ಮಹಿಳಾ ವೈದ್ಯಾಧಿಕಾರಿಗೆ ಟಾರ್ಚರ್: ಶಾಸಕ ಯತೀಂದ್ರಗೆ ದೂರು

|

Updated on: Dec 25, 2019 | 11:51 AM

ಮೈಸೂರು: ತನಗೆ ಟಾರ್ಚರ್ ನೀಡುತ್ತಿದ್ದಾರೆಂದು ಆರೋಪಿಸಿ ಕಿರಿಯ ಸಹಾಯಕ ವೈದ್ಯಾಧಿಕಾರಿಯೊಬ್ಬರು ಶಾಸಕರ ಮುಂದೆ ಕಣ್ಣೀರಿಟ್ಟು, ದೂರು ನೀಡಿದ ಪ್ರಸಂಗ ನಂಜನಗೂಡು ಕೆಡಿಪಿ‌ ಸಭೆಯಲ್ಲಿ ನಡೆದಿದೆ. ಮಂಗಳವಾರ ನಡೆದ KDP ಸಭೆಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮುಂದೆ ಡಾ. ಶಶಿಕಲಾ ಎಂಬ ವೈದ್ಯಾಧಿಕಾರಿ ಕಣ್ಣೀರಿಟ್ಟು, ಅಳಲು ತೋಡಿಕೊಂಡರು.  ನವಿಲೂರು ಉಪ ಪ್ರಾಥಮಿಕ ಕೇಂದ್ರ ಕಿರಿಯ ಸಹಾಯಕ ವೈದ್ಯಾಧಿಕಾರಿ ಶಾರದಾ ಹಾಗೂ ಅವರ ಪತಿ ಗೋಪಾಲ ಕೃಷ್ಣ ಎಂಬಿಬ್ಬರು ತನಗೆ ಟಾರ್ಚರ್ ನೀಡುತ್ತಿದ್ದಾರೆಂದು ಕಳಲೆ ಪ್ರಾಥಮಿಕ‌ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ […]

ಮಹಿಳಾ ವೈದ್ಯಾಧಿಕಾರಿಗೆ ಟಾರ್ಚರ್: ಶಾಸಕ ಯತೀಂದ್ರಗೆ ದೂರು
Follow us on

ಮೈಸೂರು: ತನಗೆ ಟಾರ್ಚರ್ ನೀಡುತ್ತಿದ್ದಾರೆಂದು ಆರೋಪಿಸಿ ಕಿರಿಯ ಸಹಾಯಕ ವೈದ್ಯಾಧಿಕಾರಿಯೊಬ್ಬರು ಶಾಸಕರ ಮುಂದೆ ಕಣ್ಣೀರಿಟ್ಟು, ದೂರು ನೀಡಿದ ಪ್ರಸಂಗ ನಂಜನಗೂಡು ಕೆಡಿಪಿ‌ ಸಭೆಯಲ್ಲಿ ನಡೆದಿದೆ. ಮಂಗಳವಾರ ನಡೆದ KDP ಸಭೆಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಮುಂದೆ ಡಾ. ಶಶಿಕಲಾ ಎಂಬ ವೈದ್ಯಾಧಿಕಾರಿ ಕಣ್ಣೀರಿಟ್ಟು, ಅಳಲು ತೋಡಿಕೊಂಡರು.

 ನವಿಲೂರು ಉಪ ಪ್ರಾಥಮಿಕ ಕೇಂದ್ರ ಕಿರಿಯ ಸಹಾಯಕ ವೈದ್ಯಾಧಿಕಾರಿ ಶಾರದಾ ಹಾಗೂ ಅವರ ಪತಿ ಗೋಪಾಲ ಕೃಷ್ಣ ಎಂಬಿಬ್ಬರು ತನಗೆ ಟಾರ್ಚರ್ ನೀಡುತ್ತಿದ್ದಾರೆಂದು ಕಳಲೆ ಪ್ರಾಥಮಿಕ‌ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಕಣ್ಣೀರು ಹಾಕಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿರುವ ಶಾರದಾರನ್ನ ಲಘು ಹುದ್ದೆಗೆ ನೇಮಿಸುವಂತೆ ಡಾ.ಶಶಿಕಲಾ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಡಾ. ಶಶಿಕಲಾ ಮನವಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಶಶಿಕಲಾ ಸೇರಿದಂತೆ ಸಿಬ್ಬಂದಿ ಮೇಲೆ ಆ್ಯಸಿಡ್ ಹಾಕಿ ಕೊಲೆ ಮಾಡುವುದಾಗಿ ಗೋಪಾಲಕೃಷ್ಣ ಬೆದರಿಕೆ ಹಾಕುತ್ತಿದ್ದಾರೆ. ಆ್ಯಸಿಡ್ ಸುರಿದು ಮಚ್ಚಿನಿಂದ ಕೊಂದು ಹಾಕುವುದಾಗಿ ಬೆದರಿಸುತ್ತಿದ್ದಾರೆ. RTI ಮೂಲಕ ಅನಗತ್ಯವಾಗಿ ಅರ್ಜಿ ಸಲ್ಲಿಸಿ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Published On - 11:44 am, Wed, 25 December 19