AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಕ್ಸ್​ವೆಲ್​ರನ್ನು ಯಾಕೆ ಆಡಿಸುತ್ತಿದ್ದಾರೆ ಅಂತ ಅರ್ಥವಾಗುತ್ತಿಲ್ಲ: ಕೆವಿನ್ ಪೀಟರ್ಸನ್

ಸತತ ನಾಲ್ಕು ಸೋಲುಗಳಿಂದ ಧೃತಿಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆ ಸ್ಥಾನದಿಂದ ಮೇಲೇಳಲಾಗದೆ ಒದ್ದಾಡುತ್ತಿದೆ. ಶುಕ್ರವಾರದಂದು ಹೈದರಾಬಾದ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ನಿಕೊಲಾಸ್ ಪೂರನ್ ಅವರನ್ನು ಬಿಟ್ಟರೆ ಪಂಜಾಬ್​ನ ಎಲ್ಲ ಬ್ಯಾಟ್ಸ್​ಮನ್​ಗಳು ವಿಫಲರಾದರು. ಪಂಜಾಬಿನ ಓವರ್​ಸೀಸ್ ಆಟಗಾರರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಆಡಿದ ಎಲ್ಲ ಪಂದ್ಯಗಳಲ್ಲೂ ವಿಫಲರಾಗಿರುವುದು ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಕೆ ಎಲ್ ರಾಹುಲ್​ಗೆ ದೊಡ್ಡ ತಲೆನೋವಿನ ವಿಷಯವಾಗಿರಬಹುದು. ಪ್ರೀಟಿ ಜಿಂಟಾಳ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸ್​ವೆಲ್​ರನ್ನು […]

ಮ್ಯಾಕ್ಸ್​ವೆಲ್​ರನ್ನು ಯಾಕೆ ಆಡಿಸುತ್ತಿದ್ದಾರೆ ಅಂತ ಅರ್ಥವಾಗುತ್ತಿಲ್ಲ: ಕೆವಿನ್ ಪೀಟರ್ಸನ್
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 09, 2020 | 9:09 PM

Share

ಸತತ ನಾಲ್ಕು ಸೋಲುಗಳಿಂದ ಧೃತಿಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೆ ಸ್ಥಾನದಿಂದ ಮೇಲೇಳಲಾಗದೆ ಒದ್ದಾಡುತ್ತಿದೆ. ಶುಕ್ರವಾರದಂದು ಹೈದರಾಬಾದ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ನಿಕೊಲಾಸ್ ಪೂರನ್ ಅವರನ್ನು ಬಿಟ್ಟರೆ ಪಂಜಾಬ್​ನ ಎಲ್ಲ ಬ್ಯಾಟ್ಸ್​ಮನ್​ಗಳು ವಿಫಲರಾದರು.

ಪಂಜಾಬಿನ ಓವರ್​ಸೀಸ್ ಆಟಗಾರರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಆಡಿದ ಎಲ್ಲ ಪಂದ್ಯಗಳಲ್ಲೂ ವಿಫಲರಾಗಿರುವುದು ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಕೆ ಎಲ್ ರಾಹುಲ್​ಗೆ ದೊಡ್ಡ ತಲೆನೋವಿನ ವಿಷಯವಾಗಿರಬಹುದು. ಪ್ರೀಟಿ ಜಿಂಟಾಳ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸ್​ವೆಲ್​ರನ್ನು ಹೆಚ್ಚು ಕಡಿಮೆ ರೂ. 11 ಕೋಟಿಗಳನ್ನು ನೀಡಿ ಖರೀದಿಸಿದೆ. ಅವರ ಮೇಲೆ ಟೀಮು ಹೆಚ್ಚಿನ ನಿರೀಕ್ಷೆಗಳನ್ನಿಟ್ಟರುವುದು ಸಹಜವೇ.

ಐಪಿಎಲ್ 13ನೇ ಆವೃತಿಯ ಕಾಮೆಂಟ್ರಿ ಪ್ಯಾನೆಲ್​ನಲ್ಲಿರುವ ಇಂಗ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ಸರಣಿ ವೈಫಲ್ಯಗಳ ಹೊರತಾಗಿಯೂ ಅಸ್ಟ್ರೇಲಿಯಾದ ಆಟಗಾರನ್ನು ಆಡುವ ಇಲೆವೆನ್ ಉಳಿಸಿಕೊಳ್ಳುತ್ತಿರುವ ಬಗ್ಗೆ ಸೋಜಿಗರಾಗಿದ್ದಾರೆ.

