CWG 2022: ಮೈದಾನದಲ್ಲೇ ಪರಸ್ಪರ ಕುತ್ತಿಗೆ ಪಟ್ಟಿ ಹಿಡಿದು ಜಗಳಕ್ಕಿಳಿದ ಹಾಕಿ ಆಟಗಾರರು! ವಿಡಿಯೋ ನೋಡಿ

CWG 2022: ಪನೇಸರ್‌ಗೆ ರೆಡ್ ಕಾರ್ಡ್ ತೋರಿಸಿ ಪಂದ್ಯದಿಂದ ಹೊರ ಕಳುಹಿಸಲಾಯಿತು. ಗ್ರಿಫಿತ್ಸ್‌ಗೆ ಹಳದಿ ಕಾರ್ಡ್ ಕೂಡ ತೋರಿಸಲಾಯಿತು. ಗ್ರಿಫಿತ್ಸ್ ಮೊದಲು ಜರ್ಸಿಯನ್ನು ಹಿಡಿದರೆ, ಪನೇಸರ್ ಕುತ್ತಿಗೆ ಹಿಡಿದಿದ್ದರು.

CWG 2022: ಮೈದಾನದಲ್ಲೇ ಪರಸ್ಪರ ಕುತ್ತಿಗೆ ಪಟ್ಟಿ ಹಿಡಿದು ಜಗಳಕ್ಕಿಳಿದ ಹಾಕಿ ಆಟಗಾರರು! ವಿಡಿಯೋ ನೋಡಿ
Follow us
TV9 Web
| Updated By: ಪೃಥ್ವಿಶಂಕರ

Updated on: Aug 05, 2022 | 3:59 PM

ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022) ಭರದಿಂದ ಸಾಗುತ್ತಿದೆ. ಪಂದ್ಯಗಳು ಆರಂಭವಾಗಿ ಒಂದು ವಾರ ಕಳೆದಿದೆ. ಹಲವು ಕಾರ್ಯಕ್ರಮಗಳು ಅಂತಿಮ ಹಂತ ತಲುಪಿವೆ. ಹಾಕಿ ಸ್ಪರ್ಧೆಗಳೂ ಸೆಮಿ ಫೈನಲ್ ಹಂತ ತಲುಪಿದವು. ಕುಸ್ತಿ ಪಂದ್ಯಗಳು ಈಗಷ್ಟೇ ಪ್ರಾರಂಭವಾಗಿವೆ. ಆದರೆ ಇಲ್ಲಿ ಹಾಕಿ ಪಂದ್ಯದ ಮಧ್ಯೆ ಕುಸ್ತಿ ಪಂದ್ಯ ನಡೆದಿದ್ದು ಎಲ್ಲರ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಇಬ್ಬರೂ ಹಾಕಿ ಆಟಗಾರರು ವೃತ್ತಿಪರ ಕುಸ್ತಿಪಟುಗಳಂತೆಯೇ ಕಂಡುಬಂದರು. ಜಗಳ ವಿಕೋಪಕ್ಕೆ ತಿರುಗಿ ಒಬ್ಬರನೊಬ್ಬರು ಕುತ್ತಿಗೆ ಮತ್ತು ಜರ್ಸಿ ಹಿಡಿದು ಎಳೆದಾಡಿ, ಹೊಡೆದಾಡುವ ಹಂತಕ್ಕೆ ಹೋದರು. ಈ ಘಟನೆ ಗುರುವಾರ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಕೆನಡಾ ನಡುವೆ ನಡೆದಿದೆ. ಕೆನಡಾ ಈಗಾಗಲೇ ಟೂರ್ನಿಯಿಂದ ನಿರ್ಗಮಿಸಿದ್ದರೆ, ಇಂಗ್ಲೆಂಡ್‌ನ ಸೆಮಿಫೈನಲ್ ಸ್ಥಾನ ಖಚಿತವಾಗಿದೆ. ಆದರೆ, ಆಂಗ್ಲರ ತಂಡ ಆಕ್ರಮಣಕಾರಿ ಆಟವಾಡಿತು. ಎರಡನೇ ಕ್ವಾರ್ಟರ್‌ನ ಅಂತ್ಯಕ್ಕೆ ಅವರು ಕೆನಡಾ ವಿರುದ್ಧ 4-1 ಮುನ್ನಡೆ ಸಾಧಿಸಿದರು. ಆದರೆ, ಇದೇ ವೇಳೆ ಉಭಯ ತಂಡಗಳ ಆಟಗಾರರ ನಡುವೆ ಸಂಘರ್ಷದ ವಾತಾವರಣ ಉಂಟಾಯಿತು.

