AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವರ ಮೇಲೆ ಸ್ಪುಟ್ನಿಕ್ V ಲಸಿಕೆ ಟ್ರಯಲ್ಸ್ ಮುಂದಿನವಾರದಿಂದ!

ರಷ್ಯಾದಲ್ಲಿ ತಯಾರಾಗಿರುವ ಕೊವಿಡ್-19 ಲಸಿಕೆಯ ಮಾನವರ ಮೇಲಿನ ಸಾಮೂಹಿಕ ಟ್ರಯಲ್ ಮುಂದಿನವಾರದಿಂದ ಆರಂಭವಾಗಲಿದೆ. ಲಸಿಕೆಯ ಪರೀಕ್ಷಣೆಯು ಸುಮಾರು 40,000ಕ್ಕಿಂತ ಜಾಸ್ತಿ ಜನರ ಮೇಲೆ ರಷ್ಯಾದಾದ್ಯಂತ ಹರಡಿರುವ 45 ಲ್ಯಾಬ್​ಗಳಲ್ಲಿ ನಡೆಯಲಿದೆ. ಟ್ರಯಲ್ಸ್ ನಂತರ ಲಭ್ಯವಾಗುವ ಫಲಿತಾಂಶಗಳನ್ನು ಒಂದು ಶೈಕ್ಷಣಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದೆಂದು ಈ ಲಸಿಕೆ ತಯಾರಿಸಿರುವ ಮಾಸ್ಕೊದ ಗಮಾಲಿಯಾ ರೀಸರ್ಚ್ ಇನ್​ಸ್ಟಿಟ್ಯೂಟ್​ನ ನಿರ್ದೇಶಕ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ. ಡಿಮಿಟ್ರಿವ್ ಹೇಳುವಂತೆ ಲಸಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗಿದೆ. ಭಾರತ, ಬ್ರೆಜಿಲ್, ಯುನೈಟೆಡ್ ಅರಬ್ ಎಮಿರೇಟ್ಸ್ […]

ಮಾನವರ ಮೇಲೆ ಸ್ಪುಟ್ನಿಕ್ V ಲಸಿಕೆ ಟ್ರಯಲ್ಸ್ ಮುಂದಿನವಾರದಿಂದ!
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 21, 2020 | 3:26 PM

Share

ರಷ್ಯಾದಲ್ಲಿ ತಯಾರಾಗಿರುವ ಕೊವಿಡ್-19 ಲಸಿಕೆಯ ಮಾನವರ ಮೇಲಿನ ಸಾಮೂಹಿಕ ಟ್ರಯಲ್ ಮುಂದಿನವಾರದಿಂದ ಆರಂಭವಾಗಲಿದೆ. ಲಸಿಕೆಯ ಪರೀಕ್ಷಣೆಯು ಸುಮಾರು 40,000ಕ್ಕಿಂತ ಜಾಸ್ತಿ ಜನರ ಮೇಲೆ ರಷ್ಯಾದಾದ್ಯಂತ ಹರಡಿರುವ 45 ಲ್ಯಾಬ್​ಗಳಲ್ಲಿ ನಡೆಯಲಿದೆ. ಟ್ರಯಲ್ಸ್ ನಂತರ ಲಭ್ಯವಾಗುವ ಫಲಿತಾಂಶಗಳನ್ನು ಒಂದು ಶೈಕ್ಷಣಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದೆಂದು ಈ ಲಸಿಕೆ ತಯಾರಿಸಿರುವ ಮಾಸ್ಕೊದ ಗಮಾಲಿಯಾ ರೀಸರ್ಚ್ ಇನ್​ಸ್ಟಿಟ್ಯೂಟ್​ನ ನಿರ್ದೇಶಕ ಕಿರಿಲ್ ಡಿಮಿಟ್ರಿವ್ ತಿಳಿಸಿದ್ದಾರೆ.

ಡಿಮಿಟ್ರಿವ್ ಹೇಳುವಂತೆ ಲಸಿಕೆಗೆ ಸಂಬಂಧಪಟ್ಟ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗಿದೆ. ಭಾರತ, ಬ್ರೆಜಿಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಸೌದಿ ಅರೇಬಿಯಾ ಸೇರಿದಂತೆ ಹಲವಾರು ದೇಶಗಳು ಲಸಿಕೆಯ ಟ್ರಯಲ್ಸ್​ನಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿವೆಯೆಂದು ಅವರು ಹೇಳಿದ್ದಾರೆ.

ಸ್ಪುಟ್ನಿಕ್ V ಎಂದು ಹೆಸರಿಡಲಾಗಿರುವ ಲಸಿಕೆಗೆ ಸಂಬಂಧಪಟ್ಟ ವೈದ್ಯಕೀಯ ಹಾಗೂ ಕಾನೂನು ಸಂಸ್ಥೆಗಳಿಂದ ಮಾನವರ ಮೇಲೆ ಪರೀಕ್ಷಣೆ ನಡೆಸಲು ಒಪ್ಪಿಗೆ ದೊರೆತಿದೆ. ಕೊವಿಡ್​ ಸೋಂಕಿನ ವಿರುದ್ಧ ಲಸಿಕೆ ತಯಾರು ಮಾಡಿದ ಪ್ರಪ್ರಥಮ ರಾಷ್ಟ್ರವೆಂಬ ಹೆಗ್ಗಳಿಕೆ ತನ್ನದಾಗಿಸಿಕೊಳ್ಳುವ ಸಮಯ ಹತ್ತಿರವಾಗಿದೆಯೆಂದು ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ.

ಆದರೆ, ಸ್ಪುಟ್ನಿಕ್ V ಲಸಿಕೆಯ ನೋಂದಣಿ ಪರೀಕ್ಷಣೆಯ ಅತಿ ದೊಡ್ಡ ಹಂತವೆಂದು ಕರೆಸಿಕೊಳ್ಳುವ ಮೂರನೇ ಹಂತ ಆರಂಭವಾಗುವ ಮೊದಲೇ ಆಗಿರುವುದು ಇತರ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವದ ಬೇರೆ ಬೇರೆ ರಾಷ್ರಗಳಲ್ಲಿ ಕನಿಷ್ಠ ನಾಲ್ಕು ಕೊವಿಡ್-19 ಲಸಿಕೆಗಳು ಮೂರನೇ ಹಂತದ ಟ್ರಯಲ್ಸ್​ನಲ್ಲಿವೆ.

ರಷ್ಯಾದ ವೈದ್ಯಕೀಯ ಸಂಸ್ಥೆಗಳಿಂದ ಈಗಾಗಲೇ ಸುರಕ್ಷಿತ ಹಾಗೂ ಪರಿಣಾಮಕಾರಿ ಎನಿಸಿಕೊಂಡಿರುವ ಸ್ಪುಟ್ನಿಕ್ V ಲಸಿಕೆಗಾಗಿ ಒಂದು ಬಿಲಿಯನ್ ಡೋಸ್​ಗಳ ಬೇಡಿಕೆ ಬಂದಿದೆಯೆಂದು ಡಿಮಿಟ್ರಿವ್ ಹೇಳುತ್ತಾರೆ. ರಷ್ಯಾ ಪ್ರತಿ ವರ್ಷ 500 ಮಿಲಿಯನ್ ಡೋಸ್​ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆಯಂತೆ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!