‘‘ಪಂಜಾಬ್ ತಂಡದವರು, ಗ್ಲೆನ್ ವಿಷಯದಲ್ಲಿ ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬರಬೇಕಿದೆ. ಓವರ್​ಸೀಸ್ ಆಟಗಾರನನ್ನು ಹಾಗೆ ಉಳಿಸಿಕೊಳ್ಳವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ ಮ್ಯಾಕ್ಸ್​ವೆಲ್ ರನ್ ಗಳಿಸಲು ಪದೇಪದೆ ವಿಫಲರಾಗಿದ್ದಾರೆ. ನಾಯಕ ರಾಹುಲ್​ಗೆ ತನ್ನ ಟೀಮಿನ ವಿದೇಶಿ ಆಟಗಾರರಿಂದ ಬೆಂಬಲವೇ ಸಿಗುತ್ತಿಲ್ಲ. ಶುಕ್ರವಾರದ ಪಂದ್ಯದಲ್ಲಿ ನಿಕೊಲಾಸ್ ಪೂರನ್ ರನ್ ಗಳಿಸಿದ್ದು ನಿಜ, ಆದರೆ ಮ್ಯಾಕ್ಸ್​ವೆಲ್​ನಿಂದ ಯಾವ ಕಾಂಟ್ರಿಬ್ಯೂಷನ್ ಸಿಗುತ್ತಿದೆ? ಒಂದೋ ಅವರನ್ನು ಆಡುವ ಇಲೆವೆನ್​ನಿಂದ ಡ್ರಾಪ್ ಮಾಡಬೇಕು ಅಥವಾ ಮತ್ತೊಂದು ಅವಕಾಶ ನೀಡಿ ಇದೇ ನಿನ್ನ ಕೊನೆಯ ಚಾನ್ಸ್ ಎಂದು ಹೇಳಬೇಕು,’’ ಎಂದು ಪೀಟರ್ಸನ್ ಹೇಳಿದ್ದಾರೆ.

ಅಸಲಿಗೆ, ಶುಕ್ರವಾರದ ಪಂದ್ಯಕ್ಕೆ ಮ್ಯಾಕ್ಸ್​ವೆಲ್​ರನ್ನು ಡ್ರಾಪ್ ಮಾಡುವ ಇರಾದೆ ಟೀಮ್ ಮ್ಯಾನೆಜ್ಮೆಂಟ್​ಗಿತ್ತಂತೆ. ಅವರ ಸ್ಥಾನದಲ್ಲಿ ಕ್ರಿಸ್ ಗೇಲ್ ಅವರನ್ನು ಆಡಿಸುವ ನಿರ್ಧಾರವೂ ಮಾಡಿಯಾಗಿತ್ತು. ಆದರೆ, ಗೇಲ್​ಗೆ ಫುಡ್ ಪಾಯಿಸನಿಂಗ್ ಅಗಿದ್ದರಿಂದ ಮ್ಯಾಕ್ಸ್​ವೆಲ್​ರನ್ನು ಮುಂದುವರಿಸಲಾಯಿತೆಂದು ಪಂಜಾಬ್ ಟೀಮಿನ ಮೆಂಟರ್ ಅನಿಲ್ ಕುಂಬ್ಳೆ ಹೇಳಿದರು.

‘‘ಮ್ಯಾಕ್ಸ್​ವೆಲ್ ಸ್ಥಾನದಲ್ಲಿ ಗೇಲ್ ಅವರನ್ನು ಆಡಿಸುವುದು ಉತ್ತಮ ನಿರ್ಧಾರವೇ. ಆದರೆ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಾರೆ? ರಾಹುಲ್ ಮತ್ತು ಮಾಯಾಂಕ್ ಅವರ ಓಪನಿಂಗ್ ಜೋಡಿಯನ್ನು ಬೇರ್ಪಡಿಸುವುದು ಸರಿಯಲ್ಲ. ಗೇಲ್ ಈಗ ವಿಕೆಟ್ ಮಧ್ಯೆ ಚುರುಕಾಗಿ ಓಡಲು ಸಾಧ್ಯವಾಗದ ಕಾರಣ ಕೆಳಗಡೆ ಅಂದರೆ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಿಸಿ ಪ್ರಯೋಜನವಿಲ್ಲ. ಓಪನರ್ ಆಗಿ ಆಡಿಸಿದರೆ, ಮಾಯಾಂಕ್ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ,’’ ಎಂದು ಪೀಟರ್ಸನ್ ಹೇಳಿದ್ದಾರೆ.