Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ ಹೇಗೆ ಗೊತ್ತಾ?

ಹೈದರಾಬಾದ್: ಕನ್ನಡದ ಡಕೋಟ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಒಂದು ಪುಟ್ಟ ಇಲಿ ಸುಂದರನ್​ನ ಜೀವನದಲ್ಲಿ ಹೇಗೆ ಆಟ ಆಡಿದೆ ಎಂಬುವುದನ್ನು ನೋಡಿದ್ದೇವೆ. ಈಗ ಅದೇ ರೀತಿ ಇಲ್ಲೊಂದು ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ. ಗಣೇಶನ ವಾಹನ ಇಲಿ ಮಾಡಿದ ಚೇಷ್ಟೆಗೆ ಕಾರು ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 1 ಕೋಟಿ ನಷ್ಟವಾಗಿದೆ. ಇದೇ ವರ್ಷದ ಫೆಬ್ರವರಿ 8 ರಂದು ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿರುವ ಕಾರು ಸೇವಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾರುತಿ ನೆಕ್ಸಾ ಕಾರುಗಳ ಮಾರಾಟ ಮತ್ತು […]

ಪುಟ್ಟ ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ ಹೇಗೆ ಗೊತ್ತಾ?
Follow us
ಆಯೇಷಾ ಬಾನು
|

Updated on: Aug 21, 2020 | 7:53 AM

ಹೈದರಾಬಾದ್: ಕನ್ನಡದ ಡಕೋಟ ಎಕ್ಸ್​ಪ್ರೆಸ್ ಸಿನಿಮಾದಲ್ಲಿ ಒಂದು ಪುಟ್ಟ ಇಲಿ ಸುಂದರನ್​ನ ಜೀವನದಲ್ಲಿ ಹೇಗೆ ಆಟ ಆಡಿದೆ ಎಂಬುವುದನ್ನು ನೋಡಿದ್ದೇವೆ. ಈಗ ಅದೇ ರೀತಿ ಇಲ್ಲೊಂದು ಇಲಿ 1 ಕೋಟಿ ನಷ್ಟಕ್ಕೆ ಕಾರಣವಾಗಿದೆ. ಗಣೇಶನ ವಾಹನ ಇಲಿ ಮಾಡಿದ ಚೇಷ್ಟೆಗೆ ಕಾರು ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 1 ಕೋಟಿ ನಷ್ಟವಾಗಿದೆ.

ಇದೇ ವರ್ಷದ ಫೆಬ್ರವರಿ 8 ರಂದು ಹೈದರಾಬಾದ್‌ನ ಮುಶೀರಾಬಾದ್‌ನಲ್ಲಿರುವ ಕಾರು ಸೇವಾ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಮಾರುತಿ ನೆಕ್ಸಾ ಕಾರುಗಳ ಮಾರಾಟ ಮತ್ತು ಸೇವೆಗಳ ಬಗ್ಗೆ ವ್ಯವಹರಿಸುವ ಮಿತ್ರ ಮೋಟಾರ್ಸ್‌ನಲ್ಲಿ ಈ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಮೂರು ಕಾರುಗಳು ಸುಟ್ಟುಹೋಗಿದ್ದವು ಮತ್ತು 1 ಕೋಟಿ ರೂ. ನಷ್ಟವಾಗಿತ್ತು. ಆದರೆ ಘಟನೆಗೆ ಕಾರಣವೇನು ಎಂಬುವುದು ಯಾರಿಗೂ ತಿಳಿದಿರಲಿಲ್ಲ. ಈಗ ಆರು ತಿಂಗಳ ಬಳಿಕ ಬೆಂಕಿಗೆ ಕಾರಣವಾದದ್ದು ಅಂತಿಮವಾಗಿ ಬೆಳಕಿಗೆ ಬಂದಿದೆ.

ಕಂಪನಿಯ ಘಟನೆ ಸಂಭವಿಸಿದ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸಣ್ಣ ಇಲಿಯ ಚೇಷ್ಟೆಯಿಂದ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ. ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಪೊಲೀಸರು ಪ್ರಕರಣವನ್ನು ಮುಚ್ಚಿದ್ದರು, ಟ್ರೂತ್ ಲ್ಯಾಬ್ಸ್ ಎಂಬ ಖಾಸಗಿ ವಿಧಿವಿಜ್ಞಾನ ಸಂಸ್ಥೆ ಘಟನೆ ನಡೆದ ರಾತ್ರಿಯ ಸಿಸಿಟಿವಿ ಪರಿಶೀಲನೆ ನಡೆಸಿ ಬೆಂಕಿ ನಿಜವಾಗಿಯೂ ಹೇಗೆ ಹಬ್ಬತು ಎಂಬುದನ್ನು ಬಹಿರಂಗಪಡಿಸಿದೆ.

ಫೆಬ್ರವರಿ 7 ರಂದು ಉದ್ಯೋಗಿಯೊಬ್ಬರು ಬೆಳಿಗ್ಗೆ ಆರತಿ ಬೆಳಗಿ ಪೂಜೆ ಮಾಡಿದ್ದಾರೆ. ಹಾಗೂ ಕೋಣೆಯಲ್ಲಿ ಗಾಳಿ ಇಲ್ಲದ ಕಾರಣ, ದೀಪ ರಾತ್ರಿಯವರೆಗೆ ಬೆಳಗಿದೆ ಮತ್ತು ಆ ರಾತ್ರಿ 11:51 ರ ಸಮಯದಲ್ಲಿ ಇಲಿ ತನ್ನ ಚೇಷ್ಟೆ ಶುರು ಮಾಡಿದೆ. ಕೆಲವೇ ಸೆಕೆಂಡುಗಳ ನಂತರ, ಕ್ಯಾಮೆರಾ ಕಣ್ಣಿನಲ್ಲಿ ಕುರ್ಚಿಯ ಭಾಗದಲ್ಲಿ ಬೆಂಕಿ ಬೆಳಗಿಸುವ ದೃಶ್ಯ ಸೆರೆಯಾಗಿದೆ. 12.06ರ ಹೊತ್ತಿಗೆ ಬೆಂಕಿ ಎಲ್ಲೆಡೆ ಹಬ್ಬಲು ಶುರು ಮಾಡಿದೆ. ಈ ರೀತಿ ಪುಟ್ಟ ಇಲಿಯಿಂದ ಕಾರು ಸೇವಾ ಕಂಪನಿ ನಷ್ಟಕ್ಕೆ ಒಳಗಾಗಿದೆ.