ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಾಮಭಕ್ತರಿಂದ ತಾಮ್ರದ ಕಾಣಿಕೆ ಆಹ್ವಾನ
ಅಯೋಧ್ಯಾ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳು ಆರಂಭವಾಗಿವೆ. ಈ ಸಂಬಂಧ ರಾಮಮಂದಿರ ನಿರ್ಮಾಣಕ್ಕೆ ಜನರ ಕೊಡುಗೆಯೂ ಇರಲಿ ಎಂಬ ಕಾರಣಕ್ಕೆ ಒಂದೂವರೆ ಅಡಿ ಉದ್ದ, ಮೂರು ಮಿಲಿಮೀಟರ್ ದಪ್ಪ ಮತ್ತು 30 ಮಿಲಿಮೀಟರ್ ಅಗಲದ ತಾಮ್ರದ ಕಾಣಿಕೆ ನೀಡುವಂತೆ ಸಾರ್ವಜನಿಕರಿಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ. ಮಂದಿರವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಲಾಗುತ್ತಿದ್ದು, ಈಗಾಗಲೇ ಖ್ಯಾತ ಎಲ್ ಌಂಡ್ ಟಿ ಕಂಪನಿಗೆ ಶ್ರೀರಾಮಮಂದಿರ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಈ ಸಂಬಂಧ ಚೆನ್ನೈ ಐಐಟಿ ತಜ್ಞರು […]
ಅಯೋಧ್ಯಾ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ನಿರ್ಮಾಣ ಚಟುವಟಿಕೆಗಳು ಆರಂಭವಾಗಿವೆ. ಈ ಸಂಬಂಧ ರಾಮಮಂದಿರ ನಿರ್ಮಾಣಕ್ಕೆ ಜನರ ಕೊಡುಗೆಯೂ ಇರಲಿ ಎಂಬ ಕಾರಣಕ್ಕೆ ಒಂದೂವರೆ ಅಡಿ ಉದ್ದ, ಮೂರು ಮಿಲಿಮೀಟರ್ ದಪ್ಪ ಮತ್ತು 30 ಮಿಲಿಮೀಟರ್ ಅಗಲದ ತಾಮ್ರದ ಕಾಣಿಕೆ ನೀಡುವಂತೆ ಸಾರ್ವಜನಿಕರಿಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.
ಮಂದಿರವನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ಕಟ್ಟಲಾಗುತ್ತಿದ್ದು, ಈಗಾಗಲೇ ಖ್ಯಾತ ಎಲ್ ಌಂಡ್ ಟಿ ಕಂಪನಿಗೆ ಶ್ರೀರಾಮಮಂದಿರ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ. ಈ ಸಂಬಂಧ ಚೆನ್ನೈ ಐಐಟಿ ತಜ್ಞರು ಹಾಗೂ ರೂರ್ಕಿಯ ಇಂಜಿನಿಯರ್ ಗಳು ಮಣ್ಣಿನ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.
ಮಂದಿರವು ಭೂಕಂಪ, ಬಿರುಗಾಳಿ ಸೇರಿದಂತೆ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದರೂ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತೆ. ಮಂದಿರ ನಿರ್ಮಾಣಕ್ಕೆ ಒಟ್ಟು 36ರಿಂದ40 ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಟ್ರಸ್ಟ್ ಹೇಳಿದೆ.
ರಾಮ ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಸುವುದಿಲ್ಲ, ಅದರ ಬದಲು ಕೇವಲ ತಾಮ್ರವನ್ನು ಮಾತ್ರ ಬಳಸಲಾಗುವುದು. ಯಾಕಂದ್ರೆ ತಾಮ್ರದ ಕೊಡುಗೆಯು ದೇಶದ ಐಕ್ಯತೆ, ಒಗ್ಗಟ್ಟಿನ ಸಂಕೇತ ಆಗಿರಲಿದೆ. ತಾಮ್ರವನ್ನು ದಾನ ನೀಡುವವರು ಅದರ ಮೇಲೆ ತಮ್ಮ ಕುಟುಂಬದ ಹೆಸರು ಬರೆಸಿಕೊಡಬಹುದು ಎಂದು ರಾಮಮಂದಿರ ಟ್ರಸ್ಟ್ ಹೇಳಿದೆ.
ಮಂದಿರವನ್ನು ಭಾರತೀಯ ಪುರಾತನ ಸಂಸ್ಕೃತಿ, ಪರಂಪರೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗುವುದು. ಇದು ಸುಮಾರು ಒಂದು ಸಾವಿರ ವರ್ಷಗಳ ಕಾಲ ಬಾಳಲಿದೆ. ಮುಸ್ಲಿಂರು ಕೂಡಾ ಮಂದಿರ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಬಹುದು ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಟರ್ ತಿಳಿಸಿದೆ.
Published On - 7:31 pm, Thu, 20 August 20