KR ಪೇಟೆಯನ್ನ ಶಿಕಾರಿಪುರದಂತೆ ಅಭಿವೃದ್ಧಿ ಮಾಡುವೆ -ಯಡಿಯೂರಪ್ಪ ಆಶ್ವಾಸನೆ

|

Updated on: Nov 25, 2019 | 4:36 PM

ಮಂಡ್ಯ:ಡಿಸೆಂಬರ್ 5ರಂದು ನಡೆಯುವ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿದರೆ, ಮಾದರಿ ಕ್ಷೇತ್ರವಾಗಿ ಮಾಡುವೆ ಎಂದು ಕಿಕ್ಕೇರಿ ಗ್ರಾಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ನಾಲ್ಕು ಬಾರಿ ಸಿಎಂ ಆದರೂ ನನಗೊಂದು ಕೊರಗು ಇದೆ. ನನ್ನ ಜನ್ಮ ಸ್ಥಾನ ಕೆ ಆರ್​ ಪೇಟೆ. ಮಂಡ್ಯ ಜಿಲ್ಲೆಯಿಂದ ಒಂದೇ ಒಂದು ಸ್ಥಾನ ಬಿಜೆಪಿ ಗೆದ್ದಿಲ್ಲ. ಈಗ ಕಾಲ ಕೂಡಿಬಂದಿದೆ. ನಾರಾಯಣಗೌಡರಂಥಾ ಪ್ರಾಮಾಣಿಕ ಹೋರಾಟಗಾರ ಸಿಗುವುದು ಅಪರೂಪ. ಹಾಗಾಗಿ ಈ ಅವಕಾಶ ಬಳಸಿಕೊಂಡು ಅವ್ರನ್ನ ಗೆಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿರಿ […]

KR ಪೇಟೆಯನ್ನ ಶಿಕಾರಿಪುರದಂತೆ ಅಭಿವೃದ್ಧಿ ಮಾಡುವೆ -ಯಡಿಯೂರಪ್ಪ ಆಶ್ವಾಸನೆ
Follow us on

ಮಂಡ್ಯ:ಡಿಸೆಂಬರ್ 5ರಂದು ನಡೆಯುವ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಿದರೆ, ಮಾದರಿ ಕ್ಷೇತ್ರವಾಗಿ ಮಾಡುವೆ ಎಂದು ಕಿಕ್ಕೇರಿ ಗ್ರಾಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ನಾಲ್ಕು ಬಾರಿ ಸಿಎಂ ಆದರೂ ನನಗೊಂದು ಕೊರಗು ಇದೆ. ನನ್ನ ಜನ್ಮ ಸ್ಥಾನ ಕೆ ಆರ್​ ಪೇಟೆ. ಮಂಡ್ಯ ಜಿಲ್ಲೆಯಿಂದ ಒಂದೇ ಒಂದು ಸ್ಥಾನ ಬಿಜೆಪಿ ಗೆದ್ದಿಲ್ಲ. ಈಗ ಕಾಲ ಕೂಡಿಬಂದಿದೆ. ನಾರಾಯಣಗೌಡರಂಥಾ ಪ್ರಾಮಾಣಿಕ ಹೋರಾಟಗಾರ ಸಿಗುವುದು ಅಪರೂಪ. ಹಾಗಾಗಿ ಈ ಅವಕಾಶ ಬಳಸಿಕೊಂಡು ಅವ್ರನ್ನ ಗೆಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿರಿ ಎಂದು ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ಮಾತನಾಡಿದ ಅವರು ಕೆ.ಆರ್.ಪೇಟೆಯನ್ನು ಶಿಕಾರಿಪುರದಂತೆ ಅಭಿವೃದ್ಧಿ ಮಾಡುವೆ. ಕ್ಷೇತ್ರದಲ್ಲಿ ನಿರೀಕ್ಷೆ ಮೀರಿ ವಾತಾವರಣ ಚೆನ್ನಾಗಿದೆ. ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಗೆಲುವು ನಿಶ್ಚಿತ. 20ರಿಂದ 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಇವಾಗ ಯಾವುದೇ ಬೇಡಿಕೆಗಳ ಪಟ್ಟಿ ಮಾಡಿಕೊಡುವ ಅವಶ್ಯಕತೆ ಇಲ್ಲ. ಮುಂದೆ ನೀವೇ ಸಚಿವರಾಗ್ತೀರಿ, ಎಲ್ಲವನ್ನೂ ನೀವೇ ಮಾಡಿ ಎಂದು ಅಭ್ಯರ್ಥಿ ನಾರಾಯಣ ಗೌಡಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಪೂರ್ವಕ ಸಲಹೆ ನೀಡಿದರು.

Published On - 4:35 pm, Mon, 25 November 19