ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಶನಿವಾರ ನಡೆಯಲಿದೆ. ಅಮೆರಿಕದ ಲಾಡರ್‌ಹಿಲ್‌ನಲ್ಲಿ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಯಾವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ನಾಯಕ ರೋಹಿತ್ ಶರ್ಮಾ ಮೂರನೇ ಟಿ20ಯಲ್ಲಿ ಗಾಯಗೊಂಡಿದ್ದರಿಂದ ಅವರ ಆಟದ ಬಗ್ಗೆಯೂ ಸಸ್ಪೆನ್ಸ್ ಉಳಿದಿದೆ.
ಮಾಧ್ಯಮಗಳ ವರದಿ ಪ್ರಕಾರ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ. ಈಗ ಅವರಿಗೆ ಬೆನ್ನು ನೋವು ಇಲ್ಲ. ಆದರೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ರೋಹಿತ್ ಶರ್ಮಾ ಜೊತೆ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ ಎಂಬುದು ಇಲ್ಲಿನ ಸುದ್ದಿ. ರೋಹಿತ್ ಶರ್ಮಾ 100 ಫಿಟ್ ಆಗಿದ್ದರೆ ಮಾತ್ರ ನಾಲ್ಕನೇ ಟಿ20ಯಲ್ಲಿ ಆಡಲಿದ್ದಾರೆ.
ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡಬಹುದು ಎಂಬ ವರದಿಗಳೂ ಇವೆ. ಈ ಆಟಗಾರ ಮೂರೂ ಪಂದ್ಯಗಳಲ್ಲಿ ಪ್ಲಾಪ್ ಆಗಿದ್ದು, ಈಗ ಅವರ ಜಾಗದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಕೊನೆಯ ಕ್ಷಣದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಟಿ20 ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಅಲ್ಲದೆ, ಭಾರತದ ವೇಗದ ಬೌಲರ್ ಹರ್ಷಲ್ ಪಟೇಲ್ ಕೂಡ ಫಿಟ್ ಆಗಿದ್ದು, ನಾಲ್ಕನೇ ಟಿ20ಯಲ್ಲಿ ಆಡುವ ಅವಕಾಶ ಪಡೆಯಬಹುದು. ಭುವನೇಶ್ವರ್ ಕುಮಾರ್ ವಿಶ್ರಾಂತಿ ಪಡೆಯಬಹುದು. ಪಕ್ಕೆಲುಬಿನ ಗಾಯದಿಂದಾಗಿ ಹರ್ಷಲ್ ಹೊರಗೆ ಕುಳಿತಿದ್ದರು. ಅಲ್ಲದೆ ಕುಲ್ದೀಪ್ ಯಾದವ್ಗೆ ಅವಕಾಶ ಸಿಗಬಹುದು.
ಭಾರತದ ಸಂಭಾವ್ಯ ಪ್ಲೇಯಿಂಗ್ XI - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಅರ್ಶ್ದೀಪ್, ಹರ್ಷಲ್ ಪಟೇಲ್ ಮತ್ತು ಕುಲ್ದೀಪ್ ಯಾದವ್.
Published On - 5:47 pm, Fri, 5 August 22