ಸಿಲ್ಕ್ ಸ್ಯಾರಿ ಖರೀದಿಸಿ ದೋಖಾ: ಕಿಡ್ನ್ಯಾಪ್​ ಕೇಸ್ ಕೊಟ್ಟು ತಗಲಾಕ್ಕೊಂಡ ವಂಚಕಿ!

ಸಿಲ್ಕ್ ಸ್ಯಾರಿ ಖರೀದಿಸಿ ದೋಖಾ: ಕಿಡ್ನ್ಯಾಪ್​ ಕೇಸ್ ಕೊಟ್ಟು ತಗಲಾಕ್ಕೊಂಡ ವಂಚಕಿ!

ದೇವನಹಳ್ಳಿ: ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ನೀಡಿ ಕೊನೆಗೆ ವಂಚಕಿಯೇ ಪೊಲೀಸರ ಕೈಗೆ ತಗ್ಲಾಕ್ಕೊಂಡಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನ ಪಡೆದು ಹಣ ನೀಡದೆ ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಹೇಳಿ ಸೀರೆಗಳನ್ನ ಪಡೆಯುತ್ತಿದ್ದ ವಂಚಕಿ, ಅಕ್ಕ-ಪಕ್ಕದ ಮನೆಗಳಲ್ಲಿ ನೇಯ್ದ ಸೀರೆಗಳನ್ನ ತಂದುಕೊಟ್ಟ ನೇಕಾರರಿಗೆ ಮಕ್ಮಲ್ ಟೋಪಿ ಹಾಕ್ತಿದ್ಲು. ಆರೋಪಿ ಶಶಿಕಲಾ ನಂಬಿ ಸೀರೆಗಳನ್ನ ನೀಡಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. […]

sadhu srinath

|

Feb 29, 2020 | 8:29 AM

ದೇವನಹಳ್ಳಿ: ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ನೀಡಿ ಕೊನೆಗೆ ವಂಚಕಿಯೇ ಪೊಲೀಸರ ಕೈಗೆ ತಗ್ಲಾಕ್ಕೊಂಡಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನ ಪಡೆದು ಹಣ ನೀಡದೆ ವಂಚಿಸುತ್ತಿದ್ದ ಕಿಲಾಡಿ ಮಹಿಳೆಯನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಹೇಳಿ ಸೀರೆಗಳನ್ನ ಪಡೆಯುತ್ತಿದ್ದ ವಂಚಕಿ, ಅಕ್ಕ-ಪಕ್ಕದ ಮನೆಗಳಲ್ಲಿ ನೇಯ್ದ ಸೀರೆಗಳನ್ನ ತಂದುಕೊಟ್ಟ ನೇಕಾರರಿಗೆ ಮಕ್ಮಲ್ ಟೋಪಿ ಹಾಕ್ತಿದ್ಲು. ಆರೋಪಿ ಶಶಿಕಲಾ ನಂಬಿ ಸೀರೆಗಳನ್ನ ನೀಡಿ ಹಲವು ಕುಟುಂಬಗಳು ಬೀದಿಗೆ ಬಂದಿವೆ.

ಕಿಡ್ನ್ಯಾಪ್ ಕೇಸ್ ನೀಡಿ ಸಿಕ್ಕಿಬಿದ್ದ ವಂಚಕಿ: ಧರ್ಮವರಂ, ಹಿಂದೂಪುರ ಮತ್ತು ಬೆಂಗಳೂರಿನ ಹಲವು ಕಡೆ ಸಾಕಷ್ಟು ಜನ ನೇಕಾರರಿಗೆ ಮಹಿಳೆ ವಂಚಿಸಿದ್ದಾಳೆ. ಮೊದಲಿಗೆ ಒಂದೆರೆಡು ಲಕ್ಷ ಹಣ ಕೊಟ್ಟು ನೂರಾರು ರೇಷ್ಮೆ ಸೀರೆಗಳನ್ನ ಮಹಿಳೆ ಪಡೆಯುತ್ತಿದ್ದಳು. ನಂತರ ಬೌನ್ಸ್ ಚೆಕ್​ಗಳನ್ನ ನೀಡಿ ಸೀರೆ ಕೊಟ್ಟವರಿಗೆ ಧಮ್ಕಿ ಹಾಕುತ್ತಿದ್ದಳು. ವಂಚನೆಗೊಳಗಾದವರು ಪೊಲೀಸರಿಗೆ ದೂರು ಕೊಡಲು ಬಂದ್ರೆ ಹಣ ಕೊಡುವುದಾಗಿ ಮನೆಗೆ ಕರೆಸಿಕೊಳ್ಳುತ್ತಿದ್ದಳು. ನಂತರ ಮನೆಯಲ್ಲಿ ಅತ್ಯಾಚಾರ ಮತ್ತು ಕಿಡ್ನ್ಯಾಪ್ ಮಾಡಲು ಬಂದಿದ್ರು ಅಂತ ಅವರ ವಿರುದ್ಧವೇ ವಂಚಕಿ ಕೇಸ್ ಹಾಕ್ತಿದ್ಲು.

ಅದೇ ರೀತಿ ಹಣ ಕೇಳಲು ಬಂದ ಆಂಧ್ರ ಮೂಲದವರ ವಿರುದ್ಧವೂ ವಂಚಕಿ ಶಶಿಕಲಾ ಅಪಹರಣ ಕೇಸ್ ದಾಖಲಿಸಿದ್ದಳು. ಫೆಬ್ರವರಿ 27ರಂದು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಲೀಸರ ತನಿಖೆಯ ವೇಳೆ ಶಶಿಕಲಾ ವಂಚನೆ ಬೆಳಕಿಗೆ ಬಂದಿದ್ದು, ದೇವನಹಳ್ಳಿ, ಯಲಹಂಕ, ಬೈಯ್ಯಪ್ಪನಹಳ್ಳಿ, ಬಾಣಸವಾಡಿ ಸೇರಿದಂತೆ ಆಂಧ್ರದಲ್ಲಿ ಹಲವರಿಗೆ ವಂಚನೆ ಮಾಡಿರುವುದು ಬಯಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದ ದೇವನಹಳ್ಳಿ ಪಿಎಸ್ಐ ನಾಗರಾಜ್ ವಂಚಕಿ ಶಶಿಕಲಾರನ್ನು ಬಂಧಿಸಿದ್ದಾರೆ. ಆಂಧ್ರದಲ್ಲಿ ಓರ್ವ ಮಾಜಿ ಶಾಸಕನಿಗೂ ವಂಚಿಸಿ ಅವನ ವಿರುದ್ಧವೇ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada