ಹೈದ್ರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮನನ್ನು ಯಮಪುರಿಗೆ ಕಳಿಸಿದ ಪುತ್ರಿ, ಯಾಕೆ ಗೊತ್ತಾ?

ಬೆಂಗಳೂರು: ಯುವತಿಯೊಬ್ಬಳ ಕ್ರೌರ್ಯವನ್ನ ಕಂಡು ಬೆಂಗಳೂರಿಗರು ಈ ಚಳಿಯಲ್ಲೂ ತಣ್ಣಗೆ ಬೆವತಿದ್ದಾರೆ. ಹೈದರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮ ಮತ್ತು ಸ್ವಂತ ತಮ್ಮನನ್ನು ಪುಸಲಾಯಿಸಿ, ಸಿದ್ಧಗೊಳಿಸಿದ್ದ ಯಮಪುತ್ರಿ ತಾಯಿಯನ್ನು ಸೀದಾ ಯಮಪುರಿಗೆ ಕಳುಹಿಸಿದ್ದಾಳೆ. ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಳು.. ಮಗಳು ಅಮೃತಾ ಟೆಕ್ಕಿ. ಕೈ ತುಂಬಾ ಸಂಬಳ ತರುತ್ತಿದ್ದಾಳೆ. ಈಗ ಹೈದರಾಬಾದ್​ ಬೇರೆ ತೋರಿಸ್ತೀನಿ ಅಂತಿದ್ದಾಳೆ. ಮಗಳು ಅಂದ್ರೆ ಹೀಗಿರಬೇಕು ಎಂದು ಹೆತ್ತಮ್ಮ ನಿರ್ಮಲಾ ತಮ್ಮ ಪುತ್ರ ಹರೀಶ್ ಜೊತೆ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಹೆತ್ತೊಡಲಿಗೆ ಅಮೃತವಾಗಬೇಕಿದ್ದ […]

ಹೈದ್ರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮನನ್ನು ಯಮಪುರಿಗೆ ಕಳಿಸಿದ ಪುತ್ರಿ, ಯಾಕೆ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on:Feb 04, 2020 | 12:02 PM

ಬೆಂಗಳೂರು: ಯುವತಿಯೊಬ್ಬಳ ಕ್ರೌರ್ಯವನ್ನ ಕಂಡು ಬೆಂಗಳೂರಿಗರು ಈ ಚಳಿಯಲ್ಲೂ ತಣ್ಣಗೆ ಬೆವತಿದ್ದಾರೆ. ಹೈದರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮ ಮತ್ತು ಸ್ವಂತ ತಮ್ಮನನ್ನು ಪುಸಲಾಯಿಸಿ, ಸಿದ್ಧಗೊಳಿಸಿದ್ದ ಯಮಪುತ್ರಿ ತಾಯಿಯನ್ನು ಸೀದಾ ಯಮಪುರಿಗೆ ಕಳುಹಿಸಿದ್ದಾಳೆ.

ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಳು.. ಮಗಳು ಅಮೃತಾ ಟೆಕ್ಕಿ. ಕೈ ತುಂಬಾ ಸಂಬಳ ತರುತ್ತಿದ್ದಾಳೆ. ಈಗ ಹೈದರಾಬಾದ್​ ಬೇರೆ ತೋರಿಸ್ತೀನಿ ಅಂತಿದ್ದಾಳೆ. ಮಗಳು ಅಂದ್ರೆ ಹೀಗಿರಬೇಕು ಎಂದು ಹೆತ್ತಮ್ಮ ನಿರ್ಮಲಾ ತಮ್ಮ ಪುತ್ರ ಹರೀಶ್ ಜೊತೆ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಾಳೆ. ಯಾಕೆ ಗೊತ್ತಾ? ಮೂರು ದಿನಗಳ ಹಿಂದೆ ಸವಿನಿದ್ರೆಯಲ್ಲಿ ಪಕ್ಕದಲ್ಲೇ ಮಲಗಿದ್ದ ತನ್ನನ್ನು ಹೆತ್ತ ತಾಯಿ ಎಂಬುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ಚಾಕುವಿನಿಂದ ಕೊಚ್ಚಿ ಕೊಚ್ಚಿ ಸಾಯಿಸಿದ್ದಳು ಪಾಪಿ ಮಗಳು. ಅದಾದ ನಂತರ ಒಡಹುಟ್ಟಿದ ತಮ್ಮನನ್ನೂ ಸಾಯಿಸಿಬಿಡಲು ಯತ್ನಿಸಿದ್ದಾಳೆ.

ಆದ್ರೆ ಸೋದರ ಸದ್ಯ ಬಚಾವಾಗಿದ್ದಾನೆ. ತಮ್ಮನನ್ನೂ ಸಾಯಿಸುವಾಗ ಅಮಾಯಕ ತಮ್ಮ ಕೇಳಿದ್ದಕ್ಕೆ ತನಗೆ ಸಿಕ್ಕಾಪಟ್ಟೆ ಸಾಲ ಇದೆ. ಮನೆ ಮರ್ಯಾದೆ ಹರಾಜು ಆಗುತ್ತದೆ. ಅದಕ್ಕೇ ಅಮ್ಮನನ್ನೂ ಸಾಯಿಸಿಬಿಟ್ಟೆ. ಈಗ ನಿನ್ನನ್ನೂ.. ಅಂತಾ ಬಡಬಡಿಸಿದ್ದಳು.

ಸಿಸಿಟಿವಿ ಎಂಬ ಮಾಯಾವಿಯಿಂದ ಇಡೀ ಪ್ರಕರಣಕ್ಕೆ ರೋಚಕ ತಿರುವು ಇದಾದ ಮೇಲೆ ಏನಾಯಿತು ಎಂಬುದಕ್ಕೆ ಪ್ರಕರಣದ ರೋಚಕ ತಿರುವಿಗೆ ಕಾರಣವಾಗಿದೆ. ಸಿಸಿಟಿವಿ ಎಂಬ ಮಾಯಾವಿ ಇಡೀ ಪ್ರಕರಣಕ್ಕೆ ರೋಚಕ ತಿರುವು ಕೊಟ್ಟಿದೆ. ತಾಯಿ ಹತ್ಯೆಯ ಹಿಂದಿದೆ ಪ್ರೇಮ್ ಕಹಾನಿ.. ಕೊಲೆ ಬಳಿಕ ಮನೆಯಿಂದ ಹೊರಟ ಅಮೃತಾ ಎಂಬ ಮತಿಹೀನ ಪುತ್ರಿ, ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಟೆಕ್ಕಿ ಅಮೃತಾಳನ್ನ ಅವಳ ಮನೆ ಸಮೀಪದಿಂದಲೇ ಯುವಕನೊಬ್ಬ ಪಿಕ್ ಅಪ್ ಮಾಡಿರುವುದು ಸಿಸಿಟಿವಿ ಕ್ಯಾಪ್ಚರ್​ ಮಾಡಿದೆ. ಪಲ್ಸರ್ ಬೈಕ್ ನಲ್ಲಿ ಬಂದು ಕಾದು ಕುಳಿತಿದ್ದವ ಅಮೃತಾಳ ಜೊತೆ ಎಸ್ಕೇಪ್ ಆಗಿದ್ದಾನೆ. ಆರೋಪಿ ಅಮೃತಾ ತಾಯಿಯನ್ನೇ ಕೊಂದು, ಬಳಿಕ ಯುವಕನ ಜೊತೆ ಬೈಕ್ ಏರಿ ಪರಾರಿಯಾಗಿದ್ದಾಳೆ.

ಅಮೃತಾ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅದೂ ಒಂದಲ್ಲ ಎರಡಲ್ಲ ಮೂರು ಆ್ಯಂಗಲ್​ಗಳಲ್ಲಿ ಪರಾರಿಯಾಗುವ ದೃಶ್ಯಗಳು ಸೆರೆಯಾಗಿವೆ. ಸದ್ಯ ಸಿಸಿಟಿವಿ ಆಧರಿಸಿ ಕೆಆರ್ ಪುರಂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Published On - 11:09 am, Tue, 4 February 20

ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್