ನಡು ರಸ್ತೆಯಲ್ಲಿ ಪುಂಡರಿಗೆ ಬಸ್ಕಿ ಹೊಡೆಸಿದ ಪೊಲೀಸರು.. ಎಲ್ಲಿ?
ಇಂದೋರ್: ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಪದ್ದತಿ ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಅಪರಾಧಿಗಳಿಗೆ ಅವರ ಅಡ್ಡಾದಲ್ಲೇ ಶಿಕ್ಷೆ ನೀಡಿದ್ದಾರೆ. ಹಾಗೂ ಅಲ್ಲಿನ ಜನರಿಗೆ ಅಪರಾಧಿಗಳು ಕ್ಷಮೆ ಕೇಳುವಂತೆ ಮಾಡಿದ್ದಾರೆ. ಅಪರಾಧ ಎಸಗಿದ ಇಬ್ಬರು ವ್ಯಕ್ತಿಗಳನ್ನು ನಡು ರಸ್ತೆಯಲ್ಲೇ ಕಿವಿ ಹಿಡಿದು ಬಸ್ಕಿ ಹೊಡೆಸಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ನೆರೆಹೊರೆಯವರು ತಮ್ಮ ಬಾಲ್ಕನಿಗಳಿಂದಲೇ ಚಪ್ಪಾಳೆ ತಟ್ಟಿ ಅಪರಾಧಿಗಳ ಬಸ್ಕಿ ನೋಡಿ ಎಂಜಾಯ್ ಮಾಡಿದ್ದಾರೆ. ಅಲ್ಲದೆ […]
ಇಂದೋರ್: ಅಪರಾಧಿಗಳನ್ನು ಬಂಧಿಸಿ ಶಿಕ್ಷೆ ನೀಡುವ ಪದ್ದತಿ ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರು ಅಪರಾಧಿಗಳಿಗೆ ಅವರ ಅಡ್ಡಾದಲ್ಲೇ ಶಿಕ್ಷೆ ನೀಡಿದ್ದಾರೆ. ಹಾಗೂ ಅಲ್ಲಿನ ಜನರಿಗೆ ಅಪರಾಧಿಗಳು ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಅಪರಾಧ ಎಸಗಿದ ಇಬ್ಬರು ವ್ಯಕ್ತಿಗಳನ್ನು ನಡು ರಸ್ತೆಯಲ್ಲೇ ಕಿವಿ ಹಿಡಿದು ಬಸ್ಕಿ ಹೊಡೆಸಿರುವ ಅಪರೂಪದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಗುರುವಾರ ಸಂಜೆ ನಡೆದಿದೆ. ಈ ವೇಳೆ ನೆರೆಹೊರೆಯವರು ತಮ್ಮ ಬಾಲ್ಕನಿಗಳಿಂದಲೇ ಚಪ್ಪಾಳೆ ತಟ್ಟಿ ಅಪರಾಧಿಗಳ ಬಸ್ಕಿ ನೋಡಿ ಎಂಜಾಯ್ ಮಾಡಿದ್ದಾರೆ.
ಅಲ್ಲದೆ ಇಬ್ಬರು ಅಪರಾಧಿಗಳು ಮಂಡಿಯೂರಿ ಏರಿಯಾದ ಜನರಿಗೆ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಈ ಇಬ್ಬರು ಈ ಏರಿಯಾದಲ್ಲಿ ಕುಖ್ಯಾತ ಅಪರಾಧಿಗಳಾಗಿದ್ದಾರೆ. ಇವರಿಬ್ಬರೂ ಕೆಲ ದಿನಗಳ ಹಿಂದೆ ಸ್ಥಳೀಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆಗೆ ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
#WATCH Madhya Pradesh: Police in Indore's Dwarkapuri made two criminals do sit-ups and apologise to people for their crimes. (20/08/20) pic.twitter.com/j1zBBSKgff
— ANI (@ANI) August 21, 2020