ಕೊರೊನಾ.. ನುಂಗಿಬಿಡ್ತು ನೇಕಾರನ ಪ್ರಾಣ, ಪತ್ನಿ 4 ದಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು

| Updated By: ಸಾಧು ಶ್ರೀನಾಥ್​

Updated on: Jun 23, 2020 | 6:06 PM

ದೊಡ್ಡಬಳ್ಳಾಪುರ: ಕೊರೊನಾ ಮಹಾಮಾರಿ ದೇಶದಲ್ಲಿ ಹಲವಾರು ಸೋಂಕಿತರನ್ನ ನೇರವಾಗಿ ಬಲಿ ಪಡೆಯುತ್ತಿದ್ದರೆ ಇನ್ನೊಂದೆಡೆ ಅದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಂದ ಹಲವಾರು ಜನ ಪ್ರಾಣ ಬಿಡುವಂಥ ದುಃಸ್ಥಿತಿ ಉಂಟಾಗಿದೆ. ಇಂಥದ್ದೇ ಒಂದು ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ. ಸಂಕಷ್ಟಗಳು ಶುರುವಾಗಿದ್ದೇ ಲಾಕ್​ಡೌನ್​ ಸಮಯದಲ್ಲಿ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ 45 ವರ್ಷದ ನಾರಾಯಣ ಎಂಬುವವರು ಬಾಡಿಗೆಗೆ ಮಗ್ಗ ಪಡೆದು ನೇಕಾರಿಕೆ ಮಾಡುತ್ತಿದ್ದರು. ಹೇಗೋ ಬದುಕು ಸಾಗಿಸುತ್ತಿದ್ದ ಅವರಿಗೆ ಸಂಕಷ್ಟಗಳು ಶುರುವಾಗಿದ್ದೇ ಲಾಕ್​ಡೌನ್​ ಸಮಯದಲ್ಲಿ. ವ್ಯಾಪಾರ ವಹಿವಾಟು […]

ಕೊರೊನಾ.. ನುಂಗಿಬಿಡ್ತು ನೇಕಾರನ ಪ್ರಾಣ, ಪತ್ನಿ 4 ದಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು
Follow us on

ದೊಡ್ಡಬಳ್ಳಾಪುರ: ಕೊರೊನಾ ಮಹಾಮಾರಿ ದೇಶದಲ್ಲಿ ಹಲವಾರು ಸೋಂಕಿತರನ್ನ ನೇರವಾಗಿ ಬಲಿ ಪಡೆಯುತ್ತಿದ್ದರೆ ಇನ್ನೊಂದೆಡೆ ಅದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟಗಳಿಂದ ಹಲವಾರು ಜನ ಪ್ರಾಣ ಬಿಡುವಂಥ ದುಃಸ್ಥಿತಿ ಉಂಟಾಗಿದೆ. ಇಂಥದ್ದೇ ಒಂದು ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ.

ಸಂಕಷ್ಟಗಳು ಶುರುವಾಗಿದ್ದೇ ಲಾಕ್​ಡೌನ್​ ಸಮಯದಲ್ಲಿ
ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿ ವಾಸವಾಗಿದ್ದ 45 ವರ್ಷದ ನಾರಾಯಣ ಎಂಬುವವರು ಬಾಡಿಗೆಗೆ ಮಗ್ಗ ಪಡೆದು ನೇಕಾರಿಕೆ ಮಾಡುತ್ತಿದ್ದರು. ಹೇಗೋ ಬದುಕು ಸಾಗಿಸುತ್ತಿದ್ದ ಅವರಿಗೆ ಸಂಕಷ್ಟಗಳು ಶುರುವಾಗಿದ್ದೇ ಲಾಕ್​ಡೌನ್​ ಸಮಯದಲ್ಲಿ. ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡು ಜೀವನ ನಡೆಸುವುದೇ ಕಷ್ಟವಾಗಿಬಿಡ್ತು. ಒಂದು ಕಡೆ ಮಗ್ಗದ ಬಾಡಿಗೆ ಮತ್ತು ಕರೆಂಟ್​ ಬಿಲ್​ನ ಹೊಡೆತ ಮತ್ತೊಂದ್ಕಡೆ ಸಾಲಬಾಧೆ. ಇವೆರಡರ ಮಧ್ಯೆ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದರು.

ಪತ್ನಿ 4 ದಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು
ಇತ್ತ ಮನೆಯಲ್ಲಿ ಕುಟುಂಬದ ನಿರ್ವಹಣೆ ಮಾಡಲಾಗದೆ ಅವರ ಪತ್ನಿ ಮಂಜುಳಾ ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವೆಲ್ಲವುದರಿಂದ ಬೇಸತ್ತ ನಾರಾಯಣ ಇಂದು ನೇಣಿಗೆ ಶರಣಾಗಿದ್ದಾರೆ.