ಹೊಂಗಸಂದ್ರ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಸಾವು, ಹೆಚ್ಚಾಯ್ತು ಆತಂಕ!

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿರುವ ಹೊಂಗಸಂದ್ರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಹೊಂಗಸಂದ್ರದ ಮಣಿಪಾಲ್ ಕೌಂಟಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಕ್ವಾರಂಟೈನ್​ನಲ್ಲಿದ್ದವರಿಗೆ ನಡುಕ ಶುರುವಾಗಿದೆ. ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ: ಮೃತ ಮಹಿಳೆಗೆ ಲೋ ಬಿಪಿ ಇತ್ತು. ಹೀಗಾಗಿ ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಮೇ 19ಕ್ಕೆ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದು, ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ ಬರಲಿದೆ. ಕೊರೊನಾ ಪಾಸಿಟಿವ್ ಬಂದ್ರೆ ಅಧಿಕಾರಿಗಳಿಗೆ ಮತ್ತಷ್ಟು ಟೆನ್ಷನ್ […]

ಹೊಂಗಸಂದ್ರ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಸಾವು, ಹೆಚ್ಚಾಯ್ತು ಆತಂಕ!
ಸಾಧು ಶ್ರೀನಾಥ್​

Updated on: May 15, 2020 | 11:07 AM

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿರುವ ಹೊಂಗಸಂದ್ರದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಮೃತಪಟ್ಟಿದ್ದಾರೆ. ಹೊಂಗಸಂದ್ರದ ಮಣಿಪಾಲ್ ಕೌಂಟಿಯಲ್ಲಿದ್ದ ಮಹಿಳೆ ಮೃತಪಟ್ಟಿದ್ದು, ಕ್ವಾರಂಟೈನ್​ನಲ್ಲಿದ್ದವರಿಗೆ ನಡುಕ ಶುರುವಾಗಿದೆ.

ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ:

ಮೃತ ಮಹಿಳೆಗೆ ಲೋ ಬಿಪಿ ಇತ್ತು. ಹೀಗಾಗಿ ಜಯನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಮೇ 19ಕ್ಕೆ ಮಹಿಳೆಯ ಕ್ವಾರಂಟೈನ್ ಅವಧಿ ಮುಗಿಯುತ್ತಿದ್ದು, ಇಂದು ಮಹಿಳೆಯ ಕೊರೊನಾ ಟೆಸ್ಟ್ ವರದಿ ಬರಲಿದೆ. ಕೊರೊನಾ ಪಾಸಿಟಿವ್ ಬಂದ್ರೆ ಅಧಿಕಾರಿಗಳಿಗೆ ಮತ್ತಷ್ಟು ಟೆನ್ಷನ್ ಹೆಚ್ಚಾಗಲಿದೆ. ವರದಿ ಏನು ಹೇಳುತ್ತೆ ಎಂದು ಕಾದು ನೋಡ ಬೇಕಿದೆ.

Published On - 7:30 am, Fri, 15 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us