ನೆರೆ ಬಳಿಕ ಬರದ ಬರೆ: ಜೀವಪಣಕ್ಕಿಟ್ರೆ ಮಾತ್ರವೇ ಜೀವಜಲ!

|

Updated on: Feb 29, 2020 | 10:47 AM

ಚಿಕ್ಕೋಡಿ: ಕಳೆದ ವರ್ಷವಷ್ಟೇ ಭೀಕರ ಜಲಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದ್ದ ನಾಡಲ್ಲೀಗ ಬರದ ಕಾರ್ಮೋಡ ಆವರಿಸಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಹನಿ ನೀರಿಗಾಗಿ ನಿತ್ಯ ಮೂರು ಕಿಲೋ ಮೀಟರ್ ನಡೆಯುವಂತ ದುಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮಸ್ಥರು ಜೀವಭಯದಲ್ಲೇ ಕುಡಿಯುವ ನೀರು ತರುತ್ತಿದ್ದಾರೆ. ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನರ ಗೋಳು ಕೇಳುವವರೇ ಇಲ್ಲ ಎಂಬಂತಾಗಿದೆ. ನಿತ್ಯವೂ ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಬಾವಿಯಲ್ಲಿ ನೀರು ತರುವ […]

ನೆರೆ ಬಳಿಕ ಬರದ ಬರೆ: ಜೀವಪಣಕ್ಕಿಟ್ರೆ ಮಾತ್ರವೇ ಜೀವಜಲ!
Follow us on

ಚಿಕ್ಕೋಡಿ: ಕಳೆದ ವರ್ಷವಷ್ಟೇ ಭೀಕರ ಜಲಪ್ರವಾಹಕ್ಕೆ ಸಿಲುಕಿ ನಲುಗಿಹೋಗಿದ್ದ ನಾಡಲ್ಲೀಗ ಬರದ ಕಾರ್ಮೋಡ ಆವರಿಸಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಹನಿ ನೀರಿಗಾಗಿ ನಿತ್ಯ ಮೂರು ಕಿಲೋ ಮೀಟರ್ ನಡೆಯುವಂತ ದುಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮಸ್ಥರು ಜೀವಭಯದಲ್ಲೇ ಕುಡಿಯುವ ನೀರು ತರುತ್ತಿದ್ದಾರೆ.

ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಪ್ರತಿನಿಧಿಸುವ ಕ್ಷೇತ್ರದಲ್ಲಿ ಜನರ ಗೋಳು ಕೇಳುವವರೇ ಇಲ್ಲ ಎಂಬಂತಾಗಿದೆ. ನಿತ್ಯವೂ ಮೂರು ಕಿಲೋ ಮೀಟರ್ ನಡೆದುಕೊಂಡು ಹೋಗಿ ಬಾವಿಯಲ್ಲಿ ನೀರು ತರುವ ಕೆಲಸ ಮಾಡುತ್ತಿದ್ದಾರೆ. 50 ಅಡಿ ಆಳದ ಬಾವಿಗೆ ಇಳಿದು ಮಹಿಳೆಯರು ನೀರು ತರುತ್ತಿದ್ದಾರೆ. ಸ್ವಲ್ಪ ಯಾಮಾರಿ ಕಾಲು ಜಾರಿದ್ರೂ ಸಾವು ಕಟ್ಟಿಟ್ಟಬುತ್ತಿಯಾಗಿದೆ. ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ನೀರಿನ ಗೋಳು ತಪ್ಪಿಲ್ಲ.

ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ:
ವಡ್ರಾಳ ಗ್ರಾಮಕ್ಕೆ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡುತ್ತೇವೆ. ಸದ್ಯ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡ್ತೇವೆ. ಶಾಶ್ವತ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಟಿವಿ9ಗೆ ಬಿಜೆಪಿ ಶಾಸಕ ದುರ್ಯೋದನ ಐಹೊಳೆ ಪ್ರತಿಕ್ರಿಯೆ ನೀಡಿದ್ದಾರೆ.








Published On - 10:36 am, Sat, 29 February 20