ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ. ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು. ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, […]

ಇನ್ನು ಯಾಕ ಬರಲಿಲ್ಲವ್ವಾ ನನ್ನ ಪತಿರಾಯಾ.. ‘ಗಂಡನ ಮನೆ’ ಎದುರು ಹೆಂಡತಿ ಧರಣಿ!
Edited By:

Updated on: Aug 13, 2020 | 12:55 PM

ಬಾಗಲಕೋಟೆ: ತವರು ಮನೆಗೆ ಹೋಗಿದ್ದ ತನ್ನನ್ನು ಮರಳಿ ಗಂಡ ತನ್ನ ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ, ಆತನ ನೆಯ ಎದುರು ಹೆಂಡತಿ ಧರಣಿ ನಡೆಸಿರುವ ಘಟನೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮುಪಗಾರ ಗಲ್ಲಿಯಲ್ಲಿ ನಡೆದಿದೆ.

ಅತ್ತೆ ಸೊಸೆ ಜಗಳದಿಂದ ಆರು ತಿಂಗಳ ಹಿಂದೆ ವಿಜಯಪುರ ಜಿಲ್ಲೆ ಗುಣಕಿಬೊಮ್ಮನಳ್ಳಿಯಲ್ಲಿ ತನ್ನ ತವರು ಮನೆ ಸೇರಿದ್ದ ವಿದ್ಯಾ ಶಿಂದೋಳಿಮಠ ಇದೀಗ ಮತ್ತೊಮ್ಮೆ ಗಂಡನ ಮನೆಗೆ ಬರಲು ಬಯಸಿದಳು.

ಅಂತೆಯೇ, ಪತಿ ಶ್ರೀಧರನ ಮನೆ ಬಳಿ ಬಂದಿಳಿದಳು. ಆದರೆ, ಹೆಂಡತಿ ಬರುವ ವಿಚಾರ ಗೊತ್ತಾಗಿದ್ದೇ ತಡ ಶ್ರೀಧರ ಬೀಗ ಹಾಕಿಕೊಂಡು ತನ್ನ ಕುಟುಂಬದವರೊಂದಿಗೆ ಅಲ್ಲಿಂದ ಎಸ್ಕೇಪ್​ ಆಗಿದ್ದಾನೆ ಎಂದು ತಿಳಿದುಬಂದಿದೆ.

ಹಾಗಾಗಿ, ಗಂಡನ ಮನೆ ಎದುರು ನನಗೆ ನ್ಯಾಯ ಬೇಕೆಂದು ವಿದ್ಯಾ, ಧರಣಿ ನಡೆಸಲು ಮುಂದಾದಳು. ಮನೆ ಎದುರು ಧರಣಿ‌‌ ನಡೆಸುತ್ತಿರುವ ಮಹಿಳೆ ಬೀಗ ಹಾಕಿಕೊಂಡು ಹೋಗಿರುವ ಪತಿ ಹಾಗೂ ಆತನ ಕುಟುಂಬದವರು ಮರಳುವವರೆಗೂ ಅಲ್ಲೇ ಇರಲು ನಿರ್ಧರಿಸಿದ್ದಾಳೆ. ಮಗಳು ಮತ್ತು ತಂದೆ ಸಮೇತ ಧರಣಿ ನಡೆಸುತ್ತಿರುವ ವಿದ್ಯಾ ಪತಿರಾಯ ಶ್ರೀಧರ ಬರೋವರೆಗೂ ಇಲ್ಲಿಂದ ಕದಲವುದಿಲ್ಲ ಎಂದು ಡಿಸೈಡ್​ ಮಾಡಿದ್ದಾಳೆ.