ಒಬ್ಬರಲ್ಲ ಇಬ್ಬರಲ್ಲ ಗಂಡ ಸೇರಿ ಬರೋಬ್ಬರಿ 139 ಜನರಿಂದ ಗ್ಯಾಂಗ್‌ರೇಪ್‌!

ಹೈದರಾಬಾದ್: ಆಕೆ ನೂರಾರು ಆಸೆ-ಕನಸುಗಳನ್ನ ಇಟ್ಕೊಂಡು ಮದ್ವೆ ಆಗಿದ್ಲು. ಆದ್ರೆ ಮೂರೇ ತಿಂಗಳಿಗೆ ಕನಸುಗಳೆಲ್ಲ ನುಚ್ಚು ನೂರಾಗಿದ್ವು. ತಾಳಿಕಟ್ಟಿದ ಗಂಡನೇ ಆಕೆಗೆ ನರಕ ತೋರಿಸಿದ್ದ. ಹೀಗಾಗಿ ಪತಿ ಸೇರಿದಂತೆ 139 ಜನರ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲಿಸಿದ್ದಾಳೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಗ್ರಾಮದ ಯುವತಿ ಅಪ್ಪ-ಅಮ್ಮನ ನಿರ್ಧಾರದಂತೆ ಮಿರ್ಯಾಲಗೂಡಾದ ಕೊಂಡರೆಡ್ಡಿ ರಮೇಶ್ ಎಂಬಾತನನ್ನ ಮದ್ವೆಯಾಗಿದ್ಲು. ಆದ್ರೆ ಮದ್ವೆಯಾಗಿದ್ದ 3 ತಿಂಗಳು ಯುವತಿ ಖುಷಿಯಾಗಿದ್ಲು. ತದನಂತ್ರ ಗಂಡ ನರಕ ತೋರಿಸೋಕೆ ಶುರು ಮಾಡಿದ್ನಂತೆ. ಆ ಬಳಿಕ […]

ಒಬ್ಬರಲ್ಲ ಇಬ್ಬರಲ್ಲ ಗಂಡ ಸೇರಿ ಬರೋಬ್ಬರಿ 139 ಜನರಿಂದ ಗ್ಯಾಂಗ್‌ರೇಪ್‌!
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on: Aug 22, 2020 | 7:10 AM

ಹೈದರಾಬಾದ್: ಆಕೆ ನೂರಾರು ಆಸೆ-ಕನಸುಗಳನ್ನ ಇಟ್ಕೊಂಡು ಮದ್ವೆ ಆಗಿದ್ಲು. ಆದ್ರೆ ಮೂರೇ ತಿಂಗಳಿಗೆ ಕನಸುಗಳೆಲ್ಲ ನುಚ್ಚು ನೂರಾಗಿದ್ವು. ತಾಳಿಕಟ್ಟಿದ ಗಂಡನೇ ಆಕೆಗೆ ನರಕ ತೋರಿಸಿದ್ದ. ಹೀಗಾಗಿ ಪತಿ ಸೇರಿದಂತೆ 139 ಜನರ ವಿರುದ್ಧ ಗ್ಯಾಂಗ್ ರೇಪ್ ಕೇಸ್ ದಾಖಲಿಸಿದ್ದಾಳೆ.

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಸೆತ್ತಿಪಲ್ಲೇಮ್ ಗ್ರಾಮದ ಯುವತಿ ಅಪ್ಪ-ಅಮ್ಮನ ನಿರ್ಧಾರದಂತೆ ಮಿರ್ಯಾಲಗೂಡಾದ ಕೊಂಡರೆಡ್ಡಿ ರಮೇಶ್ ಎಂಬಾತನನ್ನ ಮದ್ವೆಯಾಗಿದ್ಲು. ಆದ್ರೆ ಮದ್ವೆಯಾಗಿದ್ದ 3 ತಿಂಗಳು ಯುವತಿ ಖುಷಿಯಾಗಿದ್ಲು. ತದನಂತ್ರ ಗಂಡ ನರಕ ತೋರಿಸೋಕೆ ಶುರು ಮಾಡಿದ್ನಂತೆ. ಆ ಬಳಿಕ ನಡೆದಿದ್ದೆಲ್ಲ ಬೆಚ್ಚಿಬೀಳಿಸೋ ಘಟನೆ.

