TT ಯಲ್ಲಿ ಸೋಂಕಿತರು ಶಿಫ್ಟ್, ಮಾರ್ಗ ಮಧ್ಯೆ ಸೋಂಕಿತೆ ಸಾವು​: ಹೊಣೆ ಯಾರು?

| Updated By: ಸಾಧು ಶ್ರೀನಾಥ್​

Updated on: Jun 29, 2020 | 11:31 AM

ಬೆಂಗಳೂರು: ಸೋಂಕಿತರಿಗಾಗಿ ಮೀಸಲಿಟ್ಟಿರುವ ಌಂಬುಲೆನ್ಸ್​ಗಳ ಕೊರತೆ ಎದುರಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಌಂಬುಲೆನ್ಸ್​ ಇಲ್ಲದೆ ಟಿಟಿ ವಾಹನದಲ್ಲಿ ಸೋಂಕಿತರನ್ನು ಕೊವಿಡ್ ಆಸ್ಪತ್ರೆಗೆ ಬಿಬಿಎಂಪಿ ಅಧಿಕಾರಿಗಳು ಸಾಗಿಸಿರುವ ಘಟನೆ ನಗರದಲ್ಲಿ ನಡೆದಿದೆ. ಟಿಟಿ ವಾಹನದಲ್ಲಿ ಸೋಂಕಿತ ವೃದ್ಧೆ ಸಾವು ನಗರದಲ್ಲಿ ಌಂಬುಲೆನ್ಸ್​ನ ಕೊರತೆ ಎದುರಾದ ಕಾರಣ ಕೆಲವು ಸೋಂಕಿತರನ್ನು ಬೆಂಗಳೂರಿನಿಂದ ದೇವನಹಳ್ಳಿಯಲ್ಲಿರುವ ಆಕಾಶ್ ​ಆಸ್ವತ್ರೆಗೆ ಟಿಟಿ ವಾಹನದಲ್ಲಿ ಬಿಬಿಎಂಪಿ ಅಧಿಕಾರಿಗಳು ರವಾನಿಸಿದ್ದರು. ಇಂಥದ್ದೇ ಒಂದು ವಾಹನದಲ್ಲಿ ರಾಜಾಜಿನಗರದ ಮೋದಿ ಆಸ್ವತ್ರೆಯಿಂದ ಸೋಂಕಿತ ವೃದ್ಧೆಯೊಬ್ಬರನ್ನ ಸಹ ದೇವನಹಳ್ಳಿಗೆ ಕರೆದೊಯ್ಯಲಾಗುತ್ತಿತ್ತು. […]

TT ಯಲ್ಲಿ ಸೋಂಕಿತರು ಶಿಫ್ಟ್, ಮಾರ್ಗ ಮಧ್ಯೆ ಸೋಂಕಿತೆ ಸಾವು​: ಹೊಣೆ ಯಾರು?
Follow us on

ಬೆಂಗಳೂರು: ಸೋಂಕಿತರಿಗಾಗಿ ಮೀಸಲಿಟ್ಟಿರುವ ಌಂಬುಲೆನ್ಸ್​ಗಳ ಕೊರತೆ ಎದುರಾಗಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ. ಌಂಬುಲೆನ್ಸ್​ ಇಲ್ಲದೆ ಟಿಟಿ ವಾಹನದಲ್ಲಿ ಸೋಂಕಿತರನ್ನು ಕೊವಿಡ್ ಆಸ್ಪತ್ರೆಗೆ ಬಿಬಿಎಂಪಿ ಅಧಿಕಾರಿಗಳು ಸಾಗಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಟಿಟಿ ವಾಹನದಲ್ಲಿ ಸೋಂಕಿತ ವೃದ್ಧೆ ಸಾವು
ನಗರದಲ್ಲಿ ಌಂಬುಲೆನ್ಸ್​ನ ಕೊರತೆ ಎದುರಾದ ಕಾರಣ ಕೆಲವು ಸೋಂಕಿತರನ್ನು ಬೆಂಗಳೂರಿನಿಂದ ದೇವನಹಳ್ಳಿಯಲ್ಲಿರುವ ಆಕಾಶ್ ​ಆಸ್ವತ್ರೆಗೆ ಟಿಟಿ ವಾಹನದಲ್ಲಿ ಬಿಬಿಎಂಪಿ ಅಧಿಕಾರಿಗಳು ರವಾನಿಸಿದ್ದರು. ಇಂಥದ್ದೇ ಒಂದು ವಾಹನದಲ್ಲಿ ರಾಜಾಜಿನಗರದ ಮೋದಿ ಆಸ್ವತ್ರೆಯಿಂದ ಸೋಂಕಿತ ವೃದ್ಧೆಯೊಬ್ಬರನ್ನ ಸಹ ದೇವನಹಳ್ಳಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ದಾರಿ ಮಧ್ಯೆ ಉಸಿರಾಟದ ತೊಂದರೆಯಿಂದ ಸೊಂಕಿತ ವೃದ್ಧೆಯೊಬ್ಬರು ವಾಹನದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಜೊತೆಗೆ, ಸೋಂಕಿತೆ ಸಾವನ್ನಪುತ್ತಿದ್ದಂತೆ ಆಸ್ವತ್ರೆಯಲ್ಲಿ ಮೃತದೇಹವನ್ನು ಇಟ್ಟು ಟಿಟಿ ಚಾಲಕ ಹೊರಟು ಹೋಗಿದ್ದಾನೆ ಎಂದು ಹೇಳಲಾಗಿದೆ. ಸದ್ಯಕ್ಕೆ ಆಕಾಶ್ ಆಸ್ವತ್ರೆಯ ಶವಾಗಾರದಲ್ಲಿ ಸೊಂಕಿತ ಮಹಿಳೆಯ ಮೃತದೇಹವನ್ನ ಇಡಲಾಗಿದೆ ಎಂದು ತಿಳಿದುಬಂದಿದೆ. ವೃದ್ಧೆಯ ಮಕ್ಕಳು ಹಾಗೂ ಮೊಮ್ಮಕ್ಕಳು ಕ್ವಾರಂಟೈನ್​ನಲ್ಲಿರೋ ಕಾರಣದಿಂದ ಮೃತದೇಹವನ್ನು ಆಸ್ವತ್ರೆಯಲ್ಲಿ ಇಟ್ಟಿರುವುದಾಗಿ ತಿಳಿದುಬಂದಿದೆ.

ಈ ಘಟನೆಯಿಂದ ಅಧಿಕಾರಿಗಳ ನಿರ್ಲಕ್ಷ್ಯ ಸಹ ಬೆಳಕಿಗೆ ಬಂದಿದೆ. ಎಮರ್ಜೆನ್ಸಿ ಸೊಂಕಿತರನ್ನು ಟಿಟಿ ವಾಹನದಲ್ಲಿ ಸಾಗಿಸಿದ ಅಧಿಕಾರಿಗಳು ಗಾಡಿಯಲ್ಲಿ ವೆಂಟಿಲೇಟರ್ ಮತ್ತು ವೈದ್ಯಕೀಯ ಸಿಬ್ಬಂದಿಯ ವ್ಯವಸ್ಥೆಯನ್ನು ಸಹ ಮಾಡಿರಲಿಲ್ಲ ಎಂದು ತಿಳಿದುಬಂದಿದೆ.

Published On - 11:24 am, Mon, 29 June 20