Team India: ಏಷ್ಯಾಕಪ್ ತಂಡದಲ್ಲಿ ಟೀಮ್ ಇಂಡಿಯಾದ 12 ಆಟಗಾರರು ಕನ್ಫರ್ಮ್
Asia Cup 2022: ಈ 12 ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ 3 ಸ್ಥಾನಗಳಲ್ಲಿ ಯಾರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.
Updated on:Aug 06, 2022 | 3:54 PM

ಆಗಸ್ಟ್ 27 ರಿಂದ ಶುರುವಾಗಲಿರುವ ಏಷ್ಯಾಕಪ್ಗಾಗಿ ಈಗಾಗಲೇ ಎಲ್ಲಾ ತಂಡಗಳು ಭರ್ಜರಿ ಸಿದ್ದತೆಗಳನ್ನು ಆರಂಭಿಸಿದೆ. ಅದರಲ್ಲೂ ಪಾಕಿಸ್ತಾನ್ ಏಷ್ಯಾಕಪ್ ತಂಡವನ್ನು ಈಗಾಗಲೇ ಘೋಷಿಸಿದೆ. ಇನ್ನು ಉಳಿದ ತಂಡಗಳಿಗೆ ಆಗಸ್ಟ್ 8 ರವರೆಗೆ ಗಡುವು ನೀಡಲಾಗಿದ್ದು, ಅದರೊಳಗೆ ತಂಡವನ್ನು ಘೋಷಿಸಬೇಕಾಗುತ್ತದೆ.

ಇತ್ತ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಬೆನ್ನಲ್ಲೇ ತಂಡವನ್ನು ಘೋಷಿಸುವುದು ಬಹುತೇಕ ಖಚಿತ. ಆದರೆ 15 ಸದಸ್ಯರ ಬಳಗದಲ್ಲಿ ಯಾರಿಗೆಲ್ಲಾ ಚಾನ್ಸ್ ನೀಡಲಾಗುತ್ತದೆ ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಪ್ರತಿಯೊಬ್ಬ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದು, ಹೀಗಾಗಿ ಯಾರನ್ನು ಉಳಿಸಿ ಯಾರನ್ನು ಕೈ ಬಿಡುವುದು ಎಂಬ ಚಿಂತೆಯಲ್ಲಿದೆ ಆಯ್ಕೆ ಸಮಿತಿ.

ಮತ್ತೊಂದೆಡೆ ಏಷ್ಯಾಕಪ್ ಮೂಲಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಇವರಿಬ್ಬರೂ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು. ಹಾಗಾಗಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲೇಬೇಕಾದ ಅನಿವಾರ್ಯತೆ ಆಯ್ಕೆದಾರರ ಮುಂದಿದೆ. ಅದರಂತೆ ಈಗಾಗಲೇ 12 ಸದಸ್ಯರ ಪಟ್ಟಿ ಸಿದ್ಧವಾಗಿದ್ದು, ಈ ಆಟಗಾರರು ಏಷ್ಯಾಕಪ್ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಅವರೆಂದರೆ...

ಹರ್ಷಲ್ ಪಟೇಲ್

ಭುವನೇಶ್ವರ್ ಕುಮಾರ್

ಜಸ್ಪ್ರೀತ್ ಬುಮ್ರಾ

ಯುಜುವೇಂದ್ರ ಚಹಲ್

ರವೀಂದ್ರ ಜಡೇಜಾ

ಹಾರ್ದಿಕ್ ಪಾಂಡ್ಯ

ದಿನೇಶ್ ಕಾರ್ತಿಕ್

ರಿಷಭ್ ಪಂತ್

ಸೂರ್ಯಕುಮಾರ್ ಯಾದವ್

ವಿರಾಟ್ ಕೊಹ್ಲಿ

ಕೆಎಲ್ ರಾಹುಲ್

ರೋಹಿತ್ ಶರ್ಮಾ (ನಾಯಕ)

ಈ 12 ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ 3 ಸ್ಥಾನಗಳಲ್ಲಿ ಯಾರಿಗೆ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.
Published On - 3:53 pm, Sat, 6 August 22
