ಯಪ್ಪಾ! ಗಲಭೆಕೋರರನ್ನ ಬಂಧಿಸಿದ್ದಕ್ಕೆ 93.9 ಕೋಟಿ ರೂ. ಪರಿಹಾರ ನೀಡಿದ ಪೊಲೀಸರು!

2010ರ G20 ಶೃಂಗ ಸಭೆ ವೇಳೆ ಪ್ರತಿಭಟನೆಕಾರರನ್ನು ಬಂಧಿಸುವಾಗ ನಿರಪರಾಧಿಗಳನ್ನೂ ಸಹ ವಶಕ್ಕೆ ಪಡೆದಿದ್ದಕ್ಕೆ ಪೊಲೀಸರು ಅವರಿಗೆ ಪರಿಹಾರ ಮೊತ್ತ ನೀಡಬೇಕಾಗಿರುವ ಘಟನೆ ಕೆನಡಾದ ಟೊರಾಂಟೊದಲ್ಲಿ ನಡೆದಿದೆ. 2010ರಲ್ಲಿ ಟೊರಾಂಟೊದಲ್ಲಿ ನಡೆದ G20 ಶೃಂಗ ಸಭೆ ವೇಳೆ ಹಲವಾರು ಸ್ಥಳೀಯರು ವಿವಿಧ ವಿಚಾರಗಳನ್ನ ಕುರಿತು ಶೃಂಗ ಸಭೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗುಂಪಿನಿಲ್ಲಿ ಕೆಲವು ಕಿಡಿಗೇಡಿಗಳು ಸಹ ಶಾಮೀಲಾಗಿ ಹಿಂಸಾಚಾರ ಮತ್ತು ಗಲಭೆಗೆ ಪ್ರಚೋದನೆ ನೀಡಿದ್ದರು. ಇದರ ಪರಿಣಾಮ ಉದ್ರಿಕ್ತಗೊಂಡ ಪ್ರತಿಭಟನಾಕಾರರನ್ನ ಹತೋಟಿಗೆ ತರಲು […]

ಯಪ್ಪಾ! ಗಲಭೆಕೋರರನ್ನ ಬಂಧಿಸಿದ್ದಕ್ಕೆ 93.9 ಕೋಟಿ ರೂ. ಪರಿಹಾರ ನೀಡಿದ ಪೊಲೀಸರು!
KUSHAL V

| Edited By: sadhu srinath

Aug 20, 2020 | 5:39 PM

2010ರ G20 ಶೃಂಗ ಸಭೆ ವೇಳೆ ಪ್ರತಿಭಟನೆಕಾರರನ್ನು ಬಂಧಿಸುವಾಗ ನಿರಪರಾಧಿಗಳನ್ನೂ ಸಹ ವಶಕ್ಕೆ ಪಡೆದಿದ್ದಕ್ಕೆ ಪೊಲೀಸರು ಅವರಿಗೆ ಪರಿಹಾರ ಮೊತ್ತ ನೀಡಬೇಕಾಗಿರುವ ಘಟನೆ ಕೆನಡಾದ ಟೊರಾಂಟೊದಲ್ಲಿ ನಡೆದಿದೆ.

2010ರಲ್ಲಿ ಟೊರಾಂಟೊದಲ್ಲಿ ನಡೆದ G20 ಶೃಂಗ ಸಭೆ ವೇಳೆ ಹಲವಾರು ಸ್ಥಳೀಯರು ವಿವಿಧ ವಿಚಾರಗಳನ್ನ ಕುರಿತು ಶೃಂಗ ಸಭೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗುಂಪಿನಿಲ್ಲಿ ಕೆಲವು ಕಿಡಿಗೇಡಿಗಳು ಸಹ ಶಾಮೀಲಾಗಿ ಹಿಂಸಾಚಾರ ಮತ್ತು ಗಲಭೆಗೆ ಪ್ರಚೋದನೆ ನೀಡಿದ್ದರು.

ಇದರ ಪರಿಣಾಮ ಉದ್ರಿಕ್ತಗೊಂಡ ಪ್ರತಿಭಟನಾಕಾರರನ್ನ ಹತೋಟಿಗೆ ತರಲು ಟೊರಾಂಟೊ ಪೊಲೀಸರು ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದ್ದರು. ಈ ವೇಳೆ ಅಲ್ಲೇ ನೆರೆದಿದ್ದ ಸುಮಾರು 1,100 ಸಾರ್ವಜನಿಕರನ್ನು ಸಹ ಗಲಭೆಕೋರರು ಎಂದು ಭಾವಿಸಿ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನು ಖಂಡಿಸಿ ಕೋರ್ಟ್​ ಮೆಟ್ಟೆಲೇರಿದ್ದ ಕೆಲವು ಬಂಧಿತರು ಪೊಲೀಸರಿಂದ ಪರಿಹಾರಕ್ಕಾಗಿ ಆಗ್ರಹಿಸಿದ್ದರು. ಘಟನೆ ಕುರಿತ ನಡೆಸಲಾದ ತನಿಖೆಯು ಸಹ ಅವರು ನಿರಪರಾಧಿಗಳೆಂದ ವರದಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಟೊರಾಂಟೊ ಪೊಲೀಸರು ಅವರನ್ನೆಲ್ಲಾ ಬಂಧಿಸಿದ್ದಕ್ಕೆ ಪರಿಹಾರ ನೀಡಲು ಮುಂದಾಗಿದೆ. ಕೇಸ್​ ಗೆದ್ದ ಸಾರ್ವಜನಿಕರಿಗೆ 93.9 ಕೋಟಿ ರೂಪಾಯಿ ಪರಿಹಾರ ಸಿಗಲಿದ್ದು ಅದರಲ್ಲಿ ಪ್ರತಿಯೊಬ್ಬರಿಗೆ 2.84 ಲಕ್ಷದಿಂದ ಹಿಡಿದು 15 ಲಕ್ಷ ರೂಪಾಯಿವರೆಗೂ ಸಿಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada