ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games)ರಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್‌ನ ಫೈನಲಿಸ್ಟ್‌ಗಳ ಚಿತ್ರಣ ಸ್ಪಷ್ಟವಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಗೇಮ್ಸ್‌ನ ಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಭಾರತ ತಂಡವು ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು 4 ರನ್‌ಗಳ ಅಂತರದಿಂದ ಸೋಲಿಸಿ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಜೊತೆಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಪದಕವನ್ನು ಖಚಿತಪಡಿಸಿತು. ಸ್ಮೃತಿ ಮಂಧಾನ (Smriti Mandhana) ಅವರ ಬಿರುಸಿನ ಅರ್ಧಶತಕದ ನಂತರ ಸ್ನೇಹ್ ರಾಣಾ ಮತ್ತು ದೀಪ್ತಿ ಶರ್ಮಾ ( Sneh Rana and Deepti Sharma) ಅವರ ಬಿಗಿಯಾದ ಬೌಲಿಂಗ್‌ನ ಬಲದಿಂದ ಭಾರತ ಈ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಭಾರತ ಕೂಡ ಇಂಗ್ಲೆಂಡ್ ಜೊತೆಗಿನ ಹಳೆಯ ಸೋಲಿನ ಖಾತೆಯನ್ನು ಸರಿಗಟ್ಟಿದೆ. 2017 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ, ಕೊನೆಯ ಓವರ್‌ನಲ್ಲಿ ಭಾರತವನ್ನು ಸೋಲಿಸಿದ್ದ ಇಂಗ್ಲೆಂಡ್, ಪಂದ್ಯವನ್ನು ಕೇವಲ 9 ರನ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಸೋಲು ಐದು ವರ್ಷಗಳ ಕಾಲ ಭಾರತ ತಂಡ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿತ್ತು, ಅದು ಈಗ ದೊಡ್ಡ ಪ್ರಮಾಣದಲ್ಲಿ ನೆರವೇರಿದೆ. ಶನಿವಾರ ರಾತ್ರಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಫಲಿತಾಂಶದಿಂದ ಟೀಂ ಇಂಡಿಯಾವನ್ನು ಯಾರು ಎದುರಿಸಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ.
FINALS, here we come ???#TeamIndia #GoForGlory pic.twitter.com/wSYHmlv3rb
— BCCI Women (@BCCIWomen) August 6, 2022
ಭಾರತದ ಇನ್ನಿಂಗ್ಸ್ ಹೀಗಿತ್ತು
ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್‌ಗೆ 164 ರನ್ ಗಳಿಸಿತು. ಭಾರತದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅತ್ಯುತ್ತಮ ಇನ್ನಿಂಗ್ಸ್ ಆಡಿ 62 ರನ್ ಗಳಿಸಿದರು. ಸ್ಮೃತಿ ಹೊರತಾಗಿ, ಟೀಂ ಇಂಡಿಯಾದಿಂದ ಕೊನೆಯ ಓವರ್‌ಗಳಲ್ಲಿ ಜೆಮಿಮಾ ರೋಡ್ರಿಗಸ್ ಬಿರುಸಿನ ಬ್ಯಾಟಿಂಗ್ ಮಾಡಿ ತಂಡವನ್ನು ಈ ಸ್ಕೋರ್‌ಗೆ ಕೊಂಡೊಯ್ದರು. ಇವರ ಹೊರತಾಗಿ ಯಾವುದೇ ಬ್ಯಾಟರ್ಗಳು ದೊಡ್ಡ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ ಸ್ಮೃತಿ, ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ದಾಖಲೆ ಬರೆದಿದ್ದಾರೆ. ಮಹಿಳಾ T20 ಕ್ರಿಕೆಟ್‌ನಲ್ಲಿ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಅರ್ಧಶತಕ ಗಳಿಸಿದ ವೇಗದ ಬ್ಯಾಟರ್ ಎನಿಸಿಕೊಂಡರು. ಸ್ಮೃತಿ ಅವರ ಇನ್ನಿಂಗ್ಸ್‌ನ ನೆರವಿನಿಂದ ಭಾರತ 7 ಓವರ್‌ಗಳಲ್ಲಿ 73 ರನ್ ಗಳಿಸಿತ್ತು, ಇದರಲ್ಲಿ ಶೆಫಾಲಿ ಕೊಡುಗೆ ಕೇವಲ 15 ರನ್. ಆದರೆ, 8 ಮತ್ತು 9ನೇ ಓವರ್‌ಗಳಲ್ಲಿ ಇಬ್ಬರೂ ಬ್ಯಾಟರ್ಗಳು ಔಟಾದರು, ಇದು ಭಾರತದ ವೇಗವನ್ನು ಕಡಿಮೆ ಮಾಡಿತು.
