ಬೆಂಗಳೂರು: ದೇಶದಾದ್ಯಂತ ಇಂದು ಕ್ರೈಸ್ತರ ಪವಿತ್ರ ಹಬ್ಬ ಮೇರಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕಲರ್ ಫುಲ್ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯಿಂದಲೇ ಎಲ್ಲಾ ರೀತಿಯ ತಯಾರಿಗಳು ನಡೆದಿದ್ದು, ಪಟಾಕಿ ಸಿಡಿಸುವ ಮೂಲಕ ಹಬ್ಬವನ್ನು ಬರಮಾಡಿಕೊಂಡಿದ್ದಾರೆ. ನಗರ ಹಬ್ಬದ ವಾತಾವರಣದಲ್ಲಿ ಮಿಂದೆದ್ದಿದೆ. ನಗರದ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಕಲರ್ ಲೈಟಿಂಗ್ಸ್ಗಳಿಂದ ಜಗಮಗಿಸುತ್ತಿವೆ.
ಶಿವಾಜಿನಗರದಲ್ಲಿರುವ ಸಂತ ಮೇರಿ ಬೆಸಿಲಿಕಾ ಚರ್ಚ್ನಲ್ಲಿಂದು ಕ್ರೈಸ್ತ ಸಮುದಾಯದಿಂದ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಲಾಗುತ್ತಿದೆ. ಚರ್ಚ್‌ಗೆ ವಿಶೇಷ ವಿದ್ಯುತ್ ಅಲಂಕಾರ ಮಾಡಿದ್ದು, ಆವರಣದಲ್ಲಿ ಏಸುಕ್ರಿಸ್ತನ ಜೀವನ ಸಂದೇಶ ಸಾರುವ ಗೊಂಬೆಗಳನ್ನ ಅನಾವರಣ ಮಾಡಿದ್ದಾರೆ. ಕ್ರೈಸ್ತ ಬಾಂಧವರು ಚರ್ಚ್‌ಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಂತ ಮೇರಿ ಬೆಸಿಲಿಕಾ ಚರ್ಚ್ನಲ್ಲಿ ಇಂಗ್ಲೀಷ್, ತಮಿಳು, ಕನ್ನಡ, ತಮಿಳು ನಾಲ್ಕು ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.