AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Strabismus: ಸ್ಟ್ರಾಬಿಸ್ಮಸ್ ಎಂದರೇನು? ಈ ಸಮಸ್ಯೆ ಕಂಡುಬರಲು ಕಾರಣವೇನು?

ಕಣ್ಣಿನ ಸ್ನಾಯುಗಳ ಅಸಮರ್ಪಕ ಸಮತೋಲನ, ಕಣ್ಣಿನ ಸ್ನಾಯುಗಳಿಗೆ ದೋಷಯುಕ್ತ ನರ ಸಂಕೇತಗಳು ಮತ್ತು ಕೇಂದ್ರೀಕರಿಸುವ ದೋಷಗಳು ಮುಂತಾದ ಸಮಸ್ಯೆಗಳನ್ನು ಒಳಗೊಂಡಿದೆ.

Strabismus: ಸ್ಟ್ರಾಬಿಸ್ಮಸ್ ಎಂದರೇನು? ಈ ಸಮಸ್ಯೆ ಕಂಡುಬರಲು ಕಾರಣವೇನು?
StrabismusImage Credit source: Vitreous Retina Macula Consultants of New York
TV9 Web
| Edited By: |

Updated on: Nov 29, 2022 | 5:42 PM

Share

ಸ್ಟ್ರಾಬಿಸ್ಮಸ್(strabismus) ಎಂದು ಕರೆಯಲ್ಪಡುವ ಈ ಸಮಸ್ಯೆಯು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿದ್ದವರ ಕಣ್ಣಿನ ದೃಷ್ಟಿ ವಿವಿಧ ದಿಕ್ಕುಗಳ ಕಡೆ ನೋಡಿದಂತೆ ಇರುತ್ತದೆ. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ಕಾಯಿಲೆಯಾಗಿದೆ. ಇದು ಕೇವಲ ಮಕ್ಕಳಲ್ಲಿ ಮಾತ್ರವಲ್ಲದೇ ಎಲ್ಲಾ ವಯಸ್ಸಿನವರಲ್ಲಿ ಸಂಭವಿಸಬಹುದು. ಒಂದು ಕಣ್ಣು ಒಳಗೆ, ಹೊರಗೆ, ಮೇಲಕ್ಕೆ ಅಥವಾ ಕೆಳಕ್ಕೆ ತಿರುಗಬಹುದು. ಈ ತರಹದ ಲಕ್ಷಣವನ್ನು ಹೊಂದಿರುತ್ತದೆ.

ಕಣ್ಣಿನ ಸ್ನಾಯುವಿನ ನಿಯಂತ್ರಣದ ಕಾರಣದಿಂದಾಗಿ ಈ ಅಸ್ವಸ್ಥತೆಯು ಸಾಮಾನ್ಯವಾಗಿ ಸಂಭವಿಸುತ್ತದೆ. ಅಂದರೆ ಕಣ್ಣಿನ ಸ್ನಾಯುಗಳ ಅಸಮರ್ಪಕ ಸಮತೋಲನ, ಕಣ್ಣಿನ ಸ್ನಾಯುಗಳಿಗೆ ದೋಷಯುಕ್ತ ನರ ಸಂಕೇತಗಳು ಮತ್ತು ಕೇಂದ್ರೀಕರಿಸುವ ದೋಷಗಳು ಮುಂತಾದ ಸಮಸ್ಯೆಗಳನ್ನು ಒಳಗೊಂಡಿದೆ. ಈ ಸಮಸ್ಯೆಗಳಿಂದಾಗಿ, ಕಣ್ಣುಗುಡ್ಡೆಗಳು ಒಂದೇ ತರ ಅಥವಾ ಸಮಾಂತರದಲ್ಲಿ ಇಲ್ಲದಿರುವುದು.

ಸ್ಟ್ರಾಬಿಸ್ಮಸ್(strabismus) ಕಾರಣಗಳು: ಕಣ್ಣಿನ ಸ್ನಾಯುಗಳು, ಸ್ನಾಯುಗಳಿಗೆ ಮಾಹಿತಿಯನ್ನು ರವಾನಿಸುವ ನರಗಳು ಅಥವಾ ಕಣ್ಣಿನ ಚಲನೆಯನ್ನು ನಿರ್ದೇಶಿಸುವ ಮೆದುಳಿನಲ್ಲಿರುವ ನಿಯಂತ್ರಣ ಕೇಂದ್ರದ ಸಮಸ್ಯೆಗಳಿಂದ ಸ್ಟ್ರಾಬಿಸ್ಮಸ್ ಉಂಟಾಗಬಹುದು. ಇದು ಇತರ ಸಾಮಾನ್ಯ ಆರೋಗ್ಯ ಪರಿಸ್ಥಿತಿಗಳು ಅಥವಾ ಕಣ್ಣಿನ ಗಾಯಗಳಿಂದ ಕೂಡ ಬೆಳೆಯಬಹುದು. ಸ್ಟ್ರಾಬಿಸ್ಮಸ್ ಹೊಂದಿರುವ ಪೋಷಕರು ಅಥವಾ ಒಡಹುಟ್ಟಿದವರೊಂದಿಗಿನ ವಂಶಪಾರಂಪರ್ಯವಾಗಿ ಬರುವ ಸಾಧ್ಯತೆಗಳು ಕೂಡ ಇದೆ. ಪಾರ್ಶ್ವವಾಯು ಅಥವಾ ತಲೆಗೆ ಗಾಯವಾದವರಲ್ಲಿ ಸ್ಟ್ರಾಬಿಸ್ಮಸ್ ಕಂಡು ಬರುವ ಸಾಧ್ಯತೆಗಳೂ ಕೂಡ ಇದೆ

ಇದನ್ನು ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಪೇರಲೆ ಹಣ್ಣನ್ನು ತಿನ್ನಬೇಡಿ, ಆರೋಗ್ಯದ ಮೇಲೆ ಪರಿಣಾಮ ಬೀರಬಹುದು

ಸ್ಟ್ರಾಬೆರಿಗಳು, ಬ್ಲ್ಯಾಕ್‌ಬೆರಿಗಳು ಮುಂತಾದ ಬೆರಿಹಣ್ಣುಗಳು ಆರೋಗ್ಯಕರವಾಗಿ ಕಾರ್ಯನಿರ್ವಹಿಸುವ ಕಣ್ಣುಗಳಿಗೆ ಉತ್ತಮವಾದ ಆಹಾರವಾಗಿದೆ. ಬೆರ್ರಿಗಳು ಪೌಷ್ಠಿಕಾಂಶದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