ಕೊರೊನಾ ಕಾಲದಲ್ಲೂ ಇಂತಹ ಪ್ರತಿಭಟನೆ ಬೇಕಿತ್ತಾ ಕಾಂಗ್ರೆಸ್ ಅಧ್ಯಕ್ಷರೇ?
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಿಂದ ಸೈಕಲ್ ಏರಿ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಐಟಿ ಕಚೇರಿಯತ್ತ ‘ಕೈ’ ನಾಯಕರ ಪ್ರತಿಭಟನಾ ಮೆರವಣಿಗೆ ನಡೆದಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಕೈಗೊಂಡಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಮ್ಮ ತಮ್ಮ ನಿವಾಸದಿಂದ ಸೈಕಲ್ನಲ್ಲಿ ತೆರಳಿದ್ರು. ಸಿದ್ದರಾಮಯ್ಯಗೆ KPCC ಕಾಱಧ್ಯಕ್ಷ ಈಶ್ವರ ಖಂಡ್ರೆ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ ಸಾಥ್ ನೀಡಿದ್ರು. ಆದ್ರೆ […]
ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಿಂದ ಸೈಕಲ್ ಏರಿ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಐಟಿ ಕಚೇರಿಯತ್ತ ‘ಕೈ’ ನಾಯಕರ ಪ್ರತಿಭಟನಾ ಮೆರವಣಿಗೆ ನಡೆದಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಸೈಕಲ್ ಜಾಥಾ ಕೈಗೊಂಡಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತಮ್ಮ ತಮ್ಮ ನಿವಾಸದಿಂದ ಸೈಕಲ್ನಲ್ಲಿ ತೆರಳಿದ್ರು. ಸಿದ್ದರಾಮಯ್ಯಗೆ KPCC ಕಾಱಧ್ಯಕ್ಷ ಈಶ್ವರ ಖಂಡ್ರೆ, ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ ಸಾಥ್ ನೀಡಿದ್ರು. ಆದ್ರೆ ಕೊರೊನಾ ತಡೆಯಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡ್ತಿದೆ. ಕಾಂಗ್ರೆಸ್ ನಾಯಕರಿಗೆ ಮಾತ್ರ ತಮ್ಮ ಪ್ರತಿಭಟನೆನೆ ಹೆಚ್ಚಾಗಿದೆ. ಪ್ರತಿಭಟನೆತಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಮರೆಯಾಗಿದೆ. ಜನ ಜಂಗುಳಿ ನಿಯಂತ್ರಿಸುವವರು ಯಾರು ಇಲ್ಲ.
ಕಾಂಗ್ರೆಸ್ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಕಾಂಗ್ರೆಸ್ ಪ್ರತಿಭಟನೆಯಿಂದ 3 ಕಿ.ಮೀ.ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರತಿಭಟನೆಯಿಂದಾಗಿ ಕ್ವೀನ್ಸ್ ರಸ್ತೆ, ಫ್ರೇಜರ್ ಟೌನ್ವರೆಗೆ ಫುಲ್ ಜಾಮ್ ಆಗಿದೆ. ಈ ವೇಳೆ ಆಂಬ್ಯುಲೆನ್ಸ್ ಕೂಡ ಜನ ಜಂಗುಳಿಯಲ್ಲಿ ಸಿಕ್ಕಿ ಹಾಕಿಕೊಂಡ ದೃಶ್ಯ ಕಂಡು ಬಂದಿದೆ.
ಇನ್ನು ಪ್ರತಿಭಟನೆಗೆ ಹೈ ಗ್ರೌಂಡ್ಸ್ ಪೊಲೀಸರು ಷರತ್ತುಬದ್ಧ ಅನುಮತಿ ನೀಡಿದ್ದರು. ಕೇವಲ 200 ಜನ ಸೇರಲು ಅನುಮತಿ ಪಡೆದಿದ್ದರು. ಆದರೆ ಇಲಾಖೆ ಷರತ್ತುಗಳನ್ನೆಲ್ಲ ಗಾಳಿಗೆ ತೂರಿ ಧರಣಿಯಲ್ಲಿ ಹೆಚ್ಚಿನ ಜನ ಭಾಗಿಯಾಗಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕಾಂಗ್ರೆಸ್ ನಾಯಕರ ಮೇಲೆ ಪ್ರಕರಣ ದಾಖಲಿಸಬಹುದಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಇಂತಹ ಪ್ರತಿಭಟನೆ ಬೇಕಿತ್ತಾ ಎಂಬಂತಾಗಿದೆ.
Published On - 12:20 pm, Mon, 29 June 20