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಮೇಲೆ ಗ್ಯಾಂಗ್​​ರೇಪ್! ಹೌದು, ಇದು ನಂಬೋಕೆ ಕಷ್ಟ ಆದ್ರೂ ನಂಬಲೇಬೇಕಾದ ಸ್ಟೋರಿ. ಸ್ವತಃ ಕಟ್ಕೊಂಡ ಗಂಡನೇ ಸ್ನೇಹಿತರ ಜೊತೆ ಸೇರ್ಕೊಂಡು ಹೆಂಡ್ತಿ ಮೇಲೆ ಗ್ಯಾಂಗ್​ರೇಪ್ ಮಾಡಿದ್ದಾನೆ. ಬಲವಂತವಾಗಿ ಮದ್ಯ ಕುಡಿಸಿ, ಗಾಂಜಾ, ಡ್ರಗ್ಸ್ ತಿನ್ನಿಸಿ, ಕುಟುಂಬಸ್ಥರನ್ನ ಕೊಲೆ ಮಾಡೋದಾಗಿ ಬ್ಲ್ಯಾಕ್​ಮೇಲ್ ಮಾಡಿ, ಬರೋಬ್ಬರಿ 9 ತಿಂಗಳು ನಿರಂತರ ಅತ್ಯಾಚಾರ ನಡೆಸಲಾಗಿದೆ. ಅಷ್ಟೇ ಅಲ್ಲದೆ ಫೋಟೋ, ವಿಡಿಯೋ ತೆಗೆದು ಫೋರ್ನ್ ಸೈಟ್​ಗಳಿಗೆ ಅಪ್​ಲೋಡ್ ಮಾಡಿದ್ದಾರೆ. ಹೀಗಾಗಿ ಗಂಡನಿಂದ ದೂರ ಆಗಿರೋ ಯುವತಿ, ಸದ್ಯ ತನಗಾದ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದಿದ್ದಾಳೆ. 139 ಜನರ ವಿರುದ್ಧ ಗ್ಯಾಂಗ್​ರೇಪ್, ಕೊಲೆ ಬೆದರಿಕೆ, ಌಸಿಡ್ ಹಾಕೋ ಬೆದರಿಕೆ ಹಾಗೂ ಜೀವಭಯದ ಬಗ್ಗೆ ದೂರು ನೀಡಿದ್ದಾಳೆ. ಹೈದರಾಬಾದ್​ನ ಪಂಜಾಗುಟ್ಟಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಇನ್ನು ರೇಪ್ ವಿಡಿಯೋಗಳು ಈಗ್ಲೂ ಪೋರ್ನ್ ವೆಬ್​​ಸೈಟಲ್ಲಿ ಹರಿದಾಡ್ತಿವೆ. ಈಕೆಯ ಹೆಸ್ರಲ್ಲಿ ಫೇಸ್​ಬುಕ್ ಅಕೌಂಟ್, ಇನ್​ಸ್ಟಾಗ್ರಾಂ, ಜಿಮೇಲ್ ಅಕೌಂಟ್​ಗಳ ಮೂಲಕ ಸೆಕ್ಸ್ ದಂಧೆ ಮಾಡ್ತಿರೋದು ಗೊತ್ತಾಗಿದೆ. ಆಕೆಯ ಸ್ವಂತ ಅಕೌಂಟ್ ಕೂಡ ಹ್ಯಾಕ್ ಮಾಡಲಾಗಿದ್ದು, ಅಸಭ್ಯ ಮೆಸೇಜ್​ಗಳು ಬರ್ತಿವೆಯಂತೆ. ಇನ್ನು ಆರೋಪಿಗಳೆಲ್ಲ ಸಾಕಷ್ಟು ರಾಜಕೀಯ ಬೆಂಬಲವಿದ್ದು, ಮದ್ವೆ ಹೆಸ್ರಲ್ಲಿ ಗ್ರಾಮೀಣಭಾಗದ ಹೆಣ್ಣುಮಕ್ಕಳನ್ನ ವಂಚಿಸಿ ಕರೆತರ್ತಾರೆ. ಇವ್ರಿಂದ ಬ್ಲೂ ಫಿಲ್ಮ್ & ಸೆಕ್ಸ್ ರಾಕೆಟ್ ದಂಧೆ ನಡೆಸ್ತಾರೆ. ಇವ್ರಿಂದ ಜೀವಕ್ಕೆ ಅಪಾಯವಿದೆ. ನನಗೆ ನ್ಯಾಯ ಕೊಡಿಸಿ, ನನ್ನಂತೆ ಯಾವ ಹೆಣ್ಣುಮಕ್ಕಳಿಗೆ ಅನ್ಯಾಯವಾಗ್ಬಾರದು ಅಂತಾ ಯುವತಿ ಮನವಿ ಮಾಡಿಕೊಂಡಿದ್ದಾಳೆ.

ಸದ್ಯ ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ರು ಸತ್ಯಾಸತ್ಯಾತೆ ಪರಿಶೀಲಿಸಿ ತನಿಖೆ ನಡೆಸಲು ನಿರ್ಧರಿಸಿದ್ದಾರೆ. ಆದ್ರೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳಿಸ್ಬೇಕು. ಮಹಿಳೆಯರಿಗಾಗೋ ಅನ್ಯಾಯ ತಡೆಯಬೇಕು ಅನ್ನೋದೇ ಸಾರ್ವಜನಿಕರ ಒತ್ತಾಯವಾಗಿದೆ.

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