KG ಹಳ್ಳಿ- DJ ಹಳ್ಳಿ ಗಲಾಟೆ: ಕಾಂಗ್ರೆಸ್ ಪಕ್ಷಕ್ಕೆ ಡಬಲ್ ಹೊಡೆತ
ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಠಾಣೆಗಳ ಮೇಲೆ ದಾಳಿ ನಡೆಸಿದ ಪ್ರಕರಣವು ಇದೀಗ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ. ನಾವು ಮುಸ್ಲಿಮರ ಪರವಾಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತೋರಿಸುವ ಅನಿವಾರ್ಯ ಎದುರಾಗಿದೆ. ಜೊತೆಗೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೂ ಆಗ್ರಹಿಸುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ. ಹೀಗಾಗಿ, ಘಟನೆ ಬಗ್ಗೆ ಕಾಂಗ್ರೆಸ್ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಘಟನೆಯನ್ನ ಖಂಡಿಸುತ್ತಲೇ ಕಾಂಗ್ರೆಸ್ ನಾಯಕರು ಸಮಗ್ರ ತನಿಖೆಗೆ ಒತ್ತಾಯಿಸುತ್ತಿರುವ ಸನ್ನಿವೇಶ ಕಾಣಿಸುತ್ತಿದೆ. ಈ ನಡುವೆ ಘಟನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡಬಲ್ ಹೊಡೆತ […]

ಬೆಂಗಳೂರು: ಶಾಸಕರ ಮನೆಗೆ ಬೆಂಕಿ ಹಾಗೂ 2 ಠಾಣೆಗಳ ಮೇಲೆ ದಾಳಿ ನಡೆಸಿದ ಪ್ರಕರಣವು ಇದೀಗ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದೆ.
ನಾವು ಮುಸ್ಲಿಮರ ಪರವಾಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತೋರಿಸುವ ಅನಿವಾರ್ಯ ಎದುರಾಗಿದೆ. ಜೊತೆಗೆ, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೂ ಆಗ್ರಹಿಸುವ ಅನಿವಾರ್ಯತೆ ಕಾಂಗ್ರೆಸ್ಗೆ ಎದುರಾಗಿದೆ. ಹೀಗಾಗಿ, ಘಟನೆ ಬಗ್ಗೆ ಕಾಂಗ್ರೆಸ್ ಸೂಕ್ಷ್ಮವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಘಟನೆಯನ್ನ ಖಂಡಿಸುತ್ತಲೇ ಕಾಂಗ್ರೆಸ್ ನಾಯಕರು ಸಮಗ್ರ ತನಿಖೆಗೆ ಒತ್ತಾಯಿಸುತ್ತಿರುವ ಸನ್ನಿವೇಶ ಕಾಣಿಸುತ್ತಿದೆ.
ಈ ನಡುವೆ ಘಟನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡಬಲ್ ಹೊಡೆತ ಬಿದ್ದಿದೆ. ಒಂದೆಡೆ ಘಟನೆಯ ಬಗ್ಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ನೇರವಾಗಿ ಟೀಕಿಸುತ್ತಿದ್ದರೆ ಮತ್ತೊಂದೆಡೆ SDPIನಿಂದ ದುಷ್ಕರ್ಮಿಗಳ ಕೃತ್ಯಕ್ಕೆ ಸಮರ್ಥನೆ ದೊರಕುತ್ತಿದೆ. ದುಷ್ಕರ್ಮಿಗಳ ಕೃತ್ಯಕ್ಕಿಂತ SDPI ಪಕ್ಷವು ಪೊಲೀಸರ ನಿರ್ಲಕ್ಷ್ಯದ ಬಗ್ಗೆಯೇ ಎತ್ತಿ ಹೇಳ್ತಿದೆ.
ಪೊಲೀಸರು ವಿಳಂಬ ಮಾಡಿದ್ದರಿಂದಲೇ ಗಲಭೆ ಉಂಟಾಗಿದ್ದು. ಪೊಲೀಸರ ವಿರುದ್ಧ ಆರೋಪಿಸಿ SDPIನಿಂದ ಕೃತ್ಯಕ್ಕೆ ಸಮರ್ಥನೆ ಸಿಗುತ್ತಿದೆ. ದುಷ್ಕರ್ಮಿಗಳನ್ನು ಸಮರ್ಥಿಸಿಕೊಳ್ಳುವುದರಿಂದ ಮುಸ್ಲಿಮರ ಒಲವು SDPIನತ್ತ ತಿರುಗುವು ಸಾಧ್ಯತೆಯಿದೆ. ಸಣ್ಣ ಪ್ರಮಾಣದಲ್ಲಿ ಒಲವು ಗಿಟ್ಟಿಸಿದರೂ ಕಾಂಗ್ರೆಸ್ಗೆ ಹೊಡೆತ ಬೀಳುತ್ತೆ.



