ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು, ಪರಾರಿಯಾದ ಗಂಡ

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆ ನೇಣು ಬಿಗಿದುಕೊಂಡು ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಆದರೆ 25 ವರ್ಷದ ಮೃತ ನಿಶಾಳ ಪೋಷಕರು ಮಾತ್ರ ಅದು ಆತ್ಮಹತ್ಯೆಯಲ್ಲ, ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಬಿಗಿದಿದ್ದಾರೆ ಎಂದು ಆರೋಪಿಸಿದ್ದಾರೆ. ನಿಶಾ ಪೋಷಕರು ನೇರವಾಗಿ ಆಕೆಯ ಗಂಡ ಪ್ರದೀಪ್ ವಿರುದ್ಧ ಕೊಲೆಯ ಆರೋಪ ಮಾಡಿದ್ದಾರೆ. ನಿಶಾ ಸಾವು ಬಹಿರಂಗವಾಗುತ್ತಿದ್ದಂತೆ ನಿಶಾ ಪತಿ ಪ್ರದೀಪ್‌ ಹಾಗೂ ಅತ್ತೆ ಮಾವ ತಲೆ ಮರೆಸಿಕೊಂಡಿದ್ದಾರೆ. ಬಿಳಿಕೆರೆತ ನಿಶಾ ಮೂರು ವರ್ಷಗಳ […]

ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು, ಪರಾರಿಯಾದ ಗಂಡ
Edited By:

Updated on: Aug 20, 2020 | 6:16 PM

ಮೈಸೂರು: ಕೌಟುಂಬಿಕ ಕಲಹ ಹಿನ್ನೆಲೆ ನೇಣು ಬಿಗಿದುಕೊಂಡು ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಆದರೆ 25 ವರ್ಷದ ಮೃತ ನಿಶಾಳ ಪೋಷಕರು ಮಾತ್ರ ಅದು ಆತ್ಮಹತ್ಯೆಯಲ್ಲ, ನಮ್ಮ ಮಗಳನ್ನು ಕೊಲೆ ಮಾಡಿ ನೇಣು ಬಿಗಿದಿದ್ದಾರೆ ಎಂದು ಆರೋಪಿಸಿದ್ದಾರೆ. ನಿಶಾ ಪೋಷಕರು ನೇರವಾಗಿ ಆಕೆಯ ಗಂಡ ಪ್ರದೀಪ್ ವಿರುದ್ಧ ಕೊಲೆಯ ಆರೋಪ ಮಾಡಿದ್ದಾರೆ. ನಿಶಾ ಸಾವು ಬಹಿರಂಗವಾಗುತ್ತಿದ್ದಂತೆ ನಿಶಾ ಪತಿ ಪ್ರದೀಪ್‌ ಹಾಗೂ ಅತ್ತೆ ಮಾವ ತಲೆ ಮರೆಸಿಕೊಂಡಿದ್ದಾರೆ.

ಬಿಳಿಕೆರೆತ ನಿಶಾ ಮೂರು ವರ್ಷಗಳ ಹಿಂದೆ ಪ್ರದೀಪ್‌ನನ್ನು ಮದುವೆಯಾಗಿದ್ದರು. ಮದುವೆ ವೇಳೆ 300 ಗ್ರಾಂ ಚಿನ್ನ ಹಾಗೂ ನಂತರ 6 ಲಕ್ಷ ಹಣವನ್ನು ಕೊಡಲಾಗಿತ್ತು. ಆದರೆ ಗಂಡನ ಮನೆಯವರು ಮತ್ತೆ ಹಣಕ್ಕಾಗಿ ಪೀಡಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.