ಹೊಡೆದಾಟ ಆರಂಭ

ಇದನ್ನೂ ಓದಿ
Image
CWG 2022: 17 ಬಾರಿ ಸೋಲಿಸಿರುವ ಈ ಬಲಿಷ್ಠ ತಂಡ ಹರ್ಮನ್​ಪ್ರೀತ್ ಪಡೆಗೆ ಸೆಮಿಫೈನಲ್ ಎದುರಾಳಿ..!
Image
CWG 2022 Day 8 Schedule: ಕುಸ್ತಿ, ಟೇಬಲ್ ಟೆನ್ನಿಸ್​, ಬ್ಯಾಡ್ಮಿಂಟನ್; 8ನೇ ದಿನ ಭಾರತದ ಪದಕ ಭೇಟೆ ಹೇಗಿರಲಿದೆ?
Image
CWG 2022 Hockey: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು; ಸೆಮಿಫೈನಲ್​ ಪ್ರವೇಶಿಸಿದ ಭಾರತ ಪುರುಷ ಹಾಕಿ ತಂಡ

ಏತನ್ಮಧ್ಯೆ, ಪಂದ್ಯದಲ್ಲಿ ಇಂಗ್ಲೆಂಡ್‌ನ ಫಾರ್ವರ್ಡ್ ಆಟಗಾರ ಕೆನಡಾದ ಗೋಲ್ ಪೋಸ್ಟ್ ಮೇಲೆ ನಿರಂತರವಾಗಿ ದಾಳಿ ನಡೆಸಿದರು. ಮತ್ತೊಂದೆಡೆ, ಕೆನಡಾದ ಡಿಫೆಂಡರ್ ಅವರನ್ನು ತಡೆಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದರು. ಆಗ ಇಂಗ್ಲೆಂಡ್‌ನ ಕ್ರಿಸ್ಟೋಫರ್ ಗ್ರಿಫಿತ್ಸ್ ಮತ್ತು ಕೆನಡಾದ ಬಲರಾಜ್ ಪನೇಸರ್ ಮುಖಾಮುಖಿಯಾದರು. ಗ್ರಿಫಿತ್ಸ್ ಚೆಂಡನ್ನು ಸ್ವೀಕರಿಸಲು ಪ್ರಯತ್ನಿಸುತ್ತಿರುವಾಗ, ಪನೇಸರ್ ಅವನನ್ನು ತಡೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಪನೇಸರ್ ಹಾಕಿ ಸ್ಟಿಕ್ ಗ್ರಿಫಿತ್ಸ್ ಹೊಟ್ಟೆಯ ಹತ್ತಿರ ಬಂದಿತ್ತು. ಇದು ಆಂಗ್ಲ ಆಟಗಾರನ ಕೋಪಕ್ಕೆ ಕಾರಣವಾಯಿತು. ಕೂಡಲೇ ಎದುರಾಳಿ ಆಟಗಾರನ ಜರ್ಸಿಯನ್ನು ಹಿಡಿದ ಗ್ರಿಫಿತ್ಸ್ ಆತನನ್ನು ಎಳೆದಾಡಲು ಪ್ರಾರಂಭಿಸಿದರು.

ಪನೇಸರ್ ಕೂಡ ಕೋಪಗೊಂಡು ಗ್ರಿಫಿತ್ಸ್ ಕುತ್ತಿಗೆ ಭಾಗಕ್ಕೆ ಕೈಹಾಕಿದರು. ಇಬ್ಬರು ಪರಸ್ಪರ ತಳ್ಳಾಡಿದರು. ಇದೇ ವೇಳೆ ಉಭಯ ತಂಡಗಳ ಆಟಗಾರರು ಈ ಇಬ್ಬರು ಬಿಡಿಸಲು ಯತ್ನಿಸಿದರು. ಇದೇ ವೇಳೆ ಪಂದ್ಯದ ಮಧ್ಯೆ ಜಗಳಕ್ಕಿಳಿದ ಆಟಗಾರರ ಮೇಲೆ ರೆಫರಿ ಆಕ್ರೋಶ ವ್ಯಕ್ತಪಡಿಸಿದರು. ಪನೇಸರ್‌ಗೆ ರೆಡ್ ಕಾರ್ಡ್ ತೋರಿಸಿ ಪಂದ್ಯದಿಂದ ಹೊರ ಕಳುಹಿಸಲಾಯಿತು. ಗ್ರಿಫಿತ್ಸ್‌ಗೆ ಹಳದಿ ಕಾರ್ಡ್ ಕೂಡ ತೋರಿಸಲಾಯಿತು. ಗ್ರಿಫಿತ್ಸ್ ಮೊದಲು ಜರ್ಸಿಯನ್ನು ಹಿಡಿದರೆ, ಪನೇಸರ್ ಕುತ್ತಿಗೆ ಹಿಡಿದಿದ್ದರು. ಹೀಗಾಗಿ ರೆಫರಿ ರೆಡ್ ಕಾರ್ಡ್ ತೋರಿಸಿ ಹೊರಗೆ ಕಳುಹಿಸಿದ್ದರು. ಆದರೆ ಈ ಸಂಘರ್ಷದಿಂದಾಗಿ ಕೆನಡಾ ಎಲ್ಲ ರೀತಿಯಲ್ಲೂ ಸೋತಿದೆ. ಈಗಾಗಲೇ 1-4ರಿಂದ ಹಿನ್ನಡೆಯಲ್ಲಿದ್ದ ತಂಡ ಅಂತಿಮವಾಗಿ 2-11ರಿಂದ ಹೀನಾಯವಾಗಿ ಸೋತಿತು.

ಇನ್ನಷ್ಟು ಕಾಮನ್​ವೆಲ್ತ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