ಇಂಗ್ಲೆಂಡ್ ಕೂಡ ಪ್ರತಿರೋಧ ನೀಡಿತ್ತು
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ವೇಗದ ಆಟ ಆರಂಭಿಸಿತು. ಆರಂಭಿಕ ಜೋಡಿ ಸೋಫಿಯಾ ಡಂಕ್ಲಿ ಮತ್ತು ಡ್ಯಾನಿ ವ್ಯಾಟ್ 3 ಓವರ್‌ಗಳಲ್ಲಿ 28 ರನ್ ಗಳಿಸಿದ್ದರು. ಆದರೆ ಇಲ್ಲಿ ದೀಪ್ತಿ ಶರ್ಮಾ ಭಾರತಕ್ಕೆ ಮೊದಲ ಯಶಸ್ಸನ್ನು ನೀಡಿದರು ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ಡಂಕ್ಲಿಯನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡಿದರು. ಇದಾದ ನಂತರವೂ ಆಲಿಸ್ ಕ್ಯಾಪ್ಸಿ ಮತ್ತು ಡ್ಯಾನಿ ವ್ಯಾಟ್ ಜೊತೆಯಾಟ ಹೆಚ್ಚುತ್ತಲೇ ಇತ್ತು. ಆದರೆ ಈ ಇಡೀ ಪಂದ್ಯದಲ್ಲಿ ಭಾರತ ಕೂಡ ಫೀಲ್ಡಿಂಗ್ನಲ್ಲಿ ಇಂಗ್ಲೆಂಡ್ಗಿಂತ ಉತ್ತಮ ಪ್ರದರ್ಶನ ನೀಡಿದ್ದು ಇಲ್ಲಿಂದ ಶುರುವಾಯಿತು. ತಾನಿಯಾ ಭಾಟಿಯಾ ಅವರ ವೇಗದ ಎಸೆತದಲ್ಲಿ ಕ್ಯಾಪ್ಸಿ ರನೌಟ್ ಆಗಿದ್ದರಿಂದ ಭಾರತ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
ಶೀಘ್ರದಲ್ಲೇ ವ್ಯಾಟ್ ಅವರನ್ನು ಸ್ನೇಹ್ ರಾಣಾ ಬೌಲ್ಡ್ ಮಾಡಿದರು ಮತ್ತು ದೊಡ್ಡ ಹೊಡೆತ ನೀಡಿದರು. ಇದಾದ ನಂತರ ಆಂಗ್ಲ ನಾಯಕಿ ನೇಟ್ ಸೀವರ್ ಮತ್ತು ಸ್ಫೋಟಕ ಬ್ಯಾಟರ್ ಆಮಿ ಜೋನ್ಸ್ ನಡುವೆ ಅರ್ಧಶತಕದ ಜೊತೆಯಾಟ ನಡೆಯಿತು. ಆದರೆ ನಾಯಕಿ ಸೀವರ್ ರನ್‌ಗಳ ವೇಗವನ್ನು ಹೆಚ್ಚಿಸಲು ಸಾಧ್ಯವಾಗಲಿಲ್ಲ. ಭಾರತದ ಬಲಿಷ್ಠ ಫೀಲ್ಡಿಂಗ್ ಕೂಡ ಇದಕ್ಕೆ ಕಾರಣವಾಯಿತು. 18 ಮತ್ತು 19ನೇ ಓವರ್‌ಗಳಲ್ಲಿ ಭಾರತ ಜೋನ್ಸ್ ಮತ್ತು ಸಿವಾರ್ ಅವರನ್ನು ರನೌಟ್ ಮಾಡಿತು. ಇದರಿಂದಾಗಿ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 14 ರನ್‌ಗಳ ಅಗತ್ಯವಿತ್ತು. ಸ್ಪಿನ್ನರ್ ರಾಣಾ ಕೊನೆಯ ಓವರ್‌ನಲ್ಲಿ ವಿಕೆಟ್ ಪಡೆದು ಕೇವಲ 9 ರನ್ ನೀಡಿ ಭಾರತವನ್ನು ಫೈನಲ್‌ಗೆ ಕೊಂಡೊಯ್ದರು.
Published On - 6:44 pm, Sat, 6 August 22