ಬೆಳಗಾವಿ: ಲಾಕ್ಡೌನ್ 3 ಶುರುವಾಗುವುದಕ್ಕೂ ಮುನ್ನವೇ ಅಂದ್ರೆ ನಿನ್ನೆಯಿಂದ ರಾಜ್ಯದಲ್ಲಿ ಬರೀ ಕುಡುಕರದ್ದೇ ದರ್ಬಾರ್ ಆಗಿದೆ. ಯಾರೊಬ್ಬರೂ ಅವರ ವಿರುದ್ಧ ಸೊಲ್ಲು ಎತ್ತುತ್ತಿಲ್ಲ. ಅವರೂ ಅಷ್ಟೆ ರಾಜಾರೋಷವಾಗಿ ಎಣ್ಣೆ ಇಳಿಸುತ್ತಿದ್ದಾರೆ. ಆದ್ರೆ, ಇದೀಗ ಒಂದು ಕಡೆಯಾದರೂ ಇದಕ್ಕೆ ತಕ್ಕ ಶಾಸ್ತ್ರಿಯಾಗಿದೆ.
ರಾಯಬಾಗ ತಾಲೂಕಿನ ನಂದಿಕುರಲಿ ಗ್ರಾಮದಲ್ಲಿ ಮಹಿಳಾ ಮಣಿಗಳು ವೈನ್ ಶಾಪ್ ಬಂದ್ ಮಾಡಿಸಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇಂದು ಲಕ್ಷ್ಮೀ ವೈನ್ ಶಾಪ್ ತೆರೆಯಲಾಗಿತ್ತು. ಕೆಲ ಮಹಿಳೆಯರು ವೈನ್ ಶಾಪ್ಗೆ ನುಗ್ಗಿ ಮಾಲೀಕರಿಗೆ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ವೈನ್ ಶಾಪ್ ಬಂದ್ ಮಾಡಿಸಿದ ನಂತರ ಗ್ರಾಮದ ಮಹಿಳೆಯರು ಮನೆಗೆ ತೆರಳಿದರು. ಬೆಳಗ್ಗೆಯಿಂದ ಮದ್ಯಕ್ಕಾಗಿ ಕ್ಯೂನಲ್ಲಿ ನಿಂತುಕೊಂಡಿದ್ದ ಕುಡುಕರು ಮಹಿಳೆಯರಿಗೆ ಹಿಡಿಶಾಪ ಹಾಕುವಂತಾಯಿತು.