ರಿವರ್ಸ್ ಗೇರ್‌ನಲ್ಲಿದ್ದ ಕಾರು ಸ್ಟಾರ್ಟ್ ಮಾಡಿ ಮಹಿಳೆ ಸಾವು

ಬೆಂಗಳೂರು: ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್​ಗಳು ಸರಿಯಾಗಿವೆ ಎಂದು ಚೆಕ್ ಮಾಡಿಕೊಳ್ಳುವುದು ಅತಿ ಮುಖ್ಯ. ಯಾಕೆಂದರೆ ಇಲ್ಲೊಂದು ಮಹಿಳೆ ಇಂತ ತಪ್ಪು ಮಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾರು ರಿವರ್ಸ್ ಗೇರ್‌ನಲ್ಲಿರೋದನ್ನು ಗಮನಿಸದೆ ಸ್ಟಾರ್ಟ್ ಮಾಡಿ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದಾರೆ. ನಂದಿನಿ ರಾವ್(45) ಮೃತ ದುರ್ದೈವಿ. ನಿನ್ನೆ ಮಧ್ಯಾಹ್ನ 2:50 ರ ಸಮಯದಲ್ಲಿ ನ್ಯೂ BEL ರಸ್ತೆಯ ಆರ್.ಕೆ.ಗಾರ್ಡನ್ ಬಳಿ ಈ ದುರಂತ ಸಂಭವಿಸಿದೆ. ಅಜಾಗರೂಕತೆಯಿಂದ ತಮ್ಮ ಕಾರಿನ ಡೋರ್‌ ತೆಗೆದು ಹೊರಗಡೆಯೇ ನಿಂತು ಕಾರು […]

ರಿವರ್ಸ್ ಗೇರ್‌ನಲ್ಲಿದ್ದ ಕಾರು ಸ್ಟಾರ್ಟ್ ಮಾಡಿ ಮಹಿಳೆ ಸಾವು
ಆಯೇಷಾ ಬಾನು

Updated on: Oct 08, 2020 | 8:12 AM

ಬೆಂಗಳೂರು: ಕಾರ್ ಸ್ಟಾರ್ಟ್ ಮಾಡುವ ಮುನ್ನ ಗೇರ್​ಗಳು ಸರಿಯಾಗಿವೆ ಎಂದು ಚೆಕ್ ಮಾಡಿಕೊಳ್ಳುವುದು ಅತಿ ಮುಖ್ಯ. ಯಾಕೆಂದರೆ ಇಲ್ಲೊಂದು ಮಹಿಳೆ ಇಂತ ತಪ್ಪು ಮಾಡಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾರು ರಿವರ್ಸ್ ಗೇರ್‌ನಲ್ಲಿರೋದನ್ನು ಗಮನಿಸದೆ ಸ್ಟಾರ್ಟ್ ಮಾಡಿ ಗಂಭೀರವಾಗಿ ಗಾಯಗೊಂಡು ಪ್ರಾಣ ಬಿಟ್ಟಿದ್ದಾರೆ. ನಂದಿನಿ ರಾವ್(45) ಮೃತ ದುರ್ದೈವಿ.

ನಿನ್ನೆ ಮಧ್ಯಾಹ್ನ 2:50 ರ ಸಮಯದಲ್ಲಿ ನ್ಯೂ BEL ರಸ್ತೆಯ ಆರ್.ಕೆ.ಗಾರ್ಡನ್ ಬಳಿ ಈ ದುರಂತ ಸಂಭವಿಸಿದೆ. ಅಜಾಗರೂಕತೆಯಿಂದ ತಮ್ಮ ಕಾರಿನ ಡೋರ್‌ ತೆಗೆದು ಹೊರಗಡೆಯೇ ನಿಂತು ಕಾರು ಸ್ಟಾರ್ಟ್‌ ಮಾಡಿದ್ದಾರೆ. ಈ ವೇಳೆ ಕಾರು ರಿವರ್ಸ್ ಗೇರ್​ನಲ್ಲಿತ್ತು. ಹೀಗಾಗಿ ಹಿಮ್ಮುಖವಾಗಿ ಕಾರು ಚಲಿಸಿ ಕಾರಿನ ಬಾಗಿಲು, ಪಕ್ಕದಲ್ಲಿದ್ದ ಮರದ ಮಧ್ಯೆ ನಂದಿನಿ ಸಿಲುಕಿಗೊಂಡ್ರು. ಅವರಿಗೆ ಗಂಭೀರ ಗಾಯಗಳಾದವು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಂದಿನಿ ರಾವ್ ಮೃತಪಟ್ಟಿದ್ದರು. ಸದಾಶಿವನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 7:17 am, Thu, 8 October 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us