ಸಿ.ಟಿ.ರವಿ ಪ್ರಕಾರ ಕಾಗೆ ಯಾರು, ಕೋಗಿಲೆ ಯಾರು? ಮುಟ್ಟಿನೋಡಿಕೊಳ್ಳುತ್ತಿರುವ ಬಿಜೆಪಿಗರು!

|

Updated on: Feb 04, 2020 | 2:18 PM

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಮುಹೂರ್ತ ನಿಗದಿಯಾಗಿದ್ದು, ಯಾರುಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಬಿಜೆಪಿ ವಲಯದಲ್ಲಿದೆ. ಮತ್ತೆ ಕೆಲವರಿಗೆ ಖಾತೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ವಸಂತ ಕಾಲದಲ್ಲೇ ಕಾಗೆನಾ? ಕೋಗಿಲೆನಾ ಅಂಥ ತಿಳಿಯೋದು ಎಂದು ಸಂಸ್ಕೃತದ ಶ್ಲೋಕ ಹೇಳಿ ಟಾಂಗ್ ನೀಡಿದ್ದಾರೆ. ಇಂತಹ ಸಂದರ್ಭಗಳಲ್ಲಿಯೇ ತತ್ವನಿಷ್ಠೆ ಪರೀಕ್ಷೆ ಆಗೋದು. ಈ ಹಿಂದೆಯೇ ನಾನು ತತ್ವ ಪರೀಕ್ಷೆ ಎದುರಿಸಿದ್ದೇನೆ, ಈಗಲೂ […]

ಸಿ.ಟಿ.ರವಿ ಪ್ರಕಾರ ಕಾಗೆ ಯಾರು, ಕೋಗಿಲೆ ಯಾರು? ಮುಟ್ಟಿನೋಡಿಕೊಳ್ಳುತ್ತಿರುವ ಬಿಜೆಪಿಗರು!
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
Follow us on

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಫೆಬ್ರವರಿ 6ರಂದು ಮುಹೂರ್ತ ನಿಗದಿಯಾಗಿದ್ದು, ಯಾರುಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕುತೂಹಲ ಸದ್ಯ ಬಿಜೆಪಿ ವಲಯದಲ್ಲಿದೆ. ಮತ್ತೆ ಕೆಲವರಿಗೆ ಖಾತೆ ಕಳೆದುಕೊಳ್ಳುವ ಆತಂಕ ಶುರುವಾಗಿದೆ. ಈ ಮಧ್ಯೆ ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ವಸಂತ ಕಾಲದಲ್ಲೇ ಕಾಗೆನಾ? ಕೋಗಿಲೆನಾ ಅಂಥ ತಿಳಿಯೋದು ಎಂದು ಸಂಸ್ಕೃತದ ಶ್ಲೋಕ ಹೇಳಿ ಟಾಂಗ್ ನೀಡಿದ್ದಾರೆ.

ಇಂತಹ ಸಂದರ್ಭಗಳಲ್ಲಿಯೇ ತತ್ವನಿಷ್ಠೆ ಪರೀಕ್ಷೆ ಆಗೋದು. ಈ ಹಿಂದೆಯೇ ನಾನು ತತ್ವ ಪರೀಕ್ಷೆ ಎದುರಿಸಿದ್ದೇನೆ, ಈಗಲೂ ಎದುರಿಸುತ್ತಿದ್ದೇನೆ. ಆದ್ರೆ ನಾನು ತ್ಯಾಗಿ ಅಲ್ಲ. ನನ್ನದು ತ್ಯಾಗ, ಬಲಿದಾನ ರಾಜಕಾರಣ ಅಲ್ಲ, ಪರಮಸ್ವಾರ್ಥ ರಾಜಕಾರಣವೂ ಅಲ್ಲ ಎಂದು ಸಿ.ಟಿ.ರವಿ ಮಾರ್ಮಿಕವಾಗಿ ನುಡಿದಿದ್ದಾರೆ.

ಈಗಿರುವ ಖಾತೆ ಬದಲಾದ್ರೆ ಆ ಖಾತೆಗೆ ಹೋಗಿ ಕೆಲಸ ಮಾಡ್ತೀನಿ. ಖಾತೆ ಬದಲಾವಣೆ ರಿಲೇ ಬ್ಯಾಟನ್ ಇದ್ದಂಗೆ. ಯಾವ ಬ್ಯಾಟನ್ ಕೊಡ್ತಾರೋ ಅದನ್ನ ಹಿಡಿದುಕೊಂಡು ಹೋಗ್ತೀನಿ. ಅದು ಪ್ರವಾಸೋದ್ಯಮ ಆಗಿರಬಹುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಗಿರಬಹುದು, ಮತ್ತೊಂದೂ ಆಗಿರಬಹುದು ಎಂದರು.

Published On - 2:17 pm, Tue, 4 February 20