ಸಿದ್ದರಾಮಯ್ಯನವರ ಅಧಿಕೃತ ನಿವಾಸದ ಬಳಿ ಸೆಲ್ಫೀಗಾಗಿ ಮುಗಿಬಿದ್ದ ಮಹಿಳೆಯರು
ಗುರುವಾರ ಬೆಳಗ್ಗೆ ಬೆಂಗಳೂರಿನ ಅವರ ಅಧಿಕೃತ ನಿವಾಸದಲ್ಲಿ ನಡೆದ ಘಟನೆಯನ್ನೇ ನೋಡಿ. ಸಿದ್ದರಾಮಯ್ಯ ಮನೆಯಿಂದ ಹೊರಬೀಳುತ್ತಿದ್ದಂತೆಯೇ ಸುಮಾರು 40-50 ಮಹಿಳೆಯರು ಅವರನ್ನು ಸೆಲ್ಫೀಗಾಗಿ ಮುತ್ತಿಗೆ ಹಾಕುತ್ತಾರೆ.
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿನವರು ಸಿದ್ದರಾಮಯ್ಯನವರನ್ನು ಮಾಸ್ ಲೀಡರ್ ಅಂತ ಕರೆಯುತ್ತಾರೆ. ಅವರನ್ನು ಬೆಂಬಲಿಸುವವರಲ್ಲಿ ಮಹಿಳೆಯರ ಸಂಖ್ಯೆಯೇನೂ ಕಮ್ಮಿಯಿಲ್ಲ ಮಾರಾಯ್ರೆ. ಗುರುವಾರ ಬೆಳಗ್ಗೆ ಬೆಂಗಳೂರಿನ ಅವರ ಅಧಿಕೃತ ನಿವಾಸದಲ್ಲಿ ನಡೆದ ಘಟನೆಯನ್ನೇ ನೋಡಿ. ಅವರು ಮನೆಯಿಂದ ಹೊರಬೀಳುತ್ತಿದ್ದಂತೆಯೇ ಸುಮಾರು 40-50 ಮಹಿಳೆಯರು ಅವರನ್ನು ಸೆಲ್ಫೀಗಾಗಿ ಮುತ್ತಿಗೆ ಹಾಕುತ್ತಾರೆ. ಎಲ್ಲರಿಗೆ ಅವಕಾಶ ಸಿಗುವುದಿಲ್ಲವಾದರೂ ಸಿಕ್ಕವರು ಲೋಕ ಗೆದ್ದಂತೆ ಸಂಭ್ರಮಿಸುತ್ತಾರೆ. ಕೊನೆಗೆ ಅವರು ಎಲ್ಲರಿಗೂ ನಮಸ್ಕಾರ ಅಂತ ಹೇಳಿ ಸಿದ್ದರಾಮಯ್ಯ ತಮ್ಮ ಕಾರಲ್ಲಿ ಅಲ್ಲಿಂದ ಹೊರಡುತ್ತಾರೆ.