3 ಸೋಂಕಿತರು, ಒಬ್ಬರು ಬಲಿ: ಕುಟುಂಬದ ನರಳಾಟ, BBMP ನಿರ್ಲಕ್ಷ್ಯ ಜಗಜ್ಜಾಹೀರು
[lazy-load-videos-and-sticky-control id=”dB6iPPjwVbE”] ಬೆಂಗಳೂರು: ಒಂದು ಮನೆಯಲ್ಲಿ ಮೂರು ಜನ ಕೊರೊನಾ ರೋಗಿಗಳ ರೋಧನೆ, ಕಳೆದ ಮಂಗಳವಾರದಿಂದಲೂ ಬಿಬಿಎಂಪಿ ಸಹಾಯವಾಣಿಗೆ ಫೋನ್ ಮಾಡಿದ್ರೂ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ಬರೊಬ್ಬರಿ ನಾಲ್ಕು ದಿನಗಳ ಕಾಲ ಮಹಿಳೆಯೊಬ್ಬರು ನರಳಾಡಿ ಪ್ರಾಣ ಬಿಟ್ಟ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ. ನಮ್ಮ ಮನೆಯಲ್ಲಿ ಮೂರು ಜನ ಇದ್ದೀವಿ, ನಮಗೆ ಕೊರೊನಾ ಪಾಸಿಟಿವ್ ಆಗಿದೆ. ದಯವಿಟ್ಟು ನಮ್ಮನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದ್ರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸರಿಯಾಗಿ ಸ್ಪಂದಿಸದೆ, ಆಸ್ಪತ್ರೆಗಳಲ್ಲಿ ಬೆಡ್ […]

[lazy-load-videos-and-sticky-control id=”dB6iPPjwVbE”]
ಬೆಂಗಳೂರು: ಒಂದು ಮನೆಯಲ್ಲಿ ಮೂರು ಜನ ಕೊರೊನಾ ರೋಗಿಗಳ ರೋಧನೆ, ಕಳೆದ ಮಂಗಳವಾರದಿಂದಲೂ ಬಿಬಿಎಂಪಿ ಸಹಾಯವಾಣಿಗೆ ಫೋನ್ ಮಾಡಿದ್ರೂ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ಬರೊಬ್ಬರಿ ನಾಲ್ಕು ದಿನಗಳ ಕಾಲ ಮಹಿಳೆಯೊಬ್ಬರು ನರಳಾಡಿ ಪ್ರಾಣ ಬಿಟ್ಟ ಘಟನೆ ಇಂದು ಬೆಂಗಳೂರಿನಲ್ಲಿ ನೆಡೆದಿದೆ.
ನಮ್ಮ ಮನೆಯಲ್ಲಿ ಮೂರು ಜನ ಇದ್ದೀವಿ, ನಮಗೆ ಕೊರೊನಾ ಪಾಸಿಟಿವ್ ಆಗಿದೆ. ದಯವಿಟ್ಟು ನಮ್ಮನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದ್ರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸರಿಯಾಗಿ ಸ್ಪಂದಿಸದೆ, ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ವೆಂಟಿಲೇಶನ್ ಇಲ್ಲ ಅಂತಾ ಸಬೂನು ಹೇಳಿ ಹೇಳಿ, ನಾಲ್ಕು ದಿನ ಸೋಂಕಿತ ಕುಟುಂಬವನ್ನು ಸತಾಯಿಸಿದ್ದಾರೆ.
ಇದರಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ನಿನ್ನೆ ತೀವ್ರ ಉಸಿರಾಟದ ತೊಂದರೆಯಾಗಿ ವಿವಿಪುರಂ ಮನೆಯಲ್ಲಿಯೇ ಮಹಿಳೆ ಪ್ರಾಣಬಿಟ್ಟಿದ್ದಾರೆ. ಮಗ, ಸೊಸೆಗೂ ಕೊರೊನಾ ಪಾಸಿಟಿವ್ ಇದ್ದ ಕಾರಣ ಕೊನೆಗೆ ಬಿಬಿಎಂಪಿ ಅಧಿಕಾರಿಗಳೇ ಮೃತ ದೇಹವನ್ನ ಅನಾಥರಂತೆ ಸಂಸ್ಕಾರ ಮಾಡಿದ್ದಾರೆ. ಬಿಬಿಎಂಪಿ ಹಾಗೂ ಸರ್ಕಾರ ಸ್ವಲ್ಪ ಎಚ್ಚೆತ್ತುಕೊಂಡಿದ್ರೆ ನಮ್ಮ ತಾಯಿ ಬದುಕುತ್ತಿದ್ದರೆಂದು ಸೋಂಕಿತ ಮಗ ತಮ್ಮ ಅಳಲ್ಲನ್ನು ತೊಡಿಕೊಂಡಿದ್ದಾರೆ.
Published On - 10:56 am, Sat, 18 July 20




