ವಾಟ್ಸಾಪ್ ಚಾಟ್ ಕಣ್ಮರೆಯಾಗುತ್ತೆ ಗೊತ್ತಾ.. ಹೊಸ ಸೌಲಭ್ಯ ಬಳಸೋದು ಹೇಗೆ?!
ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನು ನೀಡಿದೆ. ಕಳುಹಿಸಿದ ಸಂದೇಶಗಳು ಏಳು ದಿನಗಳ ಬಳಿಕ ಕಣ್ಮರೆಯಾಗುವಂತೆ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗಾಗಿ ಪರಿಚಯಿಸಿದೆ. ಈ ಆಯ್ಕೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುವ ಮೊದಲು ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಆ್ಯಪ್ ಅಪ್ಡೇಟ್ ಆಗಿದೆಯೇ ಗಮನಿಸಿಕೊಳ್ಳಿ. ಆಂಡ್ರಾಯ್ಡ್ಗೆ 2.21.206.15 ಮತ್ತು ಐಫೋನ್ ಆಗಿದ್ದರೆ 2.21.121.4 ವರ್ಷನ್ ಅಪ್ಡೇಟ್ ಆಗಿರುವಂತೆ ನೋಡಿಕೊಳ್ಳಿ. ನಂತರ ಯಾರ ಮೆಸೇಜ್ ನಿರ್ದಿಷ್ಟ ಸಮಯದ ಬಳಿಕ ಕಣ್ಮರೆಯಾಗಬೇಕೆಂದು ಗುರುತಿಸಿಕೊಳ್ಳಿ. ಅವರ ನಂಬರನ್ನು ವಾಟ್ಸಾಪ್ ಚಾಟ್ನಲ್ಲಿ ಓಪನ್ ಮಾಡಿ. ಕಾಂಟಾಕ್ಟ್ ಇನ್ಫೋ […]

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ ಒಂದನ್ನು ನೀಡಿದೆ. ಕಳುಹಿಸಿದ ಸಂದೇಶಗಳು ಏಳು ದಿನಗಳ ಬಳಿಕ ಕಣ್ಮರೆಯಾಗುವಂತೆ ಹೊಸದೊಂದು ಆಯ್ಕೆಯನ್ನು ಬಳಕೆದಾರರಿಗಾಗಿ ಪರಿಚಯಿಸಿದೆ. ಈ ಆಯ್ಕೆಯನ್ನು ಬಳಸಿಕೊಳ್ಳಲು ಪ್ರಯತ್ನಿಸುವ ಮೊದಲು ನಿಮ್ಮ ಮೊಬೈಲ್ನಲ್ಲಿ ವಾಟ್ಸಾಪ್ ಆ್ಯಪ್ ಅಪ್ಡೇಟ್ ಆಗಿದೆಯೇ ಗಮನಿಸಿಕೊಳ್ಳಿ. ಆಂಡ್ರಾಯ್ಡ್ಗೆ 2.21.206.15 ಮತ್ತು ಐಫೋನ್ ಆಗಿದ್ದರೆ 2.21.121.4 ವರ್ಷನ್ ಅಪ್ಡೇಟ್ ಆಗಿರುವಂತೆ ನೋಡಿಕೊಳ್ಳಿ. ನಂತರ ಯಾರ ಮೆಸೇಜ್ ನಿರ್ದಿಷ್ಟ ಸಮಯದ ಬಳಿಕ ಕಣ್ಮರೆಯಾಗಬೇಕೆಂದು ಗುರುತಿಸಿಕೊಳ್ಳಿ. ಅವರ ನಂಬರನ್ನು ವಾಟ್ಸಾಪ್ ಚಾಟ್ನಲ್ಲಿ ಓಪನ್ ಮಾಡಿ. ಕಾಂಟಾಕ್ಟ್ ಇನ್ಫೋ ತೆರೆದುಕೊಳ್ಳಿ. ಅಲ್ಲಿ Disappearing Messages ಎಂಬ ಆಯ್ಕೆ ಕಾಣುತ್ತದೆ. ಅದನ್ನು ಎನೇಬಲ್ ಮಾಡಿಕೊಳ್ಳಿ. ಈ ಫೀಚರ್ ಡಿಫಾಲ್ಟ್ ಸ್ಥಿತಿಯಲ್ಲಿ ಡಿಸೇಬಲ್ ಆಗಿರುತ್ತೆ. ಅಗತ್ಯ ಎನಿಸಿದರೆ ನೀವಾಗಿಯೇ ಇದನ್ನು ಆನ್ ಮಾಡಿಕೊಳ್ಳಬೇಕು. ಪ್ರತಿ ಚಾಟ್ಗೂ ಇದನ್ನು ಪ್ರತ್ಯೇಕ ಪ್ರತ್ಯೇಕವಾಗಿಯೇ ಎನೇಬಲ್ ಮಾಡಿಕೊಳ್ಳಬೇಕು. ಹೀಗೆ ಸೆಟ್ಟಿಂಗ್ ಮಾಡಿಕೊಂಡ ವಾಟ್ಸಾಪ್ ಚಾಟ್ಗಳು 7 ದಿನಗಳಲ್ಲಿ ಕಣ್ಮರೆಯಾಗುತ್ತವೆ.
ಕಣ್ಮರೆಯಾಗುವ ಸಂದೇಶಗಳನ್ನು ಮರಳಿ ಪಡೆಯಲು ಸಾಧ್ಯವೇ?! ಬ್ಯಾಕಪ್ ಸೆಟಿಂಗ್ಸ್ ಸರಿಯಾಗಿ ಮಾಡಿಕೊಳ್ಳದಿದ್ದರೆ ಕಣ್ಮರೆಯಾಗುವ ಚಾಟ್ಗಳನ್ನು ಮತ್ತೆ ಪಡೆಯಲು ಸಾಧ್ಯವೇ ಇಲ್ಲ. Disappearing Messages ಎಂಬ ಆಯ್ಕೆ ಎನೇಬಲ್ ಮಾಡಿಕೊಳ್ಳುವ ಮೊದಲು ಬ್ಯಾಕಪ್ ಸೆಟ್ಟಿಂಗ್ಸ್ ನಮಗೆ ಬೇಕಾದಂತೆ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ. ಹೆಚ್ಚಿನ ಸ್ಟೋರೇಜ್ ಬಳಕೆ ತಪ್ಪಿಸಲು ವಾಟ್ಸಾಪ್ ಈ ಹೊಸ ಆಯ್ಕೆ ಪರಿಚಯಿಸಿದೆ. ಈಗಾಗಲೇ ಇಂಥ ಆಯ್ಕೆಗಳು ಟೆಲಿಗ್ರಾಂ, ಸ್ನಾಪ್ಚಾಟ್ಗಳಲ್ಲಿ ಲಭ್ಯವಿತ್ತು. ಇನ್ಸ್ಟಾಗ್ರಾಂನಲ್ಲಿ ಫೋಟೊ ಅಥವಾ ವಿಡಿಯೊ ಕಳುಹಿಸುವಾಗ view one ಆಯ್ಕೆ ಕೊಟ್ಟರೆ ಬಳಕೆದಾರರು ನೋಡಿದ ಬಳಿಕ ಫೋಟೊ ಅಥವಾ ವಿಡಿಯೊ ತನ್ನಿಂತಾನೆ ಕಣ್ಮರೆಯಾಗುತ್ತಿತ್ತು. -ಶ್ರುತಿ ಹೆಗಡೆ
Published On - 2:56 pm, Mon, 23 November 20