ನೀವು ಕಂಪ್ಯೂಟರ್ನಲ್ಲಿ ವಾಟ್ಸ್ಆ್ಯಪ್ ಬಳಕೆದಾರರೇ? ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ನಿಮ್ಮ ಕಂಪ್ಯೂಟರ್ನಲ್ಲಿ ಅಳವಡಿಸಿಕೊಂಡು ವಾಟ್ಸ್ಆ್ಯಪ್ ಬಳಸುತ್ತೀರೇ? ಕಂಪ್ಯೂಟರ್ನಲ್ಲಿ ವಾಟ್ಸ್ಆ್ಯಪ್ ಬಳಸುವಾಗ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಸೌಲಭ್ಯ ಬೇಕಿತ್ತು ಎಂದು ಅನಿಸುತ್ತಿದ್ದರೆ ನಿಮಗೆ ಸಂತಸದ ಸುದ್ದಿಯೊಂದು ಕಾದಿದೆ. ನೀವು ಬಳಸುವ ವಿಂಡೋಸ್ ಅಥವಾ ಆ್ಯಪಲ್ ಸಿಸ್ಟಮ್ನಲ್ಲಿ ಬಳಸುವ ವಾಟ್ಸ್ಆ್ಯಪ್ನಲ್ಲೂ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್ಆ್ಯಪ್ ನೀಡಲಿದೆ.
ಸದ್ಯ ಒಮ್ಮೆ ಒಬ್ಬರಿಗೆ ಮಾತ್ರ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಸೌಲಭ್ಯ ಒದಗಿಸಲಾಗಿದ್ದು, ಗ್ರೂಪ್ ವಿಡಿಯೋ ಕಾಲ್ ಮತ್ತು ವಾಯ್ಸ್ ಕಾಲ್ಗೆ ಅವಕಾಶ ನೀಡಿಲ್ಲ. ಆದರೆ ಒಮ್ಮೆಗೆ 8 ಜನರಿಗೆ ವಿಡಿಯೋ ಕಾಲ್ ಅಥವಾ ವಾಯ್ಸ್ ಕಾಲ್ ಮಾಡಬಹುದಾಗಿದೆ. ಇನ್ನೂ ಹೆಚ್ಚು ಜನರು ಒಟ್ಟಿಗೆ ವಿಡಿಯೊ ಕಾಲ್ ಮಾಡುವ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ನೀಡುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ.
Sometimes you just need a little more space. Secure and reliable, end-to-end encrypted voice and video calls are now available on our desktop app. Download now: https://t.co/JCc3rUunoU pic.twitter.com/PgCl76Mn7U
— WhatsApp (@WhatsApp) March 4, 2021
ಈ ಸೌಲಭ್ಯ ಪಡೆಯಲು ವಾಟ್ಸ್ಆ್ಯಪ್ ವೆಬ್ಸೈಟ್ನಿಂದ ವಾಟ್ಸ್ಆ್ಯಪ್ ಆ್ಯಪ್ನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ನಲ್ಲೂ ಅದೇ ಖಾತೆಯ ವಾಟ್ಸ್ಆ್ಯಪ್ ಇರಿಸಿಕೊಂಡು, ಕಂಪ್ಯೂಟರ್ನ ವಾಟ್ಸ್ಆ್ಯಪ್ನಲ್ಲಿ ಸ್ಕ್ಯಾನ್ ಮಾಡಿ ಓಪನ್ ಮಾಡಬೇಕು. ಈ ಮೂಲಕ ಕಂಪ್ಯೂಟರ್ನಲ್ಲಿ ಆ್ಯಪ್ ಮೂಲಕ ವಾಟ್ಸ್ಆ್ಯಪ್ ಬಳಸಬಹುದು.
ಫೇಸ್ಬುಕ್ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಖಾಸಗಿ ಸಂವಹನಕ್ಕೊಂದೇ ಅಲ್ಲದೇ, ಉದ್ಯೋಗ, ಉದ್ಯಮ ನಡೆಸಲು ಸಹ ಸಹಕಾರಿಯಾಗಿದೆ. ಸದ್ಯ ವಾಟ್ಸ್ಆ್ಯಪ್ ವೆಬ್ನಲ್ಲಿ ಈ ಸೌಲಭ್ಯ ನೀಡಲಾಗಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ವೆಬ್ನಲ್ಲೂ ಈ ಸೌಲಭ್ಯ ನೀಡಬೇಕೆಂಬ ಒತ್ತಾಯ ಗ್ರಾಹಕರಿಂದ ಕೇಳಿಬರುವುದಂತೂ ಗ್ಯಾರಂಟಿ.
