ಆಡಳಿತ ಮಂಡಳಿ ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಆಚರಿಸಲು ನಿರ್ಧರಿಸಿದೆ. ಹೀಗಾಗಿ, ಈ ಸಲ ಭಕ್ತರಿಗೆ ನೇರ ದರ್ಶನಕ್ಕೆ ಪ್ರವೇಶ ನಿರಾಕರಿಸಿದೆ.

ಆದರೆ, ಭಕ್ತರ ಅನುಕೂಲಕ್ಕಾಗಿ ದೇಗುಲದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿಯ ಆಚರಣೆಯನ್ನು ಭಕ್ತರು ಯೂಟ್ಯೂಬ್ ಮುಖಾಂತರ ವೀಕ್ಷಿಸಬಹುದು ಎಂಬ ಮಾಹಿತಿ ನೀಡಿದೆ. ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಪೂಜೆ-ಪುನಸ್ಕಾರ ಹಾಗೂ ಅಭಿಷೇಕವನ್ನು ಯೂಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

Published On - 4:49 pm, Sun, 26 July 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us