CWG 2022: ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ಖಚಿತ; ಫೈನಲ್‌ಗೆ ಲಗ್ಗೆ ಇಟ್ಟ ಅನ್ಶು ಮಲಿಕ್
CWG 2022: ಭಾರತದ ಮಹಿಳಾ ಕುಸ್ತಿಪಟು ಅಂಶು ಮಲಿಕ್ 57 ಕೆಜಿ ತೂಕ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಈ ಮೂಲಕ ಪದಕ ಖಚಿತಪಡಿಸಿದ್ದಾರೆ.
ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ (Anshu Malik) 57 ಕೆಜಿ ತೂಕ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಈ ಮೂಲಕ ಪದಕ ಖಚಿತಪಡಿಸಿದ್ದಾರೆ. ಅನ್ಶು ಮುಂದೆ ಶ್ರೀಲಂಕಾದ ನೇತ್ಮಿ ಅಹಿಂಸಾ ಫೆರ್ನಾಂಡೋ ನಿಲ್ಲಲು ಸಾಧ್ಯವಾಗಲಿಲ್ಲ. ತಾಂತ್ರಿಕ ಪ್ರಾವೀಣ್ಯತೆಯ ಆಧಾರದ ಮೇಲೆ ಅನ್ಶು ಅವರನ್ನು ವಿಜೇತೆ ಎಂದು ಘೋಷಿಸಲಾಯಿತು. ಪುರುಷರ ವಿಭಾಗದಲ್ಲಿ ದೀಪಕ್ ಪುನಿಯಾ (Deepak Punia) ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ದೀಪಕ್ 86 ಕೆಜಿ ತೂಕ ವಿಭಾಗದಲ್ಲಿ ಕೆನಡಾದ ಮೂರ್ ಅವರನ್ನು 3-1 ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.
ಮೋಹಿತ್, ಬಜರಂಗ್ ಮತ್ತು ಸಾಕ್ಷಿ ಮೇಲೆ ಕಣ್ಣು
ಈಗ ಮೋಹಿತ್ ಗ್ರೆವಾಲ್ ಮತ್ತು ಬಜರುಂಗ್ ಪುನಿಯಾ ಮೇಲೆ ಕಣ್ಣು ಬಿದ್ದಿದೆ. ಇವರಿಬ್ಬರೂ ಸೆಮಿಫೈನಲ್ ತಲುಪಿದ್ದಾರೆ. ಮೋಹಿತ್ ಗ್ರೆವಾಲ್ ಅವರು ಸೈಪರಸ್‌ನ ಅಲೆಕ್ಸಿಯಸ್ ಅವರನ್ನು 10-1 ರಿಂದ ಸೋಲಿಸಿದರು. ಇದೀಗ 125 ಕೆಜಿ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ. ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ 62 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್‌ನ ಕೆಲ್ಸಿ ಬಾರ್ನ್ಸ್ ಅವರನ್ನು 10-0 ಅಂತರದಿಂದ ಸೋಲಿಸಿದರು. ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆಲ್ಲಲು ಸಾಕ್ಷಿ ತೆಗೆದುಕೊಂಡಿದ್ದು ಕೇವಲ 70 ಸೆಕೆಂಡುಗಳು. ಬಜರಂಗ್ ಅವರು ಜಾರ್ಜ್ ಆಂಥೋನಿ ಅವರನ್ನು 10-0 ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿದರು.
ಭಾರತದ ಸೂಪರ್ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಪಂದ್ಯವನ್ನು 3 ನಿಮಿಷಗಳಲ್ಲಿ ಗೆದ್ದರು. ಹ್ಯಾಂಗಿಂಗ್ ತಂತ್ರವನ್ನು ಬಳಸಿ ಎದುರಾಳಿಯನ್ನು ಆಖಾಡದಲ್ಲಿ ಕೆಡವಿದರು. ಈ ತಂತ್ರವನ್ನು ಇರಾನಿನ ತಂತ್ರ ಎಂದು ಕರೆಯಲಾಗುತ್ತದೆ. ಕುಸ್ತಿ ತಜ್ಞರ ಪ್ರಕಾರ, ಇರಾನ್‌ನಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ.ತಂತ್ರಜ್ಞಾನ ಏನೇ ಇರಲಿ, ಒಳ್ಳೆಯ ವಿಷಯವೆಂದರೆ ಬಜರಂಗ್ ಪೂನಿಯಾ ನಿರೀಕ್ಷೆಯಂತೆ ತನ್ನ ಮೊದಲ ಪಂದ್ಯವನ್ನು ಗೆದ್ದರು. ಈ ಮೂಲಕ ಭಾರತದ ಚಿನ್ನದ ಪದಕದ ಭರವಸೆ ಹಾಗೇ ಉಳಿದಿದೆ.
ದೀಪಕ್ ಕಮಾಲ್
ಬಜರಂಗ್ ಪುನಿಯಾ ಅವರಂತೆಯೇ, ದೀಪಕ್ ಪುನಿಯಾ ಕೂಡ ತಮ್ಮ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದರು. ಅವರು ತನ್ನ ಎದುರಾಳಿ ಕುಸ್ತಿಪಟುವನ್ನು ಫಿಟ್ ಬೆಟ್ ಹಾಕುವ ಮೂಲಕ ಸೋಲಿಸಿದರು. ದೀಪಕ್ ಪೂನಿಯಾ ತಮ್ಮ ಪಂದ್ಯವನ್ನು 10-0 ಅಂತರದಿಂದ ಗೆದ್ದರು.
Published On - 7:54 pm, Fri, 5 August 22