ವಾಟ್ಸ್ಆ್ಯಪ್ ವೆಬ್ ಬಗ್ಗೆ ಇದೆ ಆತಂಕ
ವಾಟ್ಸ್ಆ್ಯಪ್ ತನ್ನ ಪಾಲಿಸಿಯನ್ನು ಬದಲಾಯಿಸಿದ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಮಧ್ಯೆ ಸ್ಪಷ್ಟನೆ ನೀಡಿರುವ ಸಂಸ್ಥೆ ಯಾವುದೇ ಕಾರಣ ವೈಯಕ್ತಿಕ ಚ್ಯಾಟ್ಗಳು ಸೋರಿಕೆ ಆಗುವುದಿಲ್ಲ ಎಂದು ಹೇಳಿತ್ತು. ಹೀಗಿರುವಾಗಲೇ ಗೂಗಲ್ನಲ್ಲಿ ವಾಟ್ಸ್ಆ್ಯಪ್ ಚಾಟ್ ಸೋರಿಕೆ ಆಗಿರುವ ವಿಚಾರ ಬಯಲಾಗಿತ್ತು.
ವಾಟ್ಸ್ಆ್ಯಪ್ ವೆಬ್ನಿಂದ ಕೆಲ ಚಾಟ್ಗಳು ಲೀಕ್ ಆಗಿರುವ ಬಗ್ಗೆ ವರದಿ ಆಗಿದೆ. ವೆಬ್ನಲ್ಲಿರುವ ಸಮಸ್ಯೆಯಿಂದ ಈ ಸೋರಿಕೆ ಉಂಟಾಗಿದೆ. ಕೇವಲ ಒಂದು ಸರ್ಚ್ನಿಂದ ಖಾಸಗಿ ಚ್ಯಾಟ್ಗಳು ಸಾರ್ವಜನಿಕರಿಗೆ ಸಿಗುವಂತಾಗಿದೆ. ಇದು ವಾಟ್ಸ್ಆ್ಯಪ್ ಭದ್ರತೆ ಬಗ್ಗೆ ಪ್ರಶ್ನೆ ಮಾಡಿದೆ.
ಒಂದು ಗೂಗಲ್ ಸರ್ಚ್ನಿಂದ ವಾಟ್ಸ್ಆ್ಯಪ್ ಚಾಟ್ ಹಾಗೂ ಕಾಂಟ್ಯಾಕ್ಟ್ಗಳು ಲಭ್ಯವಾಗುತ್ತಿದೆ. ಸೈಬರ್ ಕಳ್ಳರು ಈ ಮಾಹಿತಿ ಬಳಕೆ ಮಾಡಿಕೊಂಡು ಸುಲಭವಾಗಿ ಫಿಶಿಂಗ್ ನಡೆಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆದರೆ ವಾಟ್ಸ್ಆ್ಯಪ್ ವೆಬ್ಗೂ ವಾಟ್ಸ್ಆ್ಯಪ್ ಅಪ್ಲಿಕೇಶನ್ಗೂ ವ್ಯತ್ಯಾಸಗಳಿದ್ದು, ಕಂಪ್ಯೂಟರ್ನಲ್ಲಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಬಳಸಿ ಸುಲಭವಾಗಿ ಸಂದೇಶ ವಿನಿಮಯ ಮಾಡಬಹುದಾಗಿದೆ. ಇದೀಗ ವಿಂಡೋಸ್ ಅಥವಾ ಆ್ಯಪಲ್ ಸಿಸ್ಟಮ್ನಲ್ಲಿ ಬಳಸುವ ವಾಟ್ಸ್ಆ್ಯಪ್ನಲ್ಲೂ ವಿಡಿಯೋ ಕಾಲ್, ವಾಯ್ಸ್ ಕಾಲ್ ಮಾಡುವ ಹೊಸ ಸೌಲಭ್ಯವನ್ನು ವಾಟ್ಸ್ಆ್ಯಪ್ ನೀಡಲಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಹೊಸ ಪ್ರೈವೆಸಿ ಪಾಲಿಸಿಯಲ್ಲಿ ಭಾರತೀಯರಿಗೆ ತಾರತಮ್ಯ: ಕೇಂದ್ರ ಸರ್ಕಾರ
WhatsApp Privacy: ವಾಟ್ಸ್ಆ್ಯಪ್ ಗೌಪ್ಯತೆ ನೀತಿಯನ್ನು ಗ್ರಾಹಕರು ಪಾಲಿಸದೇ ಇದ್ದರೆ ಏನಾಗುತ್ತೆ?